ಮೈಸೂರು,ಜ,5,2020(www.justkannada.in): ಪ್ರಧಾನ ಮಂತ್ರಿಗಳು ನೆರೆ ಪರಿಹಾರ ಘೋಷಣೆ ಮಾಡದೆ ಮುಂದೆ ಯಾವಗಾ ಕರ್ನಾಟಕಕ್ಕೆ ಬಂದರೂ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಕರ್ನಾಟಕವನ್ನು ಪ್ರಧಾನಿ ಮೋದಿ ಅವರು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಆರೋಪಿಸಿ ನಗರದ ರೈಲ್ವೆ ನಿಲ್ದಾಣದ ಮುಂಭಾಗ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರಧಾನಿ ಮೋದಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಜನರು ನೆರೆಯಿಂದ ತತ್ತರಿಸಿದ್ದಾರೆ. ಆದ್ರೇ ರಾಜ್ಯಕ್ಕೆ ಪ್ರಧಾನಿಗಳು ಬಂದು ಯಾವುದೇ ಅನುದಾನ ನೀಡದೇ ತೆರಳಿದ್ದಾರೆ. ಇದು ರಾಜ್ಯದ ಮೇಲೆ ಅವರಿಗೆ ಇರುವ ತಾತ್ಸಾರ ಮನೋಭಾವ ತೋರುತ್ತದೆ. ರಾಜ್ಯದ ಮುಖ್ಯಮಂತ್ರಿ ಬಹಿರಂಗವಾಗಿ ಬೇಡಿಕೆ ಇಟ್ಟರು ಅದರ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.. ರಾಜ್ಯದ ಸಂಸದರು ಕೋಮ ಸ್ಥಿತಿಯಲ್ಲಿ ಇದ್ದಾರೆ. ಯಾರು ಕೂಡ ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ಈಗ ಬಿಎಸ್ವೈ ಧ್ವನಿ ಕಡಿಮೆ ಆಗಿದೆ..
ಬಿಜೆಪಿಗೆ ಬಿಎಸ್ ಯಡಿಯೂರಪ್ಪ ಎಲ್ಲಾ . ಆದರೆ ಈಗ ಬಿಎಸ್ವೈ ಧ್ವನಿ ಕಡಿಮೆ ಆಗಿದೆ. ಮೊದಲ ಯಡಿಯೂರಪ್ಪ ಈಗಾ ಕಾಣಿಸುತ್ತಿಲ್ಲ. ಅವರಲ್ಲಿ ಈಗಾ ವೇಗ ಕಡಿಮೆಯಾಗಿದೆ. ಸಿದ್ದಗಂಗೆಯಲ್ಲು ಪ್ರಧಾನಿ ಬಂದಾಗ ರಾಜಕೀಯ ಭಾಷಣವನ್ನ ಮಾಡಿದ್ದಾರೆ. ಅವರು ಕೇವಲ ಮಾತುಗಾರು ಅಷ್ಟೆ. ಶ್ರೀಗಳಿಗೆ ಭಾರತರತ್ನ ನೀಡತ್ತಾರೆ ಎಂದುಕೊಂಡಿದ್ದರು. ಯಾರೂ ಈ ಬಗ್ಗೆ ಮಾತನಾಡಲಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಂದು ವಿಭೂತಿ, ರುದ್ರಾಕ್ಷಿ ಹಾಕಿಕೊಂಡರು ಆದರೆ ಭಾತರ ರತ್ನ ಕೊಡಲಿಲ್ಲ. ಈ ಬಗ್ಗೆ ಮುಖ್ಯ ಮಂತ್ರಿಗಳೂ ಹಾಗೂ ಇತರೆ ಸಚಿವರು ಒತ್ತಾಯಮಾಡಲಿಲ್ಲ. ರಾಜ್ಯದ ವಿರುದ್ಧ ಧೋರಣೆ ಸರಿಯಲ್ಲ. ಕರ್ನಾಟಕ ಸೂಕ್ತ ಪರಿಹಾಕ ನೀಡದಿದ್ದರೆ ಕರ್ನಾಟಕದ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಧಾನ ಮಂತ್ರಿಗಳು ಕರ್ನಾಟಕಕ್ಕೆ ಏತಕ್ಕೆ ಬಂದರು, ಕಾರಣ ಏನು.? ಬರುವ ಮುಂಚೆ ನಮ್ಮ ಬೇಡಿಕೆಯ ಬಗ್ಗೆ ಗಮನವಿಲ್ಲ. ಉತ್ತರ ಕರ್ನಾಟಕ ಪ್ರವಾಹದಿಂದ ಮುಳುಗಿದೆ. ಜನ ಜಾನುವಾರು ಮುಳುಗಿವೆ. ಪರಿಹಾರಕ್ಕೆ ಒತ್ತಾಯ ಮಾಡಿದ್ದರೂ ಅವರು ಗಮನಹರಿಸಲಿಲ್ಲ. 50 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದರು ಒಂದು ನಯಾ ಪೈಸೆ ಬಿಡುಗಡೆ ಮಾಡಲಿಲ್ಲ. ಕರ್ನಾಟಕ ಕಂಡರೆ ಪ್ರದಾನಿಗೆ ಭಯ ಇಲ್ಲ. ಮಾನ್ಯ ಪ್ರಧಾನಿಗಳಿಗೆ ತಮಿಳುನಾಡು, ಕೇರಳ ಕಂಡರೆ ಹೆಚ್ಚು ಪ್ರೀತಿ. ಭಾರತ ದೇಶದಲ್ಲಿ ಕರ್ನಾಟಕವೂ ಇದೆ ಎಂದು ಭಾವಿಸಬೇಕು ಎಂದು ಆಗ್ರಹಿಸಿದರು.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ವಿರೋಧ…
ರಾಮಜನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರ. ಇದನ್ನು ನಾವು ವಿರೋಧಿಸುತ್ತೆವೆ. ರಾಜ್ಯದ ಮೊದಲ ಮುಖ್ಯಮಂತ್ರಿ ಈ ಜಿಲ್ಲೆಗೆ ಹೆಸರು ಇಟ್ಟಿದ್ದಾರೆ..ಅದನ್ನು ಬದಲಿಸಲು ನಾವು ಬಿಡುವುದಿಲ್ಲ ಎಂದು ಹೇಳಿದರು.
ರಾಜ್ಯದ ವಾಹನ ಸವಾರರಿಗೆ ನೆರೆ ರಾಜ್ಯಗಳಲ್ಲಿ ಹಲ್ಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಇದೇ ರೀತಿ ಮುಂದುವರೆದರೆ ರಾಜ್ಯಕ್ಕೆ ಯಾವುದೇ ಬಾಡಿಗೆ ವಾಹನ ಬರದಂತೆ ಮಾಡಲಾಗುವುದು. ಇದು ಖಂಡನೀಯ ಕೃತ್ಯ. ಇದೇ ರೀತಿ ಆದ್ರೆ ಇದರ ವಿರುದ್ಧ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದರು.
ಟಿಪ್ಪು ಸುಲ್ತಾನ್ ರವರ ವಿಷಯವನ್ನು ಪಠ್ಯದಿಂದ ತಗೆದರೆ ಇತಿಹಾಸಕ್ಕೆ ಅಪಚಾರ ಮಾಡಿದಂತೆ. ಒಂದು ವೇಳೆ ತೆಗೆದಿದ್ದೇ ಆದಲ್ಲಿ ನಿಮ್ಮ ಸರ್ಕಾರ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು. ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
Key words: mysore- Vatal Nagaraj-outrage-aginst- PM modi-Karnataka bandh –flood rilief