ಮೈಸೂರು,ಫೆಬ್ರವರಿ,24,2021(www.justkannada.in) : ಮೈಸೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು(ನ್ಯಾಕ್) ನೀಡುವ 4 ಗ್ರೇಡ್ ಗಳಲ್ಲಿ 3.47 ಗ್ರೇಡ್ ಗಳಿಸಿದ್ದು, ರಾಜ್ಯದಲ್ಲಿಯೇ ಹೆಚ್ಚು ಗ್ರೇಡ್ ಪಡೆದ ವಿವಿಯಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ಮಾನಸಗಂಗೋತ್ರಿಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಅಭಿ ಶಿಕ್ಷಣ ಮತ್ತು ಪರಿಚಯಾತ್ಮಕ ಸಮಾರಂಭ”ವನ್ನು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು.
ಮೂರು, ನಾಲ್ಕು ತಿಂಗಳಲ್ಲಿ ನ್ಯಾಕ್ ಪರೀಕ್ಷೆ
ಬಳಿಕ ಮಾತನಾಡಿದ ಅವರು, ಪ್ರತಿ ಐದು ವರ್ಷಕ್ಕೊಮ್ಮೆ ವಿವಿಗೂ ಕೇಂದ್ರ ಸರ್ಕಾರವು ನ್ಯಾಕ್ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ಮೈಸೂರು ವಿವಿ 4 ಗ್ರೇಡ್ ಗೆ 3.47 ಸ್ಥಾನವನ್ನು ಪಡೆದುಕೊಂಡಿದೆ. ವಿವಿಯ ಶೈಕ್ಷಣಿಕ ಹಾಗೂ ಇತರೆ ವಿಷಯಗಳ ಗುಣಮಟ್ಟದ ಆಧಾರದ ಮೇಲೆ ನ್ಯಾಕ್ ಗ್ರೇಡ್ ನೀಡುತ್ತದೆ. ಮಾರ್ಚ್ 1ಕ್ಕೆ ನ್ಯಾಕ್ ಪರೀಕ್ಷೆಗೆ ಅರ್ಜಿ ಹಾಕಲಿದ್ದು, ಮೂರು, ನಾಲ್ಕು ತಿಂಗಳಲ್ಲಿ ನ್ಯಾಕ್ ಪರೀಕ್ಷೆ ನಡೆಯಲಿದೆ ಎಂದರು.
ರಾಜ್ಯದ ಮೊದಲ ವಿವಿ ಮೈಸೂರು ವಿವಿ
ರಾಜ್ಯದ ಮೊದಲ ವಿವಿಯಾದ ಮೈಸೂರು ವಿವಿ 104 ವರ್ಷಗಳನ್ನು ಪೂರೈಸಿದ್ದು, ಇದು 105ನೇ ಬ್ಯಾಚ್ ಆಗಿದೆ. ಈಗಾಗಲೇ, ಮೈಸೂರು ವಿವಿಯಲ್ಲಿ ಅಧ್ಯಯನ ಮಾಡಿದ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅವರ ಸಾಲಿನಲ್ಲಿ ನೀವು ಸೇರಬೇಕು ಎಂದು ಹೇಳಿದರು.
ಸ್ನಾತಕೋತ್ತರ ಅಧ್ಯಯನಕ್ಕಾಗಿ 18 ಸಾವಿರ ಮಂದಿ ಅರ್ಜಿ
ಮೈಸೂರು ವಿವಿಗೆ ನಾನು 25ನೇ ಕುಲಪತಿಯಾಗಿದ್ದು, ಕುವೆಂಪು ಸೇರಿದಂತೆ ಉಳಿದ 24 ಕುಲಪತಿಗಳು ವಿವಿಯ ಅಭಿವೃದ್ಧಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನಕ್ಕಾಗಿ 18 ಸಾವಿರ ಮಂದಿ ಅರ್ಜಿ ಸಲ್ಲಿಸಿದರು. ಇದರಲ್ಲಿ 4 ಸಾವಿರ ಮಂದಿ ಮಾತ್ರವೇ ಆಯ್ಕೆಯಾಗಿದ್ದು, ನೀವು ನಿಮ್ಮ ಕನಸುಗಳ ಈಡೇರಿಸಿಕೊಳ್ಳುವ ಹಾದಿಯಲ್ಲಿ ಉತ್ತಮವಾಗಿ ಸಾಗುತ್ತಿದ್ದೀರಿ ಎಂದು ಶುಭ ಹಾರೈಸಿದರು.
