ಸರಕಾರಕ್ಕೆ ಧೈರ್ಯ ಇದ್ರೆ ರೋಹಿಣಿ ಸಿಂಧೂರಿ ಅವರನ್ನ ಮತ್ತೆ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ : ವಾಟಾಳ್ ನಾಗರಾಜ್ ಸವಾಲ್ .

 

ಮೈಸೂರು, ಸೆ.08, 2021 : (www.justkannada.in news): ರಾಜ್ಯದ ಬಿಜೆಪಿ ಸರ್ಕಾರಕ್ಕೆ ಧೈರ್ಯ ಇದ್ರೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ಮತ್ತೆ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.

ಜೆಡಿಎಸ್ ಶಾಸಕ ಸಾರಾ ಮಹೇಶ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇಂದು ಮಾತನಾಡಿದ ವಾಟಾಳ್ ನಾಗರಾಜ್ ಅವರು ಹೇಳಿದಿಷ್ಟು…

ಜನಪ್ರತಿನಿಧಿಗಳು ಪ್ರಾಮಾಣಿಕರಾಗಿದ್ರೆ ಭೂಒತ್ತುವರಿ ತನಿಖೆಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನೇ ನೇಮಕ ಮಾಡಿ. ರೋಹಿಣಿ ಸಿಂಧೂರಿ ರಾಜ್ಯದ ದಕ್ಷ ಅಧಿಕಾರಿ. ದಕ್ಷರೇ ಇಲ್ಲದಿರೋ ಈ ಪರಿಸ್ಥಿತಿಯಲ್ಲಿ ದಕ್ಷ ಅಧಿಕಾರಿ ಬಂದ್ರೆ ಗೌರವ ನೀಡಬೇಕು. ಅದನ್ನು ಬಿಟ್ಟು ದಾಳಿ ಮಾಡುವುದು ಒಳ್ಳೆಯದಲ್ಲ. ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣ ಏನು.

ಈಜುಕೊಳ ನಿರ್ಮಾಣ ಮಾಡಿರೋದು ಸರ್ಕಾರಿ ಜಾಗದಲ್ಲಿ. ಅವರ ಸ್ವಂತ ಜಾಗದಲ್ಲಿ ಅಲ್ಲ. ಡಿಸಿ ವರ್ಗಾವಣೆ ಮಾಡ್ಸೊದು ಶಾಸಕರ ಕರ್ತವ್ಯ ಅಲ್ಲ. ಮತ್ತೆ ತನಿಖೆಗೆ ಆದೇಶ ಮಾಡಿರೋದು ಸ್ವಾಗತಾರ್ಹ. ಅಧಿಕಾರಿಗಳು ಒತ್ತಡಕ್ಕೆ ಬಗ್ಗದೇ ಮತ್ತೆ ಸರ್ವೆ ಮಾಡಿ.
ಅಲ್ಲದೇ ಅರಮೆನೆ ಸುತ್ತಲೂ ಆಸ್ತಿ ಲೂಟಿಯಾಗಿದೆ ಅದೂ ತನಿಖೆಯಾಗಬೇಕು. ಚಾಮುಂಡಿ ಬೆಟ್ಟದ ಸುತ್ತಲೂ ಒತ್ತುವರಿ ಆಗಿದೆ ಅದೂ ತನಿಖೆ ಆಗಬೇಕು. ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿಕೆ.

 

ಜೆಡಿಎಸ್ ಪ್ರತಿಭಟನೆ :

ಬಟ್ಟೆ ಬ್ಯಾಗ್ ಖರೀದಿಯಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಒತ್ತಾಯ. ಜಿ.ಪಂ ಮುಂಭಾಗ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ. ಕೆಡಿಪಿ ಸಭೆ ಆಗಮಿಸುತ್ತಿದ್ದ ವೇಳೆ ಸಚಿವ ಎಸ್.ಟಿ.ಸೋಮಶೇಖರ್‌ ಎದುರು ಪ್ರತಿಭಟನೆ. ಬಟ್ಟೆ ಬ್ಯಾಗ್ ಖರೀದಿ ಹಣ ಬಿಡುಗಡೆ ಮಾಡದಂತೆ ಒತ್ತಾಯ.

key words : Mysore-vatal.nagaraj-rohini-sindhoori-appoint-dc