ಇವರ್ಯಾರು ಅರಮನೆಯಲ್ಲಿಲ್ಲ : ಆದರೂ ‘’ಚಿನ್ನದ ರಾಣಿಯರು’’

ಮೈಸೂರು,ಅಕ್ಟೋಬರ್,19,2020(www.justkannada.in) : ಮೈಸೂರು ವಿಶ್ವವಿದ್ಯಾನಿಲಯ 100ನೇ ಘಟಿಕೋತ್ಸವದಲ್ಲಿ ಆರ್.ರೂಪಿಣಿ (11 ಚಿನ್ನದ ಪದಕ, 2 ನಗದು ಬಹುಮಾನ), ಆರ್.ಧನಲಕ್ಷ್ಮೀ(9 ಚಿನ್ನದ ಪದಕ, 4 ನಗದು ಬಹುಮಾನ), ಎಂ.ಜೆ.ಶಾಲಿನಿ (7ಚಿನ್ನದ ಪದಕ, 3 ನಗದು ಬಹುಮಾನ) ಹೆಚ್ಚು ಚಿನ್ನದ ಪದಕ ಹಾಗೂ ನಗದು ಬಹುಮಾನ ತಮ್ಮದಾಗಿಸಿಕೊಂಡರು.jk-logo-justkannada-logo

ಸೋಮವಾರ ಕ್ರಾಫರ್ಡ್ ಹಾಲ್ ನಲ್ಲಿ ನಡೆದ 100ನೇ ಘಟಿಕೋತ್ಸವದಲ್ಲಿ  ಎಂ.ಎಸ್ಸಿ.ರಸಾಯನಶಾಸ್ತ್ರದಲ್ಲಿ ಆರ್.ರೂಪಿಣಿ (11 ಚಿನ್ನದ ಪದಕ, 2 ನಗದು ಬಹುಮಾನ), ಎಂ.ಎ.ಅರ್ಥಶಾಸ್ತ್ರದಲ್ಲಿ ಆರ್.ಧನಲಕ್ಷ್ಮೀ(9 ಚಿನ್ನದ ಪದಕ, 4 ನಗದು ಬಹುಮಾನ),  ಎಂ.ಎಸ್ಸಿ.ಸಸ್ಯಶಾಸ್ತ್ರದಲ್ಲಿ ಎಂ.ಜೆ.ಶಾಲಿನಿ (7ಚಿನ್ನದ ಪದಕ, 3 ನಗದು ಬಹುಮಾನ) ಹೆಚ್ಚಿನ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದುಕೊಂಡು ಸಂಭ್ರಮಿಸಿದರು.

mysore vv-They-are-not-in-palace-Yet-the-gold-queens

11 ಚಿನ್ನದ ಪದಕ ವಿಜೇತೆ ಆರ್.ರೂಪಿಣಿ ಮನದಾಳದ ಮಾತು

ಬಾಡಿಗೆ ಮನೆಯಲ್ಲಿದ್ದರೂ ನನ್ನ ಪೋಷಕರು ನನ್ನ ಓದಿಗೆ ಅಪಾರ ಬೆಂಬಲ ನೀಡಿದ್ದಾರೆ. ತಮ್ಮ ಬದುಕ ನನಗಾಗಿ ತ್ಯಾಗ ಮಾಡಿ ಈ ಸ್ಥಾನ ನೀಡಿದ್ದಾರೆ. ಪೋಷಕರಷ್ಟೇ, ಉಪನ್ಯಾಸಕರ ಸಹಕಾರವು ನನ್ನ ಗೆಲುವಿಗೆ ಕಾರಣ. ಹೀಗಾಗಿ, ಈ ಗೆಲುವು ಅವರಿಗೆ ಅರ್ಪಿಸುವೆ. ಪ್ರಸ್ತುತ ಗೋಪಾಲಸ್ವಾಮಿ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಪಿಎಚ್.ಡಿ ಮಾಡಬೇಕು, ಮೈಸೂರು ವಿವಿಯಲ್ಲಿಯೇ ಉಪನ್ಯಾಸಕಿಯಾಗಬೇಕು ಎಂಬ ಕನಸಿದೆ ಎಂದು ಆರ್.ರೂಪಿಣಿ ಗೆಲುವಿನ ನಗೆಬೀರಿದರು.

9 ಚಿನ್ನದ ಪದಕ ವಿಜೇತೆ ಆರ್.ಧನಲಕ್ಷ್ಮೀ ಮನದಾಳದ ಮಾತು

ಮರಿಮಲ್ಲಪ್ಪ ಕಾಲೇಜಿನಲ್ಲಿ ಪದವಿ, ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. 9 ಚಿನ್ನದ ಪದಕ ಗಳಿಸಿರುವುದು ಮುಂದಿನ ದೊಡ್ಡ ಸಾಧನೆಗೆ ಮೊದಲ ಮೆಟ್ಟಿಲು ಎನಿಸುತ್ತಿದೆ ಎಂದು ಸಂತೋಷವ್ಯಕ್ತಪಡಿಸಿದರು.

ಅರ್ಥಶಾಸ್ತ್ರ ವಿಷಯದಲ್ಲಿ ಯುಪಿಎಸ್ಸಿ ಸಿದ್ಧತೆ ನಡೆಸುತ್ತಿದ್ದೇನೆ. ಓದುವುದನ್ನು ಗಂಭೀರವಾಗಿ ಪರಿಗಣಿಸಿದ್ದೆ. ಶ್ರಮಕ್ಕೆ ತಕ್ಕ ಪ್ರತಿಫಲ ಎನಿಸುತ್ತಿದೆ. ಪೋಷಕರ ಸಹಕಾರ ಅಪಾರವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

7 ಚಿನ್ನದ ಪದಕ ವಿಜೇತೆ ಎಂ.ಜೆ.ಶಾಲಿನಿ ಮನದಾಳದ ಮಾತು

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಪುಟ್ಟ ಗ್ರಾಮ ನನ್ನದು. ಅಪ್ಪ ಜಯಶಿವಮೂರ್ತಿ ಅಡಿಕೆ, ಭತ್ತ ಬೆಳೆಗಾರರು. ನನ್ನ ಓದಿಗೆ ಅವರೇ ಸ್ಪೂರ್ತಿ. ಹೀಗಾಗಿ, ಸಸ್ಯಶಾಸ್ತ್ರವನ್ನು ಆಯ್ಕೆಮಾಡಿಕೊಂಡೆ. ಮಂಡ್ಯದಲ್ಲಿ ಸರಕಾರಿ ಮಹಿಳಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸದೊಂದಿಗೆ ಪಿಎಚ್. ಡಿ ಮಾಡುತ್ತಿದ್ದೇನೆ. ಚಿನ್ನದ ಪದಕ ನಿರೀಕ್ಷೆಯಿರಲಿಲ್ಲ. 7 ಚಿನ್ನದ ಪದಕ ಗಳಿಸಿರುವುದು ಬಹಳ ಸಂತೋಷವನ್ನುಂಟು ಮಾಡಿದೆ. ಒಬ್ಬಳೆ ಮಗಳು ಗೋಲ್ಡ್ ಮೆಡಲಿಸ್ಟ್ ಎಂದು ಮನೆಯವರಿಗೆ ತುಂಬಾ ಖುಷಿಯಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.

key words : mysore vv-They-are-not-in-palace-Yet-the-gold-queens