ಬೆಂಗಳೂರು, ಆಗಸ್ಟ್ ೧೪, ೨೦೨೧ (www.justkannada.in): ಕೋವಿಡ್-೧೯ ಸಾಂಕ್ರಾಮಿಕಕ್ಕೆ ಸಂಬಂಧಪಟ್ಟಂತೆ ನಡೆಸಿರುವಂತಹ ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಕರ್ನಾಟಕದಲ್ಲಿ ಬೆಂಗಳೂರು ಅತೀ ಹೆಚ್ಚಿನ ಕೋವಿಡ್ ಸೋಂಕಿತರನ್ನು ಹೊಂದಿದ್ದ ನಗರವಾಗಿದ್ದರೂ ಸಹ, ಇತ್ತೀಚಿನ ಸೇರೊಪ್ರಿವ್ಯಾಲೆನ್ಸ್ ಸಮೀಕ್ಷೆ ಪ್ರಕಾರ ಸಾಂಕ್ರಾಮಿಕ ಹರಡುವ ಸಂಭವದ ಶೇಕಡವಾರು ಪ್ರಮಾಣದಲ್ಲಿ ಮೈಸೂರು ಹೆಚ್ಚು ಅಪಾಯದಲ್ಲಿದೆ..!
ನಾವೆಲ್ ಕೊರೊನ ವೈರಾಣುವಿನ ವಿರುದ್ಧದ ಇಮ್ಯೂನೊಗ್ಲೋಬಿನ್ ಜಿ (ಐಜಿಜಿ) ಸೆರೊಪ್ರಿವ್ಯಾಲೆನ್ಸ್ ಪ್ರತಿಕಾಯಗಳ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆಯ ಪೈಕಿ ಶೇ.೧೫.೬ರಷ್ಟು ಜನಸಂಖ್ಯೆ ಕೋವಿಡ್ ಸಾಂಕ್ರಾಮಿಕಕ್ಕೆ ಹೆಚ್ಚು ಬಹಿರಂಗಗೊಂಡಿದ್ದರಂತೆ!
ವಿವಿಧ ಜಿಲ್ಲೆಗಳ ಪೈಕಿ ಮೈಸೂರು ಅತೀ ಹೆಚ್ಚಿನ ಹರಡುವಿಕೆ ಪ್ರಮಾಣ ಹೊಂದಿತ್ತು (ಶೇ.೩೩.೬). ನಂತರದಲ್ಲಿ ಮಂಡ್ಯ (ಶೇ.೩೧.೯), ಕೊಡಗು (ಶೇ.೨೭.೧), ಚಾಮರಾಜನಗರ (ಶೇ.೨೨.೬), ಕೋಲಾರ (ಶೇ.೨೦.೮), ಬೆಂಗಳೂರು ಗ್ರಾಮಾಂತರ (ಶೇ.೨೦.೩), ದಕ್ಷಿಣ ಕನ್ನಡ (ಶೇ.೧೯.೮), ಬೆಳಗಾವಿ (ಶೇ.೧೯.೪) ಹಾಗೂ ಬೆಂಗಳೂರು ನಗರ (ಶೇ.೧೮.೭) ಜಿಲ್ಲೆಗಳಿವೆ. ಈ ಪಟ್ಟಿಯಲ್ಲಿ ಎಲ್ಲಕ್ಕಿಂತ ಕೆಳಗಿನ ಹಂತದಲ್ಲಿದ್ದದ್ದು ಹಾವೇರಿ ಜಿಲ್ಲೆ (ಶೇ.೩.೭).
ಕರ್ನಾಟಕದಲ್ಲಿ ಆ್ಯಂಟಿ-ಸಾರ್ಸ್-ಕೋವಿಡ್-೨(ಐಜಿಜಿ) ಆ್ಯಂಟಿಬಾಡಿ ಹಾಗೂ ಸಕ್ರಮ ಸೋಂಕಿನ ಪರಿಣಾಮವನ್ನು ಅಂದಾಜಿಸುವ ನಿಟ್ಟಿನಲ್ಲಿ ಇದು ಜನವರಿ ೨೫ ರಿಂದ ಫೆಬ್ರವರಿ ೧೮, ೨೦೨೧ರವರೆಗೆ ರಾಜ್ಯದಾದ್ಯಂತ ನಡೆಸಿದಂತಹ ಎರಡನೇ ಸುತ್ತಿನ ಸಮೀಕ್ಷೆಯಾಗಿದೆ. ಈ ವರದಿಯ ಪ್ರಕಾರ, ಎರಡನೇ ಸೆರೊಪ್ರಿವ್ಯಾಲೆನಸ್ ಸಮೀಕ್ಷೆಯ ಅಂದಾಜು ಐಜಿಜಿ ಹರಡುವಿಕೆ (೧೫.೬%), ಕಳೆದ ವರ್ಷ ನಡೆಸಿದಂತಹ (ಐಜಿಜಿ ಹರಡುವಿಕೆ ೧೬.೮%) ಮೊದಲ ಸಮೀಕ್ಷೆಯ ಅಂತ್ಯದಲ್ಲಿದ್ದಂತಹ ಶೇ.೨೭.೭ ಅಂದಾಜು ಒಟ್ಟು ಸೋಂಕಿನ ಪ್ರಮಾಣಕ್ಕಿಂತ ಮಹತ್ತರವಾದ ಮಟ್ಟದಲ್ಲಿ ಕಡಿಮೆ ಇದೆ.
