ಮೈಸೂರು, ಜೂ.08, 2019 : (www.justkannada.in news ) ನಮ್ಮ ಮೈಸೂರಿನ ಯುವಕ, ಭಾರತ್ ಚೆಟ್ಟಿ ಕ್ಯಾಲಿಫೋರ್ನಿಯಾದಲ್ಲಿ ಮೇ 7 ರಿಂದ 9 ರವರೆಗೆ ನಡೆದ ಗೂಗಲ್ ನ ವಾರ್ಷಿಕ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸುವ ಮೂಲಕ ಮೈಸೂರಿಗರಿಗೆ ಹೆಮ್ಮೆಯನ್ನುಂಟು ಮಾಡಿದ್ದಾನೆ.
ಬೆಂಗಳೂರಿನ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಬಿ.ಟೆಕ್ ನ ಅಂತಿಮ ವರ್ಷದ ವಿದ್ಯಾರ್ಥಿ ಭಾರತ್ ಚೆಟ್ಟಿ. ತಂತ್ರಜ್ಞಾನ ಪರಿವರ್ತನೆಯಲ್ಲಿ ಹೆಸರು ಮಾಡಿದ ಗೂಗಲ್ ನ ಮುಖ್ಯಸ್ಥ ಸುಂದರ ಪಿಚ್ಚೈ ಸೇರಿದಂತೆ ವಿಶ್ವದ ದಿಗ್ಗಜರೊಡನೆ ಹಲವು ಸುತ್ತುಗಳ ಚರ್ಚೆ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, ನವೀನ ಮೌಕ್ತಿಕ ತಂತ್ರಾಂಶಗಳ ಬಳಕೆ ಮತ್ತು ಅಭಿವೃದ್ಧಿಯ ಯೋಜನೆಯ ಬಗ್ಗೆ ಅವರಿಂದ ಭೇಷ್ ಅನಿಸಿಕೊಂಡಿದ್ದಾನೆ.
ವಿಶ್ವದ ವಿವಿಧ ದೇಶಗಳಿಂದ 11 ಮಂದಿ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಪೈಕಿ ಭಾರತದಿಂದ ಆಯ್ಕೆಗೊಂಡಿದ್ದ ಏಕೈಕ ವಿದ್ಯಾರ್ಥಿ ಮೈಸೂರಿನ ಭಾರತ್ ಚೆಟ್ಟಿ. ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿ ಸಂತಸ ಹಂಚಿಕೊಂಡ ಭಾರತ್ ಚೆಟ್ಟಿ ಹೇಳಿದಿಷ್ಟು….
ನನಗೆ ತಂತ್ರಜ್ಞಾನದ ಬಳಕೆ ಬಗ್ಗೆ ಅತೀವ ಆಸಕ್ತಿ. ಮಾನವನ ಎಲ್ಲ ಸಮಸ್ಯೆಗಳಿಗೆ ತಂತ್ರಜ್ಞಾನದಿಂದ ಮಾತ್ರ
ಪರಿಹಾರ ಸಿಗಲಿದೆ ಎಂಬುದು ನನ್ನ ನಂಬಿಕೆ. ಆದ್ದರಿಂದಲೇ ಸಮಾಜದ ಮುಖ್ಯವಾಹಿನಿಗೆ ಸೇರದವರಿಗೂ ತಂತ್ರಜ್ಞಾನದ ಸೌಲಭ್ಯವನ್ನು ಸಿಗುವಂತೆ ಮಾಡುವುದು ನನ್ನ ಕನಸು.
ಕ್ಯಾಲಿಫೋರ್ನಿಯದವರೆಗೆ ಪಯಣಿಸಿ ಈ ಮಹತ್ತರ ಸಂದರ್ಭಕ್ಕೆ ಸಾಕ್ಷಿಯಾಗಿದ್ದು ನನ್ನ ಜೀವನಪಥವನ್ನೇ ಬದಲಿಸಬಹುದಾದದ್ದು. ಇದೆಲ್ಲವೂ ಸಾಧ್ಯವಾಗಿರುವುದು ಕಠಿಣ ಪರಿಶ್ರಮದಿಂದ ಎನ್ನುವ ಮೂಲಕ ಇತರ ವಿದ್ಯಾರ್ಥಿಗಳಿಗೂ ಕನಸನ್ನು ನನಸನ್ನಾಗಿ ಮಾಡಿಕೊಳ್ಳಲು ಪ್ರೇರೇಪಿಸಿದ್ದಾನೆ.
ಮೆಶಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪ್ರತಿ ದಿನವೂ ಹೊಸತನ್ನು ಕಲಿಯುವ ಮತ್ತು ಕಲಿತದ್ದನ್ನು ಸ್ವತಃ ತಂತ್ರಾಂಶದ ಬಳಕೆ ಮಾಡಿಕೊಳ್ಳುವುದು ಭಾರತ್ ಚೆಟ್ಟಿಯ ವಿಶೇಷತೆ. ಗೂಗಲ್ ಇಂಡಿಯಾದ ಮೆಶಿನ್ ಲರ್ನಿಂಗ್ ಪ್ರಶಿಕ್ಷಕರಲ್ಲಿ ಒಬ್ಬನಾದ ಭಾರತ್, ಇದುವರೆಗೆ ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗೂಗಲ್ ನ ಎಮ್.ಎಮ್.ಎಲ್.ಸಿ.ಸಿ. ಕಾರ್ಯಕ್ರಮದ ಮೂಲಕ ತರಬೇತಿ ನೀಡುವ ಮೂಲಕ ಗೂಗಲ್ ಡೆವಲಪರ್ಸ್ ಗ್ರೂಪ್ ನ ನಾಯಕನಾಗಿದ್ದಾನೆ.
“ಉನ್ನತ ಶೈಕ್ಷಣಿಕ ಫಲಿತಾಂಶದ ಗುರಿಯ ಜೊತೆಗೆ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಮತ್ತು ಇವುಗಳು ನಿಮ್ಮ ಗುರಿಗೆ ಪೂರಕವಾಗಿರುತ್ತದೆ” ಎಂದು ಗೂಗಲ್ನ ವಿಚಾರ ಸಂಕಿರಣಗಳಿಗೆ ಹೋಗಬೇಕೆನ್ನುವ ಇಚ್ಛಾಪಟುಗಳಿಗೆ ಭಾರತ್ ಹೇಳುವ ಹಿತವಚನ.
ತನ್ನ ಯಶಸ್ಸಿಗೆ ಸಹಕಾರ ನೀಡಿದ ಗೂಗಲ್ ನ ವಿಶ್ವಜಿತ್ ಮಲ್ಲಿಕ್ ಮತ್ತು ಎರಿಕಾ ಹ್ಯಾನ್ಸನ್ರವರಿಗೆ ಕೃತಜ್ಞತೆ ಸಲ್ಲಿಸಿರುವ ಭಾರತ್ ಚೆಟ್ಟಿ , ಮೈಸೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರ ಸಹೋದರಿಯ ಪುತ್ರ.
———
Mysore youth, Bhaarat Chetty made the city proud by attending Google’s annual developer conference.
Mysore youth, Bhaarat Chetty, a final year B.Tech. Computer Science student of PES University, made the city proud by attending Google’s annual developer conference, Google I/O – 2019, held at California, United States from May 7-9, 2019 .He
returned to India after his three-week long stay in USA.
He is nephew of our honourable vice chancellor of UNIVERSITY OF MYSORE( G Hemantha Kumar )
The conference provided him an opportunity to interact with some disruptive change-makers in technology including, but not limited to, the likes of Sundar Pichai (CEO, Google). According to Bhaarat, the reason technology fascinates him is that it has an answer to almost every problem the society faces today and it thrills him to be able to bring a change with his passion for science and technology. He is passionate about making tech more inclusive, especially for those from underrepresented backgrounds, and He wants to use design and technology for empowerment and accessibility.
Bhaarat Chetty was the only student from the Developer Student Clubs 2017-19 INDIA to have made it to the annual Google I/O conference, California this May.
Thrilled to have shared stage with global leaders and developers, he says the opportunity helped him engage in fruitful discussions on building applications with Google and many open source platforms (TensorFlow, Flutter, APIs, Google Web Toolkit, App Engine).
“Travelling all the way to California to witness this landmark moment was nothing short of a life-changing moment for me. I would urge the other young students to realise that hard work can make dreams come true and take you places,” said Bhaarat. ” Today, with technology at my fingertips, I keep updating my repertoire, with skills like ML and AI empowered apps, because there is no better way of implementing your idea than by doing it yourself. Learning something new everyday is a major means of my subsistence ”
The Google staff made sure we had enough opportunities to break ice — an AI Concert, a magic show, performances by a few international bands and a dinner with the Indian community. It helped us get to know each other better. It was nice talking to them about aspects that could enhance our career prospects.”
He has been a part of the Machine Learning facilitator group with Google India, and has trained over 1200+ students through Google’s MLCC program. He currently leads the Google Developers Group (GDG) Bangalore chapter, as a part of the GDG program he helps evangelize technology. He is a tech speaker who loves, taking the stage on topics related to Machine Learning and Artificial Intelligence.
For those aspiring to make it to future Google I/O conferences, he suggests, “Enrolling in many community programs beyond college is necessary. It will give you a direction. One must focus on academics, but shouldn’t compromise on their true calling.”
I want to extend my heartfelt gratitude to Biswajeet Mallik and Erica Hanson from Google who have been a constant support for all my endeavors.