‘ವಿಜಯಕರ್ನಾಟಕ’ ಮೈಸೂರು ಸ್ಥಾನಿಕ ಸಂಪಾದಕರಾಗಿ ಹಿರಿಯ ಪತ್ರಕರ್ತ ಚೀ.ಜ.ರಾಜೀವ ನೇಮಕ

 

ಮೈಸೂರು/ ಬೆಂಗಳೂರು. ನ.09, 2019 : ( www.justkannada.in news ) : ಹಿರಿಯ ಪತ್ರಕರ್ತ ಚೀ.ಜ.ರಾಜೀವ ಅವರನ್ನು ‘ ವಿಜಯಕರ್ನಾಟಕ ‘ ಪತ್ರಿಕೆಯ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕರನ್ನಾಗಿ ನೇಮಕ ಮಾಡಲಾಗಿದೆ.

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ಸಕ್ರೀಯವಾಗಿರುವ ಚೀ.ಜ.ರಾಜೀವ, ‘ ವಿಜಯ ಕರ್ನಾಟಕ ‘ ಪತ್ರಿಕೆ ಆರಂಭಗೊಂಡ ಮರು ವರ್ಷವೇ ಮೈಸೂರು ಮೂಲಕ ವಿಕ ಸುದ್ದಿಮನೆ ಪ್ರವೇಶಿಸಿದರು. ಬಳಿಕ ಸತತ 19 ವರ್ಷಗಳ ಸುದೀರ್ಘ ಸೇವೆಯನ್ನು ವಿಜಯಕರ್ನಾಟಕದಲ್ಲೇ ಸಲ್ಲಿಸಿದ್ದು ವಿಶೇಷ.

ಮೂಲತಃ ಚಿಕ್ಕಮಗಳೂರು ಜಿಲ್ಲೆ, ತರಿಕೆರೆ ತಾಲೊಕಿನ ಚೀರನಹಳ್ಳಿಯ ರಾಜೀವ, ಪತ್ರಿಕಾ ರಂಗದಲ್ಲಿ ಹಂತಹಂತವಾಗಿ ಮೇಲೇರಿದವರು. ಇವರು ಹಲವಾರು ಸಮಾಜ ಮುಖಿ ಸುದ್ದಿಗಳ ಮೂಲಕ ಪತ್ರಿಕೋಧ್ಯಮದಲ್ಲಿ ತನ್ನದೇ ಆದ ಚಾಪು ಮೂಡಿಸಿದವರು.
ಎರಡು ವರ್ಷಗಳ ಹಿಂದೆ ‘ ವಿಜಯಕರ್ನಾಟಕ’ ದ ಸಹಾಯಕ ಸಂಪಾದಕ ಹುದ್ದೆಗೇರಿ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ, ಸಂಸ್ಥೆ ರಾಜೀವ ಅವರನ್ನು ಮೈಸೂರು ಸ್ಥಾನಿಕ ಸಂಪಾದಕರನ್ನಾಗಿ ನೇಮಿಸಿದೆ. ಆಮೂಲಕ ಅವರಿಗೆ ಹೊಸ ಜವಾಬ್ದಾರಿ ನೀಡಿದೆ.

key words : mysore-vijaykarnataka-rajeeva-resident-editor-mysore-oppointed