“ನಮ್ಮ ಅಂದಾಜಿನ ಪ್ರಕಾರ ಫೆಬ್ರವರಿ ೨೦೨೧ರ ವೇಳೆಗೆ ಕರ್ನಾಟಕದ ಒಟ್ಟು ಜನಸಂಖ್ಯೆಯ ಪೈಕಿ ೩೫.೮% ರಷ್ಟಿತ್ತು. ಈ ಸಮೀಕ್ಷೆ ಕರ್ನಾಟಕದಾದ್ಯಂತ ಎಲ್ಲಾ ೩೦ ಜಿಲ್ಲೆಗಳಲ್ಲಿರುವ ೨೯೦ ಆಸ್ಪತ್ರೆಗಳಲ್ಲಿ ೪೧,೨೨೮ ವ್ಯಕ್ತಿಗಳನ್ನು ವ್ಯಾಪಿಸಿತು (ಕೆಳ, ಮಧ್ಯಮ ಹಾಗೂ ಅತೀ ಹೆಚ್ಚಿನ ಅಪಾಯ).
ಈ ವರದಿಯ ಪ್ರಕಾರ “ಒಪ್ಪಿಗೆ ನೀಡಿದಂತಹ ವ್ಯಕ್ತಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಹಾಗೂ ಆ್ಯಂಟಿಬಾಡಿ ಐಜಿಜಿ ಪರೀಕ್ಷೆಗಳನ್ನು ನಡೆಸಲಾಯಿತು. ಒಟ್ಟಾರೆ ಐಜಿಜಿ (IgG) ಸೆರೊಪ್ರಿವ್ಯಾಲೆನ್ಸ್ ಶೇ.೧೫.೬ರಷ್ಟಿತ್ತು. ರಾಜ್ಯವಾರು ಮರಣ ಪ್ರಮಾಣ ಅಂದಾಜು ೦.೧೧, ಹಾಗೂ ಕೋವಿಡ್-೧೯ನ ಹೊರೆ ಶೇ.೨೬.೧ ರಿಂದ ಶೇ.೩.೭೭,” ಎಂದು ಅಂದಾಜಿಸಲಾಗಿದೆ.
ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಅಪಾಯದಲ್ಲಿದ್ದಾರೆ. ಜೊತೆಗೆ ೧೮-೨೯ ವಯೋಮಾನದ ಗುಂಪಿನವರ ಹೋಲಿಕೆಯಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಅಪಾಯದಲ್ಲಿದ್ದಾರೆ.
ವರದಿಯ ಪ್ರಕಾರ, ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶಗಳು ಹೆಚ್ಚಿನ ಅಪಾಯದಲ್ಲಿದೆಯಂತೆ! ಗಭಿರ್ಣಿಯರಲ್ಲಿ ಉಸಿರಾಟದ ತೊಂದರೆ ಗೋಚರಿಸುವ ಅಪಾಯ ಹೆಚ್ಚಂತೆ!
ಈ ವರದಿಯು ಕೋವಿಡ್-೧೯ರಿಂದ ಸಂಭವಿಸಬಹುದಾಗಿರುವಂತಹ ಮರಣ ಪ್ರಮಾಣವನ್ನು ಕಡಿಮೆಗೊಳಿಸಲು ನೆರವಾಗುವಂತಹ ಉತ್ತಮ ತಪಾಸಣಾ ವ್ಯವಸ್ಥೆ, ವರದಿಗಾರಿಕೆ ಅಥವಾ ಚಿಕಿತ್ಸಾ ನಿರ್ವಹಣೆಯ ಅಗತ್ಯವಿರುವ ಜಿಲ್ಲೆಗಳನ್ನು ಗುರುತಿಸುವಲ್ಲಿ ನೆರವಾಗಿದೆ. ಜೊತೆಗೆ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
key words : mysuru-had-maximum-exposure-to-covid-study