ಎಂಇಎಸ್ ಬಗ್ಗೆ ಎರಡು ನಾಲಗೆಯಲ್ಲಿ ಮಾತನಾಡುವ ʼಕೈಚಳಕʼದ ಮರ್ಮವೇನು? ಕಾಂಗ್ರೆಸ್ ಕುಟುಕಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಡಿಸೆಂಬರ್,21,2021(www.justkannada.in): ನಮ್ಮ ರಾಯಣ್ಣರ ಪ್ರತಿಮೆ ಮೇಲೆ ʼಕೈʼ ಇಟ್ಟವರ ಮೇಲೆ ಕರುಣೆ ಯಾಕೆ? ಎಂಇಎಸ್ ಬಗ್ಗೆ ಎರಡು ನಾಲಗೆಯಲ್ಲಿ ಮಾತನಾಡುವ ʼಕೈಚಳಕʼದ ಮರ್ಮವೇನು? ಮಸೂದೆಗಳನ್ನು ಇಟ್ಟುಕೊಂಡು ಕನ್ನಡದ ಆಸ್ಮಿತೆಯ ಮೇಲಾದ ದಾಳಿಯನ್ನು ʼವಿಷಯಾಂತರʼ ಮಾಡುವ ಹುನ್ನಾರ ಏಕೆ? ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ ಎಂದು ನಾನು ಹಿಂದೆಯೇ ಹೇಳಿದ್ದೆ. ಈಗಲೂ ಅದೇ ಮಾತನ್ನು ಹೇಳುತ್ತಿದ್ದೇನೆ. ಬೆಳಗಾವಿಯಲ್ಲಿ ನಡೆದ ವಿಕೃತಿ ಬಗ್ಗೆ, #ಕನ್ನಡಿಗರಹೆಮ್ಮೆ ಸಂಗೊಳ್ಳಿ ರಾಯಣ್ಣ ಅವರಿಗಾದ ಅಪಚಾರದ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳ ಬದ್ಧತೆ ಬಗ್ಗೆ ಈಗ ಪ್ರಶ್ನೆ ಉಂಟಾಗಿದೆ.

ಮಾತೆತ್ತಿದರೆ ರಾಷ್ಟ್ರದ ಸಮಗ್ರತೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕವು 30 ರಾಜ್ಯಗಳಲ್ಲಿ ಒಂದು ರಾಜ್ಯವಷ್ಟೆ. ಕನ್ನಡವು ದೇಶ ಭಾಷೆಗಳಲ್ಲಿ ಒಂದು ಭಾಷೆ ಮಾತ್ರ. ಆದರೆ ನಮಗೆ ಕರ್ನಾಟಕವೇ ಕರ್ಮಭೂಮಿ. ಕನ್ನಡವೇ ತಾಯಿ. ನಾವು ಕನ್ನಡಮ್ಮನ ಕರುಳಬಳ್ಳಿಗಳು.

ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ ಕೇವಲ ಚುನಾವಣೆ ಬಂದಾಗ ವೋಟ್ ಮಾಡುವ ಮತಯಂತ್ರ ಹಾಗೂ ತೆರಿಗೆ ರೂಪದಲ್ಲಿ ಕೇಂದ್ರದ ಖಜಾನೆ ತುಂಬುವ ಅಕ್ಷಯ ಪಾತ್ರೆ. ಆದರೆ; ನಮಗೆ ನೆರೆ, ಬರ ಬಂದಾಗ ಅವರ ಮುಂದೆಯೇ ಭಿಕ್ಷೆಗೆ ನಿಲ್ಲಬೇಕು! ಇದೆಂಥಾ ವಿಪರ್ಯಾಸ? ಎಂದು ಹೆಚ್.ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಗಡಿ, ಭಾಷೆ, ಜಲದ ಪ್ರಶ್ನೆ ಬಂದಾಗ ಆ ಪಕ್ಷಗಳ ಆದ್ಯತೆ ಕನ್ನಡ-ಕರ್ನಾಟಕ ಅಲ್ಲ. ಕನ್ನಡದ ಮೇಲೆ ಹಿಂದಿ ಹೇರಿಕೆ ಮಾಡಲು ಬಂದವರನ್ನು ಸಹಿಸಿಕೊಳ್ಳುತ್ತಿದ್ದೇವೆ. ಕನ್ನಡಿಗರ ತೆರಿಗೆ ಹಣದಲ್ಲಿ ಜಾರಿ ಮಾಡಿದ ಯೋಜನೆ, ರಸ್ತೆ, ಸೇತುವೆಗಳಿಗೆ ಮಹಾರಾಷ್ಟ್ರದಲ್ಲಿ ಹುಟ್ಟಿದವರ ಹೆಸರಿಟ್ಟು ಔದಾರ್ಯ ತೋರುತ್ತಿದ್ದೆವೆ. ಇದು ಇನ್ನೆಷ್ಟು ದಿನ? ಎಂದು ಹೆಚ್.ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೆಂಥಾ ದೇಶಪ್ರೇಮ? ರಾಷ್ಟ್ರಪ್ರೇಮದಲ್ಲೂ ಬೇಧ ಭಾವವೇ?

