ಮೈಸೂರು,ಫೆಬ್ರವರಿ,13,2021(www.justkannada.in) : ಮೈಸೂರು ವಿವಿಯು ಸಮುದಾಯ ರೇಡಿಯೋ ಕೇಂದ್ರವನ್ನು ಹೊಂದಿರುವ ಮೊದಲ ವಿವಿಯಾಗಿದೆ. ವಿಶ್ವ ರೇಡಿಯೋ ದಿನದಂದು ಲೋಗೋ ಬಿಡುಗಡೆಯಾಗಿರುವುದು ಸಂತೋಷವನ್ನುಂಟು ಮಾಡಿದೆ. ವಿವಿಯಲ್ಲಿ ರೇಡಿಯೋ ಚಾಲನೆಯಿಂದಾಗಿ ನ್ಯಾಕ್ ನಲ್ಲಿ 5 ನಂಬರ್ ದೊರೆಯಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿಯ “ರೇಡಿಯೋ ಮಾನಸ” 89.6MHz ಕನಸುಗಳ ದಿಟ್ಟ ಹೆಜ್ಜೆ ಲೋಗೋ” ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸರ್ಕಾರವು ದೇಶದ ಎಲ್ಲಾ ವಿವಿಗಳಿಗೆ ನೈಸರ್ಗಿಕ, ತುರ್ತು ಸಂದರ್ಭಗಳಲ್ಲಿ ತಮ್ಮದೇ ಸಮುದಾಯ ರೇಡಿಯೋ ಹೊಂದಬೇಕೆಂದು ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾವು ಮುಂದಿದ್ದೇವೆ. ರೇಡಿಯೊ ಸ್ಟೇಷನ್ ಉತ್ತಮವಾಗಿ ಬೆಳೆದು ವಿದ್ಯಾರ್ಥಿಗಳು, ಬೋಧಕವರ್ಗ, ಸಾರ್ವಜನಿಕ ಸಂಸ್ಥೆಗಳನ್ನು ಒಳಗೊಂಡಂತೆ ವಿವಿಧ ಕಾರ್ಯಕ್ರಮಗಳ ಮೂಲಕ ವಿಚಾರಗಳನ್ನು ತಿಳಿಸುವ ಕಾರ್ಯವಾಗಲಿದೆ ಎಂದರು.
ರೇಡಿಯೋ ಜ್ಞಾನ ಸಂಪಾದನೆಗೆ ಹಾಗೂ ಜ್ಞಾನ ವಿಸ್ತರಣೆಗೆ ಸಹಕಾರಿ
ರೇಡಿಯೋ ಜ್ಞಾನ ಸಂಪಾದನೆಗೆ ಹಾಗೂ ಜ್ಞಾನ ವಿಸ್ತರಣೆಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿವಿಯನ್ನು ಸಮುದಾಯಕ್ಕೆ ಮತ್ತು ಮೈಸೂರು ಸುತ್ತಮುತ್ತಲಿನ ಜನರ ಹತ್ತಿರಕ್ಕೆ ತಂದ ಈ ದಿನ ವಿಶೇಷವಾಗಿದೆ ಎಂದರು.
ಇಂದು ವಿವಿಗಳಲ್ಲಿ ರೇಡಿಯೋ ಆರಂಭವು ತಂತ್ರಜ್ಞಾನದ ಬೆಳವಣಿಗೆಗೆ ಸಾಕ್ಷಿಯಾಗಿದೆ. ರೇಡಿಯೋ ಮಾನಸ ವಿದ್ಯಾರ್ಥಿಗಳ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ. ಉದ್ಯೋಗ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲಿ ಎಂದು ಸಲಹೆ ನೀಡಿದರು.
