”ಮೈಸೂರು ವಿವಿಯಿಂದ 6 ಗ್ರಾಮಗಳ ದತ್ತು ಸ್ವೀಕಾರ’’: ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್…!

ಮೈಸೂರು,ಜನವರಿ,04,2021(www.justkannada.in) : ಮೈಸೂರು ವಿವಿ ಉನ್ನತ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ ಉದ್ದೇಶದಿಂದ ಹನೂರು ತಾಲ್ಲೂಕಿನ 6 ಗ್ರಾಪಂ ಗಳಿಂದ 6 ಗ್ರಾಮಗಳನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jk-logo-justkannada-mysore

ಸೋಮವಾರ ಕ್ರಾಫರ್ಡ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಪಂನಿಂದ ‘’ಸೇಬಿನ ಕೋಟೆ’’, ಪಿ.ಜಿ.ಪಾಳ್ಯ ಗ್ರಾಪಂದಿಂದ ‘’ಹುಯಿಲ್ನತ್ತ’’, ಎಂ.ಎಂ.ಹಿಲ್ಸ್ ಗ್ರಾಪಂನಿಂದ ‘’ಒಡಕೆಹಳ್ಳ’’, ಪೊನ್ನಾಚಿ ಗ್ರಾಪಂನಿಂದ ‘’ರಾಮೇಗೌಡನ ಹಳ್ಳಿ’’, ಮಿಣ್ಯಂ ಗ್ರಾಪಂ ನಿಂದ ‘’ಸೂಳೆಕೋಬೆ’’, ಹುತ್ತೂರು ಗ್ರಾಪಂ ನಿಂದ ‘’ಗುಳ್ಳದ ಬಯಲು’’ ಗ್ರಾಮ ಸೇರಿದಂತೆ ಒಟ್ಟು 6 ಗ್ರಾಮವನ್ನು ದತ್ತು ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.50%-Discount-rate-Book sale-Mysore VV

ಮೈಸೂರು ವಿವಿಯು ಶತಮಾನೋತ್ಸವ ಆಚರಿಸಿಕೊಂಡಿದ್ದು, ವಿವಿ ವ್ಯಾಪ್ತಿಯಲ್ಲಿ ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ, ಹಲವು ಸಾಧನೆಗಳನ್ನು ಮಾಡಿರುವಂತಹ ಶಾಲೆಗಳನ್ನು ಗುರುತಿಸಿ ಮತ್ತಷ್ಟು ಬಲವರ್ಧನೆಗೊಳಿಸುವ ಹಾಗೂ ಗುಣಮಟ್ಟದ ಶಿಕ್ಷಣ ಹೆಚ್ಚಿಸುವ ಮೂಲಕ ಮಾದರಿ ಶಾಲೆಗಳನ್ನಾಗಿಸುವ ಉದ್ದೇಶದಿಂದ ಶಾಲೆಗಳನ್ನು ದತ್ತು ಸ್ವೀಕರಿಸಲಾಗಿದೆ ಎಂದು ಹೇಳಿದರು.

Mysore Vivi,Adoption,6 villages,Chancellor,Prof.G.Hemant Kumar ...!

ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಉಪಸ್ಥಿತರಿದ್ದರು.

ENGLISH SUMMARY….

‘UoM adopts 6 villages’: VC Prof. G. Hemanth Kumar
Mysuru, Jan. 04, 2021 (www.justkannada.in): Prof. G. Hemanth Kumar, Vice-Chancellor of the University of Mysore, today informed that the University has adopted 6 villages, in six gram panchayat limits in Hanur Taluk, under the ‘Unnata Bharata Abhiyan’ rural development programme.
Speaking to the press persons at Crawford Hall on Monday he said that the University has adopted six villages ‘Sebina Kote’ Village in Lokkanahalli Gram Panchayat limits of Hanur Taluk, ‘Huyilnatta’ Village in P.G. Palya Gram Panchayat limits, ‘Odakehalli’ Village in M.M. Hills Gram Panchayat limits, ‘Ramegowdana Halli’ Village in Ponnachi Gram Panchayat, ‘Soolekobe’ Village in Minyam Gram Panchayat, and ‘Gullada Bayalu’ in Hutturu Gram Panchayat limits.Mysore Vivi,Adoption,6 villages,Chancellor,Prof.G.Hemant Kumar ...!
“The University of Mysore has celebrated its centenary. Schools that have a history of 100 years and those which have made significant achievements have been identified and have been adopted with a view of strengthening them further and making them model schools by providing all necessary support to improve the quality of education,” he explained.
Prof. R. Shivappa, Registrar, UoM, Prof. N.M. Talawar, Director, Broadcasting Department, and Prof. S. Shivarajappa, Director, Archaeological Research Institute participated in the press meet.
Keywords: University of Mysore/ six villages adopted/ rural development/ Unnata Bharatha Abhiyan

key words : Mysore Vivi-Adoption-6 villages-Chancellor-Prof.G.Hemant Kumar …!