ಬೆಳಗಾವಿಯ ಒಂದು ಹಳ್ಳಿಯಲ್ಲಿ ಹುಟ್ಟಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಅದೇ ಬ್ರಿಟಿಷರು ಬಿಗಿದ ನೇಣು ಹಗ್ಗಕ್ಕೆ ಕೊರಳು ಕೊಟ್ಟ ಸಂಗೊಳ್ಳಿ ರಾಯಣ್ಣ ಅವರನ್ನು ಅಪಮಾನಿಸುತ್ತಾರೆ. ಅದೇ ಮೊಘಲರ ವಿರುದ್ಧ ಹೋರಾಡಿದ ಶಿವಾಜಿಯನ್ನು ಕೊಂಡಾಡುತ್ತಾರೆ. ಇದೆಂಥಾ ದೇಶಪ್ರೇಮ? ರಾಷ್ಟ್ರಪ್ರೇಮದಲ್ಲೂ ಬೇಧ ಭಾವವೇ? ಎಂದು ಪ್ರಶ್ನಿಸಿರುವ ಹೆಚ್.ಡಿಕೆ  2006ರಲ್ಲಿ ಶಿವಸೇನೆ-ಎಂಇಎಸ್ ಗಡಿತಂಟೆ  ಮಾಡಿದಾಗ, ಆಗ ಕೇಂದ್ರದಲ್ಲಿ ಗೃಹಮಂತ್ರಿಯಾಗಿದ್ದ ಅದೇ ರಾಜ್ಯದ  ನಾಯಕರು ಬೆಳಗಾವಿ ಮೇಲೆ ಕಣ್ಣು ಹಾಕಿದಾಗ, ಅಲ್ಲಿ ವಿಧಾನಕಲಾಪ ನಡೆಯಿತು. ಸುವರ್ಣಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆಯೂ ಆಯಿತು. ಇದು ಕನ್ನಡದ ಒಂದು ಸಣ್ಣ ಪಕ್ಷಕ್ಕೆ ಇದ್ದ ಬದ್ಧತೆ. ಈ ಎದೆಗಾರಿಕೆ ರಾಷ್ಟ್ರೀಯ ಪಕ್ಷಗಳಿಗೆ ಏಕಿಲ್ಲ? ಎಂದು ಕಾಂಗ್ರೆಸ್ ಮತ್ತು ಬಿಜೆಪಿಗೆ ಚಾಟಿ ಬೀಸಿದ್ದಾರೆ.

Key words: mystery -MES -two tongues-Former CM -HD Kumaraswamy -Congress.

ENGLISH SUMMARY….

What is the secret behind dual views of the Congress on MES: Former CM H.D. Kumaraswamy questions
Bengaluru, December 21, 2021 (www.justkannada.in): Former Chief Minister H.D. Kumaraswamy has questioned the Congress party leaders for having a dual view against those who vandalized freedom fighter Sangolli Rayanna’s statue in Belagavi.
In his tweet, H.D. Kumaraswamy expressed his view that the incident that took place in Belagavi has raised a question against the national party’s commitment to protecting the interests of the state and the people. “Karnataka is just a vote bank for the National parties, they come here only during elections. Our people and our state are just like an EVM machine, and a treasure to fill the government exchequer. But when we ask for help during times of crisis like drought or floods we have to beg them,” he said.
Keywords: Former CM H.D. Kumaraswamy/ Congress/ condemns/ MES