ಮೈಸೂರು,ನವೆಂಬರ್,11,2020(www.justkannada.in): ಶಾಲೆಗಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಭಾರತಿ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನ ಜಿಪಂ ಸಿಇಒ ಭಾರತಿ ತರಾಟೆ ತೆಗೆದುಕೊಂಡರು.
ಕಳಪೆ ಗುಣಮಟ್ಟದ ಅಕ್ಕಿ, ಬೇಳೆ ವಿತರಣೆ ಮಾಡುತ್ತಿದ್ದಾರೆಂಬ ದೂರುಗಳು ಬರುತ್ತಿವೆ. ಮೊದಲು ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ ನಂತರ ಶಾಲೆಗಳಿಗೆ ನೀಡಿ. ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಲೋಪದೋಷವಿದ್ದರೆ ಮುಖ್ಯ ಶಿಕ್ಷಕರುಗಳಿಗೆ ಆಹಾರ ಪದಾರ್ಥಗಳನ್ನು ತಿರಸ್ಕರಿಸುವಂತೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸಿಇಒ ಭಾರತಿ ಸೂಚನೆ ನೀಡಿದರು.
ಹಾಗೆಯೇ ನಿಮ್ಮ ನಿಮ್ಮ ಮನೆಗಳಿಗೆ ಯಾವ ರೀತಿಯ ಗುಣಮಟ್ಟದ ಪದಾರ್ಥಗಳನ್ನು ಬಳಸುತ್ತೀರೋ ಅದೇ ರೀತಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಶಾಲೆಗಳಿಗೆ ವಿತರಣೆ ಮಾಡಿ. ಮಕ್ಕಳ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದು ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಪಂ ಸಿಇಒ ಭಾರತಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶಕ್ಕೆ ಒತ್ತು ನೀಡಿ…
ಇನ್ನು ಸಭೆಯಲ್ಲಿ ಮಕ್ಕಳ ವಿದ್ಯಾಭ್ಯಾಸ, ಕಲಿಕೆ ಶಾಲೆ ಪ್ರಾರಂಭದ ಸಿದ್ದತೆ ಮತ್ತು ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ಹಾಗೂ ಹೋಗುಗಳ ಕುರಿತು ಚರ್ಚೆ ನಡೆಸಲಾಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ಅನ್ ಲೈನ್ ತರಗತಿ ವ್ಯವಸ್ಥೆ ಇಲ್ಲದ ಕಾರಣ ಮನೆಯಲ್ಲೇ ಪೋಷಕರಿಂದಲೇ ಕಲಿಕೆಗೆ ಒತ್ತು ನೀಡುವಂತೆ ಈ ವೇಳೆ ಅಧಿಕಾರಿಗಳಿಗೆ ಜಿಲ್ಲಾಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಅಧ್ಯಕ್ಷ ಮಂಜುನಾಥ್ ಸೂಚನೆ ನೀಡಿದರು.
ಜತೆಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶಕ್ಕೆ ಒತ್ತು ನೀಡಿ. ಪ್ರತಿ ತಿಂಗಳು ತಾಲ್ಲೂಕಿನ ಬಿಇಒ ಗಳ ಜೊತೆ ಸಭೆ ಮಾಡಿ ಕಲಿಕೆ ಗುಣ ಮಟ್ಟ ಹೆಚ್ಚಿಸಿ ಎಂದು ಮಂಜುನಾಥ್ ತಿಳಿಸಿದರು.
ENGLISH SUMMARY..
Mysuru ZP CEO Bharati slams Education Department officials
Mysuru, Nov. 11, 2020 (www.justkannada.in): Following complaints against the supply of poor quality food materials to the school, Mysuru Zilla Panchayat CEO Bharati lambasted the education department officials.
Participating in the KDP meeting held under the chairmanship of ZP President Parimala Shyam, held at the ZP auditorium here today she instructed the officials concerned to ensure quality of the food materials, before distributing it to the schools and also asked them to give strict instructions to the Headmasters to reject the stock if they find the material is of poor quality.
A discussion was also held on commencing of schools, SSLC results, etc. ZP member and District Education and Health Committee President Manjunath asked the officials concerned to encourage the parents of students who are studying in government schools to engage the children in learning activities at home due to absence of online classes.
Key words: Mysore- ZP CEO Bharathi-class -Education Department -officer-KDP-meeting.