ಮೈಸೂರು,ಅಕ್ಟೊಂಬರ್,02,2020(www.justkannada.in) : ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ‘’ಮಹರ್ಷಿ ವಾಲ್ಮೀಕಿ – ಮಹರ್ಷಿ ವ್ಯಾಸ ಅಧ್ಯಯನ ಪೀಠ’’ ಆರಂಭಿಸಲು ಮುಂದಾಗಿದೆ.ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಭಾರತೀಯ ಸನಾತನ ಪರಂಪರೆಯಲ್ಲಿ ಮಹರ್ಷಿ ವ್ಯಾಸರನ್ನು ಆದಿಗುರು ಎಂತಲೂ, ಮಹರ್ಷಿ ವಾಲ್ಮೀಕಿಯವರನ್ನು ಆದಿಕವಿ ಎಂತಲೂ ಕರೆದಿದ್ದೇವೆ. ಇವರು ರಚಿಸಿದ ಮಹಾಭಾರತ-ರಾಮಾಯಣ ಶ್ರೇಷ್ಠ ಐತಿಹಾಸಿಕ ಮಹಾ ಕಾವ್ಯಗಳು ಹಾಗೂ ಇತಿಹಾಸ ಮಾರ್ಗದರ್ಶಿ ಗ್ರಂಥಗಳಾಗಿರುತ್ತವೆ.
ಈ ಇಬ್ಬರು ಶ್ರೇಷ್ಠ ಮಹರ್ಷಿಗಳ ವಿಚಾರ ಆಧ್ಯಯನಕ್ಕಾಗಿ ಹಾಗೂ ಸಂಶೋಧನಾ ಕಾರ್ಯಕ್ಕೆ ಸಹಾಯಕವಾಗಲು, ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಾತ್ಮಕ ಆಸಕ್ತಿ ಹಾಗೂ ಅಭಿರುಚಿ ಬೆಳಸುವ ಜೊತೆಗೆ ಉನ್ನತ ಅಧ್ಯಯನವನ್ನು ಈ ಇಬ್ಬರು ಮಹರ್ಷಿಗಳ ಬಗ್ಗೆ ಹಾಗೂ ಇವರು ರಚಿಸಿರುವ ಗ್ರಂಥಗಳ ತಾತ್ವಿಕ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಸದುದ್ದೇಶದಿಂದ ವ್ಯಾಸ-ವಾಲ್ಮೀಕಿ ಅಧ್ಯಯನ ಪೀಠವನ್ನು ಮೈಸೂರು. ವಿ.ವಿಯಿಂದ ಸ್ಥಾಪಿಸಲು ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ‘ಜಸ್ಟ್ ಕನ್ನಡ’ ಗೆ ತಿಳಿಸಿದರು.
key words : Mysore VV-Syndicate-Approved -Launch-‘Vasavalmeeki-Peetha’