ಮೈಸೂರು,ಏಪ್ರಿಲ್,17,2025 (www.justkannada.in): ಎನ್ ಎಚ್ 275 ಕುಶಾಲನಗರ – ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಯಿಂದ ಓಡಾಡಲು ರಸ್ತೆಗಾಗಿ ಆಗ್ರಹಿಸಿ ರೈತರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
NH 275 ಕುಶಾಲನಗರ TO ಬೆಂಗಳೂರು ರಸ್ತೆ ಹಾದು ಹೋಗುತ್ತಿರುವುದರಿಂದ ಸುತ್ತ ಮುತ್ತ ರೈತರಿಗೆ ಸಮಸ್ಯೆ ಉಂಟಾಗಿದೆ. ಹೀಗಾಗಿ ಇಲವಾಲ ಹೋಬಳಿ ಅವರಹಳ್ಳಿಯಲ್ಲಿ ಅಂಡರ್ ಪಾಸ್ ಅಥವಾ ಫ್ಲೈ ಓವರ್ ಬಿಡ್ಜ್ ನಿರ್ಮಾಣ ಮಾಡಬೇಕೆಂದು ರೈತರು, ಮತ್ತು ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಇಲವಾಲ ಹೋಬಳಿ ಅವರಹಳ್ಳಿಯಲ್ಲಿ NH 275 ಕುಶಾಲನಗರ TO ಬೆಂಗಳೂರು ರಸ್ತೆ ಹಾದು ಹೋಗುತ್ತಿರುವುದರಿಂದ ಸುತ್ತ ಮುತ್ತ ರೈತರಿಗೆ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯನ್ನು ಅಧಿಕಾರಿಗಳಿಗೆ , ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ,
ಆವರಹಳ್ಳಿ ,ಬೀಚನಕುಪ್ಪೆ , ಸಂಕಳ್ಳಿ, ಬಸ್ತಿಪುರ, ಹುಲಿಕೆರೆ, ಹುಂಡವಾಡಿ ಗ್ರಾಮಗಳಿಗೆ ಓಡಾಡುವ ದಾರಿಯನ್ನು ಮುಚ್ಚಿ ಎಕ್ಸ್‌ಪ್ರೆಸ್ ಹೈವೇ ಮಾಡುತ್ತಿರುವುದರಿಂದ ಗ್ರಾಮಸ್ಥರಿಗೆ ಓಡಾಡಲು ರಸ್ತೆಯೇ ಇಲ್ಲದಂತಾಗುತ್ತದೆ. ಆದ್ದರಿಂದ ಇಲ್ಲಿ ಒಂದು ಅಂಡರ್ ಪಾಸ್ ಮಾಡಬೇಕು. ಇಲ್ಲ ಫ್ಲೈ ಓವರ್ ಬ್ರಿಡ್ಜ್ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸ್ಥಳೀಯ ಗ್ರಾಮಸ್ಥರು, ರೈತರು ಭಾಗಿಯಾಗಿದ್ದರು.
Key words: Mysuru, Protest, road, Express Highway