ಮೈಸೂರು,ಮಾ,6,2020(www.justkannada.in): ಮೈಸೂರಿನಲ್ಲಿ ಈ ಸೋಂಕಿನ ಸಿಂಪ್ಟೆಂಸ್ ಇರುವವರು ಯಾರೂ ಪತ್ತೆ ಆಗಿಲ್ಲ. ಹೀಗಾಗಿ ಮೈಸೂರಿಗರಿಗೆ ಕರೋನೋ ಭೀತಿ ಬೇಡ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದರು.
ಈ ಬಗ್ಗೆ ಇಂದು ಮಾತನಾಡಿದ ಡಿಸಿ ಅಭಿರಾಂ ಜೀ ಶಂಕರ್, ಮೈಸೂರಿಗೆ ಹೊರ ದೇಶಕ್ಕೆ ಹೋಗಿ ಬಂದವರನ್ನು ತಪಾಸಣೆಗೆ ಒಳಪಡಿಲಾಗುತ್ತಿದೆ. ಮಾಸ್ಕ್ ಅನ್ನು ಅನಗ್ಯವಾಗಿ ಧರಿಸುವ ಅಗತ್ಯ ಇಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ರೀತಿ ರೋಗ ಲಕ್ಷಣಗಳು ಕಂಡುಬಂದರೆ ಅವರನ್ನು ಕೂಡಲೆ ವಿಶೇಷ ಚಿಕಿತ್ಸ ಕೊಠಡಿಯಲ್ಲಿ ಇರಿಸಿ ತಪಾಸಣೆ ಮಾಡಲಾಗುವುದು. ಸಾರ್ವಜನಿಕ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಜ್ವರ ತಲೆ ನೋವು , ಕೆಮ್ಮು ಕಣ್ಣು ಮೂಗು ಬಾಯಿಯಲ್ಲಿ ಇನ್ಫೆಕ್ಷನ್ ಕಂಡು ಬಂದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಹಾಗೆಯೇ ಕೆ ಆರ್ ಆಸ್ಪತ್ರೆ , ಜಿಲ್ಲಾ ಸಂಕ್ರಾಮಿಕರೋಗಗಳ ಆಸ್ಪತ್ರೆ ವಿಶೇಷ ವಾರ್ಡ್ ತೆರೆಯಲಾಗಿದೆ. ಯಾರು ಕೂಡ ಅನಗ್ಯವಾಗಿ ಭಯಪಡಬೇಕಿಲ್ಲ. ಕರೋನೋ ಭೀತಿ ಬೇಡ ಎಂದು ಜಿಲ್ಲಾಧಿಕಾರಿ ಅಭಿರಾಮ ಜಿ ಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಹಾಸನದಲ್ಲಿ ಕರೋನ ವೈರಸ್ ಶಂಕೆ ಹಿನ್ನಲೆ: ಮೈಸೂರಿನಲ್ಲಿ ಮುಂದುವರೆದ ಬಿ ಆಲರ್ಟ್…
ಹಾಸನದಲ್ಲಿ ಕರೋನ ವೈರಸ್ ಶಂಕೆ ಹಿನ್ನಲೆ ಮೈಸೂರಿನಲ್ಲಿ ಬಿ ಆಲರ್ಟ್ ಮುಂದುವರೆದಿದೆ. ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ, ಕೇಂದ್ರನಗರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧಡೆ ಜಾಗೃತಿ ಮೂಡಿಸಲಾಗುತ್ತಿದೆ.
ಅಧಿಕಾರಿಗಳು ತಂಡೋಪತಂಡವಾಗಿ ಮೈಸೂರಿನ ವಿವಿಧೆಡೆ ಸಾರ್ವಜನಿಕರಿಗೆ ಕರೋನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಕರೋನಾ ಬಗ್ಗೆ ಆತಂಕ ಬೇಡ, ಕರೋನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ತಿಳಿಸುತ್ತಿದ್ದು ಈ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ಜನರಿಗೆ ಕರೊನಾ ಬಗ್ಗೆ ಇರುವ ಆತಂಕವನ್ನು ದೂರ ಮಾಡಲು ಮುಂದಾಗಿದ್ದಾರೆ.
Key words: Mysoreans -not fear- coronavirus- DC Abhiram Jee Shankar