ಮೈಸೂರು, ಆ,23, 2019 (www.justkannada.in news) ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮೊದಲ ಹಂತವಾದ ‘ ಗಜಪಯಣ ‘ ನಿನ್ನೆಯಷ್ಟೆ ಮುಗಿದಿದ್ದು, ಆನೆಗಳು ಮೈಸೂರಿಗೆ ಆಗಮಿಸಿ ನಾಡಹಬ್ಬಕ್ಕೆ ದಿನಗಣನೆಯನ್ನು ನೆನಪಿಸಿವೆ. ಆದರೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮಾತ್ರ ಇನ್ನು ನಿದ್ದೆಯಿಂದ ಮೇಲೆದಿಲ್ಲ. ಕಾರಣ ಪ್ರವಾಸಿಗರಿಗೆ ದಸರಾ ಕುರಿತು ಮಾಹಿತಿ ನೀಡುವ ವೆಬ್ ಸೈಟ್ ಇನ್ನು ಸಿದ್ಧವಾಗಿಲ್ಲ.
ಮೈಸೂರು ದಸರಾ ಬಗ್ಗೆ ಮಾಹಿತಿ ನೀಡುವ ವೆಬ್ ಸೈಟ್ ರೂಪಿಸುವ ಕೆಲಸವನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ. ಸದ್ಯ, ವೆಬ್ ಸೈಟ್ ನಲ್ಲಿ ದಸರಾ ನಡೆಯುವ ದಿನಾಂಕ ಮಾತ್ರವಿದ್ದು, COMING SOON ಎಂಬ ಮಾಹಿತಿ ಫಲಕ ಮಾತ್ರ ಕಾಣಿಸುತ್ತಿದೆ.
ದಸರಾಗೆ ಕೆಲವು ದಿನಗಳು ಬಾಕಿ ಇರುವಾಗ ವೆಬ್ ಸೈಟ್ ಆರಂಭಿಸುವುದು ಈಗ ವಾಡಿಕೆ ಎಂಬಂತಾಗಿದೆ. ಪ್ರತಿ ವರ್ಷವು ಇದೇ ಕಥೆ. ಮಾಧ್ಯಮಗಳು ಈ ಬಗ್ಗೆ ಎಷ್ಟೆ ಎಚ್ಚರಿಕೆ ನೀಡಿದರು ಅಧಿಕಾರಿಗಳು ಮಾತ್ರ ಡೊಂಟ್ ಕೇರ್. ವಿದೇಶ, ಹೊರ ರಾಜ್ಯದಿಂದ ಬರುವ ಪ್ರವಾಸಿಗರಿಗೆ ದಸರಾ ಬಗ್ಗೆ ಅ ಕಡೆ ಗಳಿಗೆಯಲ್ಲಿ ಮಾಹಿತಿ ಲಭಿಸಿದೆ ಅದರಿಂದ ಏನು ಪ್ರಯೋಜನವಾಗದು.
ದಸರಾಗೆ ಐದಾರು ತಿಂಗಳು ಮುಂಚಿತವಾಗಿಯೇ ವೆಬ್ ಸೈಟ್ ಕಾರ್ಯ ನಿರ್ವಹಿಸಿದರೆ ಜನರಿಗೆ ಅಗತ್ಯ ಮಾಹಿತಿ ಲಭಿಸುತ್ತದೆ. ಜತೆಗೆ ದಸರಾಕ್ಕೆ ಆಗಮಿಸಲು ಪೂರ್ವ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಕೆಲವೇ ದಿನ ಬಾಕಿ ಇರುವಾಗ ಮಾಹಿತಿ ಸಿಕ್ಕರೆ ಅದರಿಂದ ಯಾರಿಗೂ ಉಪಯೋಗವಾಗದು.
ಮೈಸೂರು ದಸರಾಗೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣ ವಿನಿಯೋಗಿಸಿದರೂ ಈತನಕ ಶಾಶ್ವತ ವೆಬ್‌ಸೈಟ್ ರೂಪಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದಸರಾ ಆರಂಭಕ್ಕೂ ಕೆಲವು ದಿನಗಳ ಮುಂಚೆ ಅಥವಾ ಆರಂಭದ ಬಳಿಕ ಲಾಂಚ್ ಆಗುವ ವೆಬ್‌ಸೈಟ್ ದಸರೆಯ 9 ದಿನಗಳ ನಂತರ ಸ್ಥಬ್ಧವಾಗುತ್ತದೆ. ಆದ್ದರಿಂದ ‘ದಸರಾ ಕುರಿತು ಮಾಹಿತಿ ನೀಡುವ ಶಾಶ್ವತ ವೆಬ್‌ಸೈಟ್ ರೂಪಿಸುವ ಅಗತ್ಯವನ್ನು ಸರಕಾರ ಮನಗಾಣಬೇಕಿದೆ.
key words : mysuru-dasara2019-website-still under-construction.
0009
SUMMARY:
Mysore Dasara 2019 web site which has never been opened. ‘Gajapayana’, the first phase of the Mysore Dasara Festival. Karnataka Tourism Department is responsible to develop dasara website. but the web site that provides information about tourists is not ready The website has only the date of Dasara and only the information panel COMING SOON appears.