ಮೈಸೂರು, ಡಿ.21, 2020 : (www.justkannada.in news) : ಮುಡಾ ನಿವೇಶನಗಳನ್ನು ಖರೀದಿಸುವವರಿಗೆ ಸ್ವತಃ, ನಗರಾಭಿವೃದ್ಧಿ ಪ್ರಾಧಿಕಾರವೇ ‘ ದೃಢೀಕರಣ ಪತ್ರ’ ನೀಡಲು ಮುಂದಾಗಿದೆ. ಹೊಸ ವರ್ಷದಿಂದಲೇ ಈ ಜನೋಪಯೋಗಿ ವ್ಯವಸ್ಥೆ ಜಾರಿಗೆ ಬರಲಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಈ ಸಂಬಂಧ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಸಾರ್ವಜನಿಕರು ಮುಡಾ ನಿವೇಶನಗಳನ್ನು ಖರೀದಿಸುವ ವೇಳೆ ಹಲವಾರು ವಂಚನೆ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿತ್ತು. ಹಂಚಿಕೆಯಾದವರೇ ಒಬ್ಬರಾಗಿದ್ದರೆ, ಮಾರಾಟಗಾರರೇ ಮತ್ತೊಬ್ಬರು, ದಾಖಲೆಗಳಲ್ಲಿ ಮಾತ್ರ ನಿವೇಶನವಿದ್ದು, ಭೌಧ್ದಿಕವಾಗಿ ಲಭ್ಯವಿಲ್ಲದ ನಿವೇಶಗಳು..ಹೀಗೆ ಹಲವು ವಿಧಗಳಲ್ಲಿ ವಂಚನೆ ನಡೆದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ, ಪ್ರಾಧಿಕಾರದ ಸ್ವತ್ತು ಹಾಗೂ ದಾಖಲೆಗಳ ನೈಜತೆ, ನಿಖರತೆ ಬಗ್ಗೆ ದೃಢೀಕರಿಸಲು ಪ್ರತ್ಯೇಕ ವಿಭಾಗ ಕಾರ್ಯರಂಭಿಸಲಿದೆ. ಆ ಮೂಲಕ ಪ್ರಾಧಿಕಾರವೇ ದಾಖಲೆಗಳನ್ನು ಪರಿಶೀಲಿಸಿ ಅದನ್ನು ದೃಢೀಕರಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದರು.
ಇದಕ್ಕಾಗಿ ಅಲ್ಪಮೊತ್ತದ ಶುಲ್ಕ ಪಾವತಿಸಬೇಕು. ನಿವೇಶನ ಅಥವಾ ಆಸ್ತಿ ಖರೀದಿಸುವ ವ್ಯಕ್ತಿಯ ಪೂರ್ಣ ಮಾಹಿತಿ ನೀಡಿದರೆ ವಾರದೊಳಗೆ ಧೃಢೀಕರಣ ಪತ್ರ ನೀಡಲಾಗುತ್ತದೆ. ಇದು 1985 ರ ನಂತರದ ಆಸ್ತಿಗಳಿಗೆ ಅನ್ವಯವಾಗುತ್ತದೆ. ಕಾರಣ ಈಗಾಗಲೇ ಈ ದಾಖಲೆಗಳ ಡಿಜಿಟಲೀಕರಣ ಮಾಡಿರುವುದು. ಇದಕ್ಕೂ ಹಿಂದಿನ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕಾಗಿದ್ದು, ಅದಕ್ಕೆ ಸಂಬಂಧಿಸಿದ ಆಸ್ತಿ ದೃಢೀಕರಣಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. 15 ದಿನದಿಂದ ಒಂದು ತಿಂಗಳೊಳಗೆ ಆಸ್ತಿ ದೃಢೀಕರಣ ಪತ್ರ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಆಶ್ವಾಸನೆ ನೀಡಿದರು.
