ಮೈಸೂರು, ಮಾ.07, 2020 : (www.justkannada.in news ) ; ಜಿಲ್ಲಾ ಪಂಚಾಯ್ತಿಯ ಮೂರು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನಲೆ, ಕೋರಂ ಅಭಾವದಿಂದ ಚುನಾವಣೆ ಮುಂದೂಡಿಕೆ. ಚುನಾವಣೆಯನ್ನ ಮಾರ್ಚ್ 21 ಕ್ಕೆ ಮತ್ತೆ ಮೂಂದೂಡಿದ ಜಿ.ಪಂ ಅಧ್ಯಕ್ಷೆ ಬಿ.ಸಿ ಪರಿಮಳಾ ಶ್ಯಾಂ.
ಮಾರ್ಚ್ 2 ರಿಂದ ಮಾರ್ಚ್ 7 (ಇಂದಿಗೆ) ನಿಗಧಿಯಾಗಿದ್ದ ಚುನಾವಣೆ. ಕೋರಂ ಅಭಾವದಿಂದ ಚುನಾವಣೆ ಮುಂದೂಡಿದ್ದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಜಿ.ಪಂ ಸದ್ಯಸರು ಆಕ್ರೋಶ. ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ವಿರುದ್ಧ ಹರಿಹಾಯ್ದ ಕಾಂಗ್ರೆಸ್, ಬಿಜೆಪಿ ಸದಸ್ಯರು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಲ್ಲಿ ಆಂತರಿಕ ಭಿನ್ನಮತ. ಚಂದ್ರಿಕಾ ಸುರೇಶ್, ಮಂಜುನಾಥ್, ಮಾದೇಗೌಡ ಮತ್ತು ಸುದೀಂದ್ರ ನಡುವೆ ಪ್ರಬಲ ಪೈಪೋಟಿ. ಗೊಂದಲ ಬಗೆಹರಿಯದ ಹಿನ್ನಲೆಯಲ್ಲಿ ಚುನಾವಣೆಗೆ ಆಗಮಿಸದ ಜೆಡಿಎಸ್ ಸದಸ್ಯರು.
ಜೆಡಿಎಸ್ ಸದಸ್ಯರು ಚುನಾವಣೆಗೆ ಆಗಮಿಸದ ಹಿನ್ನಲೆಯಲ್ಲಿ ಸೃಷ್ಠಿಯಾದ ಕೋರಂ ಅಭಾವ. ಒಟ್ಟು 74 ಸದಸ್ಯರ ಬಲಾಬಲದಲ್ಲಿ 37 ಮಂದಿ ಸದಸ್ಯರು ಹಾಜರು ಇರಬೇಕಿತ್ತು. 33 ಮಂದಿ ಸದಸ್ಯರು ಇದ್ದ ಕಾರಣ ಚುನಾವಣೆಗೆ ಉಂಟಾದ ಕೋರಂ ಅಭಾವ. ಕೋರಂ ಅಭಾವದಿಂದ ಚುನಾವಣೆ ಸಭೆಯಿಂದ ಹೊರನಡೆದ ಜಿ.ಪಂ ಅಧ್ಯಕ್ಷೆ.
ನಾಮಪತ್ರ ಸ್ವೀಕರಿಸಿ ಎಂದು ಸಿಇಓ ಕೆ ಜ್ಯೋತಿಗೆ ಆಗ್ರಹ ವ್ಯಕ್ತಪಡಿಸಿದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು. ಅಧ್ಯಕ್ಷರ ಅಪ್ಪಣೆ ಇಲ್ಲದೆ ನಾಮಪತ್ರ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೊರನಡೆದ ಸಿಇಓ ಜ್ಯೋತಿ.
ಅಸಲಿ ಕಾರಣ :
ಜಿಲ್ಲಾ ಪಂಚಾಯತ್ ಮೂರನೆ ಅವಧಿ ಸ್ಥಾಯಿ ಸಮಿತಿ ಅಧ್ಯಕ್ಷರು ಚುನಾವಣೆ ನಡೆಸಲು ಕೋರಂ ಅಭಾವ.
ಕೋರಂ ಅಭಾವ ಉಂಟಾಗಲು ಅಸಲಿ ಕಾರಣ ಹೀಗಿದೆ.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಸಾ.ರಾ. ಮಹೇಶ್ ಬಣದ ನಡುವೆ ಆಂತರಿಕ ಪೈಪೋಟಿ. ಸಾರಾ ಮಹೇಶ್ ಬಣದಲ್ಲಿ ಗುರುತಿಸಿಕೊಂಡಿರುವ ಮಂಜುನಾಥ್, ಮಾದೇಗೌಡ, ವೀಣಾ ಕೀರ್ತಿ ಹಾಗೂ ಜಿಟಿಡಿ ಬಣದಲ್ಲಿ ಚಂದ್ರಿಕಾ ಸುರೇಶ್, ರುದ್ರಮ್ಮ ನಾಗರಾಜು, ಸುದೀರ್. ಅಧ್ಯಕ್ಷ ಗಿರಿ ನೀಡುವಂತೆ ಪಟ್ಟು ಹಿಡಿದಿರುವ ಸಾ ರಾ ಬಣದ ಮಾದೇಗೌಡ. ಇದೇ ವೇಳೆ ಜಿಟಿಡಿ ಬಣದಿಂದ ಚಂದ್ರಿಕಾ ಸುರೇಶ್ ಸಹ ಅಧ್ಯಕ್ಷಗಾದಿಗೆ ಬಿಗಿ ಪಟ್ಟು.
key words : mysore-zp-jds-election-standing-committe