ಮೈಸೂರು,ಜೂ,26,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿ ಅಲ್ಲಿನ ಜನರ ಸಮಸ್ಯೆಯನ್ನ ಆಲಿಸುತ್ತಿರುವ ಬೆನ್ನಲ್ಲೆ ಇದೀಗ ಸಿಎಂ ಹೆಚ್.ಡಿಕೆ ಪ್ರೇರಣೆ ಮೇರೆಗೆ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಮ್ ಅವರು ಗ್ರಾಮವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ.
ಮೈಸೂರು ಜಿಲ್ಲಾದ್ಯಂತ ಗ್ರಾಮ ವಾಸ್ತವ್ಯ ಮಾಡಲು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಮ್ ತೀರ್ಮಾನಿಸಿದ್ದು, ಜಿ.ಪಂ ಅಧ್ಯಕ್ಷೆಯಾಗಿರುವ ಪೈಕಿ ಗ್ರಾಮ ವಾಸ್ತವ್ಯ ಮಾಡಲು ಮುಂದಾದ ಏಕೈಕ ಮಹಿಳೆ ಅಧ್ಯಕ್ಷೆ ಇವರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಜನರ ಸಮಸ್ಯೆ ಆಲಿಸಲು ಗ್ರಾಮ ವಾಸ್ತವ್ಯ ಇಂದು ಅತ್ಯವಶ್ಯಕ. ಸಿಎಂ ಕುಮಾರಸ್ವಾಮಿ, ಸಾರಾ ಮಹೇಶ್ ಮಾರ್ಗದರ್ಶನದಲ್ಲಿ ವಾಸ್ಯವ್ಯ ಮಾಡುತ್ತೇನೆ. ಜಿಲ್ಲೆಯ ಹೆಚ್ ಡಿ ಕೋಟೆ , ಪಿರಿಯಾಪಟ್ಟಣ ಸೇರಿದಂತೆ ಇತರೆ ಕಡೆ ಗ್ರಾಮವಾಸ್ತವ್ಯ ಮಾಡಲು ತೀರ್ಮಾನಿಸಿದ್ದೇವೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಒಂದು ಬಾರಿ ಸಭೆ ನಡೆಸಿ ದಿನಾಂಕ ಪ್ರಕಟಿಸುತ್ತೇವೆ. ವಾಸ್ತವ್ಯದ ವೇಳೆ ಸಿಇಓ ಕೆ ಜ್ಯೋತಿ ಸೇರಿದಂತೆ ಇತರೆ ಅಧಿಕಾರಿಗಳು ಕೂಡ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚನೆ ಹೊರಡುಸುತ್ತೇನೆ ಎಂದರು.
ಗ್ರಾಮ ವ್ಯಾಸ್ತವ್ಯದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುತ್ತೇವೆ. ಮತ್ತು ಅಲ್ಲಿನ ಮೂಲಭೂತ ಸಮಸ್ಯೆಗಳನ್ನ ಬಗೆಹರಿಸಲು ಮುಂದಾಗುತ್ತೇವೆ ಎಂದು ಪರಿಮಳಾ ಶ್ಯಾಂ ತಿಳಿಸಿದರು.
Key words: Mysore – zilla Panchayat-president-parimala shyam-gramavastavya