ಕೋವಿಡ್ 19 : ಜಾಹಿರಾತುಗಳ ಆಂದೋಲನದ ಮೂಲಕವೇ ಜಾಗೃತಿಗೆ ಹಣ ಪೋಲು

 

ಮೈಸೂರು, ಏ.27, 2020 : ( www.justkannada.in news ) : ಕೋವಿಡ್ -19 ಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನೆಪದಲ್ಲಿ ಸರಕಾರದ ಹಣ ಪೋಲಾಗುತ್ತಿರುವುದಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಇಒ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಗಳಿಗೆ ( Executive Officers EO and Panchayat Development Officers -PDO) ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

mysore-zp-ceo-covid-advertisment-action-pdo

ಏನಿದು ಘಟನೆ :

ವಿಶ್ವದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ಕೋವಿಡ್ 19 ಗೆ ಸಂಬಂಧಿಸಿದಂತೆ, ರಾಜ್ಯದಲ್ಲೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರಕಾರ ಅನೇಕಾ ಮುಂಜಾಗ್ರತ ಕ್ರಮ ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಜನತೆಗೆ ಅರಿವು ಮೂಡಿಸಲು ಐಇಸಿ ( ಮಾಹಿತಿ, ಶಿಕ್ಷಣ, ಸಂವಹನ- Information Education Communication -IEC) ಮೂಲಕ ಜಾಗೃತಿ ಮೂಡಿಸಲು ತಾಲೊಕು ಪಂಚಾಯತ್, ಗ್ರಾಮ ಪಂಚಾಯತ್ ಗಳಿಗೆ ಆರ್ಥಿಕ ನೆರವು ನೀಡಿದೆ. ಇದನ್ನೇ ನೆಪವಾಗಿಟ್ಟುಕೊಂಡು ಬಹುತೇಕ ಪಂಚಾಯ್ತಿಗಳು ಪತ್ರಿಕೆಗೆ ನಿತ್ಯ, ನಿರಂತರ ಜಾಹಿರಾತು ನೀಡಿ ಜವಾಬ್ದಾರಿಯನ್ನು ಕಳೆದುಕೊಂಡಿವೆ.
ಇದನ್ನು ಗಮನಿಸಿದ ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಗರಂಗೊಂಡರು. ಈ ಬಗ್ಗೆ ಸಂಬಂಧಪಟ್ಟವರಿಗೆ ವಾಟ್ಸ್ ಅಪ್ ಮೂಲಕ ಚಾಟಿ ಬೀಸಿ ವಿವರಣೆ ನೀಡುವಂತೆ ಆದೇಶಿಸಿದ್ದಾರೆ.

ಗರಂ ಆಗಲು ಏನು ಕಾರಣ :

ಮೈಸೂರಿನ ಸ್ಥಳಿಯ ಪತ್ರಿಕೆಯೊಂದಕ್ಕೆ ಏಕರೂಪದ ಜಾಹಿರಾತು ನೀಡುತ್ತಿದ್ದದ್ದು. ಜತೆಗೆ ಪತ್ರಿಕೆಯಲ್ಲಿ ಒಂದೇ ಕಡೆ, ಒಂದೇ ರೀತಿ ಜಾಹಿರಾತು. ಆದರೆ ತಾಪಂ, ಗ್ರಾಪಂ ಮಾತ್ರ ಬೇರೆ. ಜಾಹಿರಾತಿನಲ್ಲೂ ಯಾವುದೇ ವೈವಿದ್ಯತೆ ಇಲ್ಲ. ಏಕರೂಪದಲ್ಲಿ ಬೇಕಾಬಿಟ್ಟಿಯಾಗಿ ನೀಡಿರುವುದು, ಜತೆಗೆ ನಿರಂತರವಾಗಿ ಅದೊಂದೇ ಪತ್ರಿಕೆಯಲ್ಲಿ ಅದು ಪ್ರಕಟವಾಗುತ್ತಿದ್ದದ್ದು ಕಾರಣ ಎನ್ನಲಾಗಿದೆ.

mysore-zp-ceo-covid-advertisment-action-pdo

ಈ ರೀತಿ ಸರಕಾರದ ಹಣವನ್ನು ಜಾಹಿರಾತಿಗೆ ಪೋಲು ಮಾಡಬೇಡಿ. IEC ಯೋಜನೆಯಡಿ ಹಣ ವ್ಯಯಿಸಲು ಹಲವು ಮಾರ್ಗಗಳಿವೆ ಎಂದು ಸಿಇಒ ಕಿವಿ ಹಿಂಡಿದ್ದಾರೆ.

ಇದೇ ವೇಳೆ ಸಿಇಒ ಗೆ ವಾಟ್ ಅಪ್ ರಿಪ್ಲೈ ಮಾಡಿರುವ ಜಿಪಂ ನ ಅಧಿಕಾರಿಯೊಬ್ಬರು, ಇತರೆ ಕೆಲ ಪತ್ರಿಕೆಗಳೂ ಇಲಾಖೆಯನ್ನು ಸಂಪರ್ಕಿಸಿ ಜಾಹಿರಾತು ನೀಡುವಂತೆ ಕೇಳಿದ್ದವು. ನಾವು ಪೇಯ್ಡ್ ಮೀಡಿಯಾ ಪಬ್ಲಿಸಿಟಿಯಿಂದ ದೂರ ಎಂದು ಅವರಿಗೆ ಸ್ಪಷ್ಟಪಡಿಸಿರುವುದಾಗಿ ಉಲ್ಲೇಖಿಸಿದ್ದಾರೆ.

 

key words : mysore-zp-ceo-covid-advertisment-action-pdo