ಹೊಸ ಮುಖಕ್ಕೆ ಮಣೆ ಹಾಕುವುದು ಪಕ್ಷದಲ್ಲಿ ಸಾಮಾನ್ಯ : ಡಾ.ಅಶ್ವಥ್‌ ನಾರಾಯಣ್‌

mysore ̲ mp ̲ bjp ̲ ticket ̲ prathap simha ̲ miss

 

ಮೈಸೂರು, ಮಾ .09, 2024 : (WWW.JUSTKANNADA.IN NEWS ) :  ಕೊಡಗು- ಮೈಸೂರು ಲೋಕಸಭಾ  ಸಂಸದ ಪ್ರತಾಪ್‌ ಸಿಂಹ ಅವರಿಗೆ ಕ್ಷೇತ್ರದ ಟಿಕೆಟ್ ತಪ್ಪುವ ವರದಿ ಮಾದ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ, ಬಿಜೆಪಿ ಹಿರಿಯ ನಾಯಕ, ಮಾಜಿ ಡಿಸಿಎಂ,  ಡಾ.ಅಶ್ವಥ್‌ ನಾರಾಯಣ್‌ ಮಾಧ್ಯಮದ ಜತೆ ಮಾತನಾಡಿದ್ದಾರೆ.

ಸಂಸದ ಪ್ರತಾಪಸಿಂಹರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಮಾಧ್ಯಮಗಳ ವರದಿ ಬಗ್ಗೆ ಪ್ರತಿಯಿಸಿದ ಡಾ. ಅಶ್ವಥ್‌ ನಾರಾಯಣ್‌ ಹೇಳಿದಿಷ್ಟು…

ರಾಜಕೀಯದಲ್ಲಿ ಯಾರಿಗೆ, ಏನು ,ಯಾವುದು ನಿಶ್ಚಿಯವಾಗಿ ಗೊತ್ತಿಲ್ಲ.  ಪಕ್ಷದ ಪಾರ್ಲಿಮೆಂಟರಿ ಬೋರ್ಡಿನಲ್ಲಿ ಏನಾದರೂ ಆಗಬಹುದು. ಅಲ್ಲಿಯ ತನಕ ಎಲ್ಲರೂ ಕಾಯಬೇಕಾಗುತ್ತದೆ. ಸದ್ಯಕ್ಕೆ ನಾನು ಈ ಬಗ್ಗೆ ಮಾತನಾಡಲ್ಲ. ಪೊಲಿಟಿಕ್ಸ್ ತುಂಬಾ ಡೈನಾಮಿಕ್ ಆಗಿರುತ್ತದೆ. ಹೊಸ ಮುಖಕ್ಕೆ ಮಣೆ ಹಾಕುವುದು ಪಕ್ಷದಲ್ಲಿ ಸಾಮಾನ್ಯ. ಹೊಸ ಚಿಗುರು, ಹಳೆ ಬೇರು ಎಂಬುದು ನಡೆಯುತ್ತಲೇ ಇರುತ್ತದೆ. ರಾಜಕೀಯದಲ್ಲಿ ಇದೇ ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದರು.

ಈ ನಡುವೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅಳಿಯ, ಜಯದೇವ ಹೃದ್ರೋಗ ಸಂಸ್ಥೆ ನಿವೃತ್ತ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್  ಅವರ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ಡಾ. ಅಶ್ವಥ್‌ ನಾರಾಯಣ್‌, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅವರಿಗೆ ಆಹ್ವಾನ ನೀಡಿದ್ದೇವೆ‌. ಅದರಲ್ಲಿ ಎರಡೂ ಮಾತಿಲ್ಲ. ಆದರೂ ದೊಡ್ಡವರ ಮಟ್ಟದಲ್ಲಿ ಏನು ನಿರ್ಧರಿಸುತ್ತಾರೆ ನನಗೆ ಗೊತ್ತಿಲ್ಲ. ಪಾರ್ಲಿಮೆಂಟರಿ ಬೋರ್ಡಿನಲ್ಲಿ ಈ ಕುರಿತು ಚರ್ಚೆ ಆಗಲಿದೆ. ರಾಜಕೀಯದಲ್ಲಿ ಯಾರಿಗೂ ಬಾಗಿಲು ಮುಚ್ಚುವುದಿಲ್ಲ ಎಂದರು.

key words : mysore ̲ mp ̲ bjp ̲ ticket ̲ prathap simha ̲ miss