ಮೈಸೂರು,ಆಗಸ್ಟ್,5,2021(www.justkannada.in): ಸರ್ಕಾರಿ ಆರ್ಯುವೇದ ಮೆಡಿಕಲ್ ಕಾಲೇಜಿನ ವ್ಯಾಪ್ತಿಗೆ ಬರುವ ಚಂದ್ರವನ ನರ್ಸರಿಗೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಯೋಗೇಶ್ ಭೇಟಿ ನೀಡಿ ಅಲ್ಲಿ ಬೆಳೆಸಲಾಗುತ್ತಿರುವ ಗಿಡಗಳ ಬಗ್ಗೆ ಮಾಹಿತಿ ಪಡೆದರು.
75ನೇ ಸ್ವಾತಂತ್ರೋತ್ಸವ ” ಅಜಾದಿ ಕಾ ಅಮೃತ್ ಮಹೋತ್ಸವ್” ಅಂಗವಾಗಿ ಮೈಸೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಛೇರಿಗಳು ಮತ್ತು ಸರ್ಕಾರಿ ಶಾಲೆಗಳ ಆವರಣದಲ್ಲಿ ಆರ್ಯುವೇದ ಹಣ್ಣುಗಳನ್ನು ಬಿಡುವ ಮತ್ತು ನೆರಳನ್ನು ನೀಡುವ ಗಿಡಗಳನ್ನು ನೆಟ್ಟು ಬೆಳಸಿ ಉತ್ತಮ ಪರಿಸರ ನಿರ್ಮಿಸುವ ಉದ್ದೇಶವನ್ನ ಹೊಂದಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಮೈಸೂರು ಜಿ.ಪಂ ಸಿಇಒ ಯೋಗೇಶ್ ಅವರು ಸರ್ಕಾರಿ ಆರ್ಯುವೇದ ಮೆಡಿಕಲ್ ಕಾಲೇಜಿನ ವ್ಯಾಪ್ತಿಗೆ ಬರುವ ಚಂದ್ರವನ ನರ್ಸರಿಗೆ ಭೇಟಿ ನೀಡಿ ಅಲ್ಲಿ ಬೆಳೆಯಲಾಗುವ ಗಿಡಗಳ ಬಗ್ಗೆ ಆಯುಷ್ ವೈದ್ಯರಿಂದ ಮಾಹಿತಿ ಪಡೆದರು.
ಈ ವೇಳೆ ಆರ್ಯುವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ ಗಜಾನನ ಹೆಗಡೆ ಮತ್ತು ಡಾ .ಸಂಧ್ಯಾ ,ಸರ್ಕಾರಿ ಬಿಎಡ್ (ಸಿಟಿಇ)ಕಾಲೇಜಿನ ಪ್ರಾಂಶುಪಾಲರಾದ ಗೀತಾಂಬ, ಡಿಡಿಪಿಐ ರಾಮಚಂದ್ರರಾಜೇ ಅರಸ್, ಡಯಟ್ ಪ್ರಾಂಶುಪಾಲರಾದ ರಘುನಂದನ್, ಸಿಟಿಇ ಉಪನ್ಯಾಸಕರಾದ ಕೃಷ್ಣ ಅವರು ಸಾಥ್ ನೀಡಿದರು.
Key words: mysore ZP- CEO-Yogesh- visited- Chandravana Nursery