ಅಕ್ರಮ ತಡೆಯಲು ಜಾಗೃತ ದಳ ರಚನೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮಗಳನ್ನು ತಡೆಗಟ್ಟಲು ಮುಡಾ ಮುಂದಾಗಿದೆ. ಈ ಸಲುವಾಗಿಯೇ ಜಾಗೃತದಳ ರಚಿಸಿದೆ. ಈ ದಳದಲ್ಲಿ ಓರ್ವ ಡಿವೈಎಸ್ಪಿ, ಇಬ್ಬರು ಆರಕ್ಷಕ ಉಪನಿರೀಕ್ಷಕರು, ಇಬ್ಬರು ಮುಖ್ಯ ಪೇದೆ, ಆರು ಪೊಲೀಸ್ ಪೇದೆ ಹಾಗೂ ಓರ್ವ ಭೂಮಾಪಕ ಒಳಗೊಂಡಿರುತ್ತಾರೆ. ಈ ಜಾಗೃತದಳ ರಚನೆ ಕುರಿತಾಗಿ ಗೃಹ ಸಚಿವರು ಹಾಗೂ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಸರ್ಕಾರದ ಅನುಮೋದನೆ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಎಚ್.ವಿ.ರಾಜೀವ್ ವಿಶ್ವಾಸ ವ್ಯಕ್ತಪಡಿಸಿದರು.
2 ಕೋಟಿ ರೂ. ವಂಚನೆ :
ಮುಡಾ ಹೆಸರಿನ ಲೆಟರ್ ಹೆಡ್ ಬಳಸಿ ವಿದ್ಯಾವಂತ ಜನರನ್ನು ವಂಚಿಸಿರುವ ಪ್ರಕರಣದ ಬಗೆಗೂ ಇದೇ ಸಂದರ್ಭದಲ್ಲಿ ಅಧ್ಯಕ್ಷ ರಾಜೀವ್ ಅವರು ಮಾಹಿತಿ ನೀಡಿದರು.
ಮುಡಾದಿಂದ ನಿವೇಶನ ಕೊಡಿಸುವುದಾಗಿ ಹಣ ವಸೂಲಿ ಮಾಡಲಾಗಿದೆ. ಸೈಟ್ ಆಸೆಗೆ ಹಣ ನೀಡಿ ಬಳಿಕ ಮೊಸ ಹೋದ ಅರಿವಾಗಿ ಪ್ರಾಧಿಕಾರದ ಮೊರೆ ಹೊಕ್ಕರು. ಇವರ ಪೈಕಿ ಐಟಿ, ಬಿಟಿ, ವಕೀಲರು, ಕೈಗಾರಿಕೋದ್ಯಮಿಗಳು ಸೇರಿರುವುದು ವಿಪರ್ಯಾಸ. ಈ ಪ್ರಕರಣದಲ್ಲಿ ಮೊಸಕ್ಕೊಳಗಾಗಿರು ಬಹುತೇಕರು ವಿದ್ಯಾವಂತರೇ ಎಂಬುದು ಗಮನಾರ್ಹ.
ಪ್ರತಿಷ್ಠಿತ ಬಡಾವಣೆಯ ಪ್ರತಿಷ್ಠಿತ ರೆಸ್ಟೋರೆಂಟ್ ಮಾಲೀಕನಿಂದ ವಂಚನೆ. ಕಳೆದ 15 ದಿನದ ಹಿಂದೆ ಬೆಳಕಿಗೆ ಬಂದ ಪ್ರಕರಣ. ಈ ಸಂಬಂಧ ದೂರು ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಮುಡಾ ಅಧ್ಯಕ್ಷ ರಾಜೀವ್ ಮಾಹಿತಿ ನೀಡಿದರು.
ಮುಡಾ ಆಯುಕ್ತ ನಟೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
00000
ENGLISH SUMMARY….
Good news for those who intend to buy MUDA property
Mysuru, Dec. 21, 2020 (www.justkannada.in): The Mysore Urban Development Authority has announced to provide ‘Certification’ for people who purchase MUDA sites from New year.
H.V. Rajeev, Chairman, MUDA addressed a press meet in Mysuru today. “We have noticed several cases of cheating and fraud in the sale of MUDA sites. The person who sells the site is not the real owner in a few cases, whereas in a few cases, the sites are only on paper and physically absent. Following an increase in such cases, we have formed a separate division to certify MUDA property and verify the documents. This division will verify whether the property is genuine or not and then certify them, to help the buyers. The buyers have to pay a nominal fee for this. If the buyer provides us all the details of the property that he wishes to buy, we will provide the certification copy after verification within one week. It applies only to properties from 1985 onwards. Properties that are registered before 1985 are being digitalized, and it takes some more time, for its completion” he explained.
Keywords: H.V. Rajeev/ MUDA/ sites/ property/ certification by MUDA/ good news
key words : Mysore-urban-development-authority-MUDA-rajeev-president