ದಸರಾ ಸಂಭ್ರಮ: ಮೊದಲ ದಿನ ಏನೆಲ್ಲಾ ಕಾರ್ಯಕ್ರಮ ಇಲ್ಲಿದೆ ಮಾಹಿತಿ…

ಮೈಸೂರು, ಅಕ್ಟೋಬರ್ 15, 2023(www.justkannada.in): ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು, ಇಂದಿನಿಂದ 10 ದಿನಗಳ ಕಾಲ ಮೈಸೂರು ಬಣ್ಣಬಣ್ಣದ ಬೆಳಕಿನಲ್ಲಿ ಮಿಂದೇಳಲಿದೆ.

ಇಂದಿನಿಂದ ಹತ್ತು ದಿನ ನಾನಾ ಬಗೆಯ ಕಾರ್ಯಕ್ರಮಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ. ದಸರಾ ಮೊದಲ ದಿನವಾದ ಇಂದು ನಾನಾ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಆ ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ…

 

ಮೈಸೂರು ದಸರಾ ಇಂದಿನ ಕಾರ್ಯಕ್ರಮಗಳ ಪಟ್ಟಿ
ಬೆಳಗ್ಗೆ 11 ಗಂಟೆ: ಖಾಸಗಿ ದರ್ಬಾರ್​, ರಾಜವಂಶಸ್ಥ ಯದುವೀರ್ ಒಡೆಯರ್​​ ಭಾಗಿ
ಬೆಳಗ್ಗೆ 11.30: ಚಲನಚಿತ್ರೋತ್ಸವ, ಕರ್ನಾಟಕ ಕಲಾಮಂದಿರ
ಮಧ್ಯಾಹ್ನ 12.30: ಫಲಪುಷ್ಪ ಪ್ರದರ್ಶನ, ಕುಪ್ಪಣ್ಣ ಪಾರ್ಕ್​, ಮೈಸೂರು
ಮಧ್ಯಾಹ್ನ 1 ಗಂಟೆ : ಆಹಾರ ಮೇಳ, ಭಾರತ್​ ಸ್ಕೌಟ್ಸ್​​​, ಗೈಡ್ಸ್​​ ಮೈದಾನ
ಸಂಜೆ 4 ಗಂಟೆ : ಕುಸ್ತಿ ಪಂದ್ಯಾವಳಿ, ದೇವರಾಜ ಅರಸು ಕ್ರೀಡಾಂಗಣ
ಸಂಜೆ 5 ಗಂಟೆ : ಚಿತ್ರಕಲಾ ಪ್ರದರ್ಶನ, ಕರ್ನಾಟಕ ಕಲಾಮಂದಿರ
ಸಂಜೆ 5.30 : ನವರಾತ್ರಿ ರಂಗೋತ್ಸವ, ಕರ್ನಾಟಕ ಕಲಾಮಂದಿರ ರಂಗಾಯಣ
ಸಂಜೆ 6.30 : ವಿದ್ಯುತ್​ ದೀಪಾಲಂಕಾರ, ಹಸಿರು ಮಂಟಪ, ಮೈಸೂರು