ರೇಡಿಯೋ ಆರಂಭದ ಕಾರ್ಯವು ಮೂರು ವರ್ಷಗಳ ಸತತ ಪ್ರಯತ್ನವಾಗಿದೆ. ಶಿಕ್ಷಣ ಸಂಸ್ಥೆಯ ಕೋಟಾ ಅಡಿಯಲ್ಲಿ ಅರ್ಜಿ ಸಲ್ಲಿಸಿ ಅತ್ಯಂತ ಹಳೆಯ ಮತ್ತು ಬ್ರಾಂಡ್ ವಿವಿಗಳಲ್ಲಿ ಒಂದಾಗಿರುವುದರಿಂದ ಅನುಮೋದನೆ ಪಡೆಯಲು ಸಾಧ್ಯವಾಯಿತು ಎಂದು ವಿವರಿಸಿದರು.
ಮೈಸೂರು ವಿವಿಯ ಕ್ಯಾಂಪಸ್ ಅನ್ನು ಗಮನದಲ್ಲಿಟ್ಟುಕೊಂಡು ರೇಡಿಯೋ ಸ್ಟೇಷನ್ ಗೆ ರೇಡಿಯೊ ಮಾನಸ ಎಂದು ಹೆಸರಿಡಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದು ಸಹಕಾರಿಯಾಗಲಿದ್ದು, ಕೊರೊನಾದಂತಹ ಸಂದರ್ಭದಲ್ಲಿ ಮಾಹಿತಿಯ ರವಾನೆಗೆ ಪೂರಕವಾಗಲಿದೆ ಎಂದು ತಿಳಿಸಿದರು.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ವಿವಿಯಲ್ಲಿ ರೇಡಿಯೊ ಆರಂಭವು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕಲಿಯುವುದಕ್ಕೆ ಹೆಚ್ಚು ಸಹಕಾರಿ. ವಿವಿಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಬೋಧಕರು ರೇಡಿಯೋ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿವಿ ರೇಡಿಯೋ ಸ್ಟೇಷನ್ ರೇಡಿಯೋ ಮಾನಸ ಸಂಯೋಜಕಿ ಪ್ರೊ.ಎಂ.ಎಸ್.ಸಪ್ನಾ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ರೇಡಿಯೋ ಉತ್ತಮ ವೇದಿಕೆಯಾಗಿದ್ದು, ವಿವಿಯ ಕಾರ್ಯಕ್ರಮಗಳನ್ನು ಹೆಚ್ಚಿನ ಜನರಿಗೆ ತಲುಪಿಸುವುದಕ್ಕೆ ಸಾಧ್ಯವಾಗಲಿದೆ ಎಂದು ರೇಡಿಯೋ ಆರಂಭದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಆರ್.ಶಿವಪ್ಪ, ಪಿಎಂಇಬಿ ನಿರ್ದೇಶಕ ಪ್ರೊ.ಎನ್.ಕೆ.ಲೋಕನಾಥ್, ವಿವಿ ಹಣಕಾಸು ಅಧಿಕಾರಿ ಟಿ.ಎಸ್.ಡಾ.ದೇವರಾಜ್, ಇತರರು ಉಪಸ್ಥಿತರಿದ್ದರು.
ENGLISH SUMMARY…
“University of Mysore is the only University having its community radio. I am very happy for releasing the Community Radio Logo on World Radio Day. Because of the Community Radio our University will get 5 points,” opined Prof. G. Hemanth Kumar, Vice-Chancellor, University of Mysore.
He addressed the gathering after releasing the logo of ‘Radio Manasa’ 89.6 MHz of the University of Mysore, at a program held at the Manasa Gangotri Vignana Bhavana.
“The government has appealed all the universities to have a community radio to face natural calamities and emergencies. We are the first in this regard. I wish this radio station will make good progress and extend useful services through programs involving students, faculty, and public institutions,” he said.
Prof. Niranjan Vanalli, Head, Journalism and Mass Communications in his address said the commencement of the Community Radio station will be helpful for the journalism students to enhance their practical learning.
Prof. M.S. Sapna, Convener, University of Mysore Community Station Radio expressed her view that Community Radio is a good platform for the students and the faculty and it will help in reaching out the programs of the university to more people.
Prof. R. Shivappa, Registrar, UoM, Prof. N.K. Loknath, PMEB Director, T.S. Dr. Devraj, Finance Officer, UoM, and others were present.
key words : Mysore Vivi-Community-Radio station-First Vivi-Chancellor-Prof.G.Hemant Kumar