ವಿವಿಯಲ್ಲಿ ವಿದ್ಯಾರ್ಥಿಗಳ ಅನುಕೂಲದ ದೃಷ್ಠಿಯಿಂದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಒದಗಿಸಿಕೊಡುವ ಉದ್ದೇಶದಿಂದ ಕೆರಿಯರ್ ಹಬ್ ಕಾರ್ಯಕ್ರಮ ರೂಪಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ದೇಶದಲ್ಲಿಯೇ ಮೂರು ಭಾರತ ರತ್ನಗಳನ್ನು ನೀಡಿದ ಕೀರ್ತಿ ಮೈಸೂರು ವಿವಿಗೆ
ಮೈಸೂರು ವಿವಿ ಆರಂಭಕ್ಕೆ ಕಾರಣಕರ್ತರಾದವರಲ್ಲಿ ಒಬ್ಬರಾದ ವಿಶ್ವೇಶ್ವರಯ್ಯ, ವಿವಿಯಲ್ಲಿ ಶಿಕ್ಷಕರಾಗಿದ್ದ ಡಾ.ಸರ್ವೆಪಲ್ಲಿ ರಾಧಕೃಷ್ಣನ್, ಬೆಂಗಳೂರು ಸೆಂಟ್ರಲ್ ಕಾಲೇಜ್ ನ ಸಿ.ಎನ್.ರಾವ್ ಅವರಿಗೆ ಭಾರತ ರತ್ನ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಸ್ಮರಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ವಿಶ್ರಾಂತ ನಿರ್ದೇಶಕ ಡಾ.ಕೆ.ಪಿ.ಪುತ್ತುರಾಯ ಮಾತನಾಡಿ, ವಿದ್ಯಾರ್ಥಿ ಜೀವನವು ಬಹಳ ಸಂತೋಷಮಯವಾದ ಕ್ಷಣವಾಗಿದೆ. ಆದರೆ, ಈ ಸಂದರ್ಭದಲ್ಲಿ ಸಂತೋಷದ ಜೊತೆಗೆ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿಯೂ ವಿದ್ಯಾರ್ಥಿಗಳು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಸಮಾಜದ ಆಸ್ತಿ, ದೇಶದ ಭವಿಷ್ಯ
ವಿದ್ಯಾರ್ಥಿಗಳು ಸಮಾಜದ ಆಸ್ತಿ, ದೇಶದ ಭವಿಷ್ಯ ಎಂಬುದನ್ನು ಮರೆಯಬಾರದು. ಮೌಲ್ಯಗಳನ್ನು ಅಳವಡಿಸಿಕೊಂಡು ಕುಟುಂಬ, ಸಮಾಜವನ್ನು ಪ್ರೀತಿಸುವುದರೊಂದಿಗೆ ಸಾಧನೆ ಮಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಸಾಧಿಸುವವರಿಗೆ ಗುರಿ, ಪ್ರಯತ್ನ, ಕಠಿಣ ಪರಿಶ್ರಮ, ದೃಢಮನಸ್ಸು ಮುಖ್ಯ
ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ ಬಿ.ಮಂಜುನಾಥ್ ಮಾತನಾಡಿ, ಹಿಂದಿಗಿಂತ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಸ್ಪರ್ಧೆ ಹೆಚ್ಚಿದೆ. ಇದಕ್ಕೆ ತಂತ್ರಜ್ಞಾನದ ಅಭಿವೃದ್ಧಿ ಕಾರಣವಾಗಿದೆ. ಹೀಗಾಗಿ, ನಾವು ಕೂಡ ವೇಗವಾಗಿಯೇ ಸ್ಪರ್ಧಿಸುವ ಮೂಲಕ ಈ ಸ್ಪರ್ಧೆಯಲ್ಲಿ ಗುರಿ ತಲುಪಬೇಕಿದೆ ಎಂದರು.
ಸಾಧಿಸುವವರಿಗೆ ಗುರಿ, ಪ್ರಯತ್ನ, ಕಠಿಣ ಪರಿಶ್ರಮ, ದೃಢಮನಸ್ಸು, ಶಿಸ್ತು ಹಾಗೂ ತಾಳ್ಮೆ, ಆತ್ಮವಿಶ್ವಾಸ ಬಹಳ ಮುಖ್ಯ. ಪ್ರಯತ್ನಿಸದೇ, ಯಾವುದೇ ಗುರಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಓದಿನ ಜೊತೆಗೆ ಒಂದಿಷ್ಟು ಸಮಯವನ್ನು ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿಯೂ ಬಳಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್, ವಿಜ್ಞಾನ, ತಂತ್ರಜ್ಞಾನ ನಿಕಾಯದ ಡೀನ್ ಜಿ.ವೆಂಕಟೇಶ ಕುಮಾರ್ ಇತರರು ಉಪಸ್ಥಿತರಿದ್ದರು.
ENGLISH SUMMARY…
UoM has the highest number of grades from NAAC: UOM VC
Mysuru, Feb. 24, 2021 (www.justkannada.in): “The University of Mysore has earned 3.47 grade by the National Assessment and Accreditation Council (NAAC) and has become the University for getting the highest grading,” opined Prof. G. Hemanth Kumar, Vice-Chancellor, University of Mysore.
He inaugurated the ‘Orientation and Introduction Programe’ organized for the first-year postgraduate students of the University of Mysore, held at the Sri Nalwadi Krishnaraja Woedyar auditorium, in Manasagangotri today.
In his address, he said that the University of Mysore has earned 3.47 points in the exams conducted by NAAC for 4 grades. The exams are conducted once in five years. The grading is given based on the quality of subjects and educational standards. On March 1, 2021, the University will apply for NAAC exams, which will be held in the next 3-4 months.
Prof. R. Shivappa, Registrar, University of Mysore, Jnanaprakash, Registrar (Exams), University of Mysore, G. Venkatesh Kumar, Dean Science, and Technology Cell were present.
Keywords: University of Mysore/ UoM Vice-Chancellor/ NAAC
key words : Mysore VV-Within-state itself-“Nack”-Much more-Grade-Obtained-VV-Chancellor-Prof.G.Hemant Kumar