ಮೈಸೂರು ರಾಜವಂಶಸ್ಥ ಯದುವೀರ್ ರಿಂದ ‘ಹುಲಿ ಪತ್ರಿಕೆ 1’ ಕಾದಂಬರಿ ಲೋಕಾರ್ಪಣೆ….

ಮೈಸೂರು,ಜು,1,2020(www.justkannada.in): ಅನುಗ್ರಹ ಪ್ರಕಾಶನದ ಹೊಸ ಕಾದಂಬರಿ ‘ಹುಲಿ ಪತ್ರಿಕೆ 1 ಪುಸ್ತಕವನ್ನ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆ ಮಾಡಿದರು.

ಅನುಗ್ರಹ ಪ್ರಕಾಶನದಿಂದ ಅನುಷ್ ಎ ಶೆಟ್ಟಿ ಅವರು ‘ಹುಲಿ ಪತ್ರಿಕೆ 1’ ಕಾದಂಬರಿಯನ್ನ ರಚಿಸಿದ್ದಾರೆ. ಈ ಕಾದಂಬರಿಯನ್ನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಮೈಸೂರು ಅರಮನೆಯಲ್ಲಿ ಇಂದು ಬೆಳಗ್ಗೆ ಬಿಡುಗಡೆ ಗೊಳಿಸಿದ್ದಾರೆ. ಕಾದಂಬರಿಯು ಪುಸ್ತಕ ರೂಪದಲ್ಲಿ ಮತ್ತು ಮೈಲಾಂಗ್ ಬುಕ್ಸ್ ಎಂಬ ಅಪ್ಲಿಕೇಶನ್‌ನಲ್ಲಿ ಇ-ಬುಕ್ ರೂಪದಲ್ಲಿ ಇಂದಿನಿಂದ ಓದುಗರಿಗೆ ಲಭ್ಯವಿದೆ.mysore-yaduveer-krishnadatta-chamaraja-wodeyar-release-tiger-magazine-1

ಹುಲಿ ಪತ್ರಿಕೆಯು ಮೈಸೂರಿನ ಸ್ವಾತಂತ್ರ ನಂತರ ಪತ್ರಿಕೆಗಳಲ್ಲಿ ಒಂದಾಗಿದ್ದು, ಅದನ್ನೊಳಗೊಂಡಿರುವ ಕಾಲ್ಪನಿಕ ಕಾದಂಬರಿ ಇದಾಗಿದೆ. ಇದು ಲೇಖಕ ಅನುಷ್ ಶೆಟ್ಟಿ ಅವರ ಐದನೇ ಕಾದಂಬರಿಯಾಗಿದ್ದು, ಆಹುತಿ, ಕಳ್ಬೆಟ್ಟದ ದರೋಡೆಕೋರರು, ಜೋಡ್ಪಾಲ ಮತ್ತು ನೀನು ನಿನ್ನೊಳಗೆ ಖೈದಿ ಇವರ ಇತರ ಕಾದಂಬರಿಗಳಾಗಿವೆ. ಕಳ್ಬೆಟ್ಟದ ದರೋಡೆಕೋರರು ಕಾದಂಬರಿಯು ಸಿನಿಮಾವಾಗಿ ಕೂಡ ಹೊರಬಂದಿದೆ.

ಕೊರೋನಾ ಪರಿಸ್ಥಿತಿಯಿಂದಾಗಿ ಹೊರಗೆಲ್ಲೂ ಸಭೆ ಸಮಾರಂಭಗಳು ಜರುಗದಿರುವ ಹಿನ್ನೆಲೆ ರಾಜವಂಶಸ್ಥ ಯದುವೀರ್ ಅವರು ತಮ್ಮ ನಿವಾಸದಲ್ಲೇ ಪುಸ್ತಕ ಲೋಕಾರ್ಪಣೆ ಗೊಳಿಸಿದ್ದಾರೆ. ಅನುಗ್ರಹ ಪ್ರಕಾಶನವು ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಮೈಸೂರಿನ ಪ್ರಕಾಶನ ಸಂಸ್ಥೆಯಾಗಿದೆ.

 

Key words: Mysore –Yaduveer krishnadatta chamaraja wodeyar- release- tiger magazine 1