ಮೇಲುಕೋಟೆಯಲ್ಲಿ ನೂತನ ನಾಡ ಕಚೇರಿ ಉದ್ಘಾಟಿಸಿದ ಸಚಿವ ಚಲುವರಾಯಸ್ವಾಮಿ

ಮೇಲುಕೋಟೆ, ಜನವರಿ,7,2025 (www.justkannada.in): ಇಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಜಿಲ್ಲೆಯ ಸುಪ್ರಸಿದ್ಧ ತಾಣವಾದ ಮೇಲುಕೋಟೆಯಲ್ಲಿ ನೂತನ ನಾಡ ಕಚೇರಿ ಕಟ್ಟಡ ಉದ್ಘಾಟನೆ ಮಾಡಿದರು.

ನಾಡ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ,  ನಮ್ಮ ಸರ್ಕಾರ ರೈತಪರ ಸರ್ಕಾರ,  ಜಿಲ್ಲೆಯಲ್ಲಿ ಇರುವ ತಹಶೀಲ್ದಾರ್ ಕೋರ್ಟ್, ಎಸಿ ಕೋರ್ಟ್, ಡಿ.ಸಿ ಕೋರ್ಟ್ ನಲ್ಲಿ ಬಾಕಿ ಇದ್ದ ಹಳೇ ಪ್ರಕರಣಗಳು ತುರ್ತಾಗಿ ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದ್ದೇವೆ. ಜಿಲ್ಲೆಯಲ್ಲಿ ಬಾಕಿ ಇದ್ದ ಹತ್ತು ಸಾವಿರ ಪ್ರಕರಣಗಳನ್ನು ಒಂದೇ ವರ್ಷದಲ್ಲಿ ಇತ್ಯರ್ಥಗೊಳಿಸಲಾಗಿದೆ.  ರಾಜ್ಯಾದ್ಯಂತ ಈ ಆಂದೋಲನ ಮುಂದುವರೆಯುತ್ತದೆ ಎಂದರು.

ಈ  ಹಿಂದೆ ಜಿಲ್ಲೆಯಲ್ಲಿ ಜಮೀನು ಸರ್ವೆಗೆ ಸಂಬಂಧಿಸಿದಂತೆ ವರ್ಷಕ್ಕೆ ನೂರು 1  to 5 ಸೇವೆ ಮಾಡುವುದು ಕಷ್ಟವಾಗಿತ್ತು. ಆದರೆ ಕಂದಾಯ ಇಲಾಖೆ ಸಚಿವರು ಮತ್ತು ಜಿಲ್ಲಾಡಳಿತದ  ಸಹಕಾರದಿಂದ ಒಂದೇ ವಾರದಲ್ಲಿ 270 ಕ್ಕೂ ಹೆಚ್ಚು ಒನ್ ಟು ಫೈ ಇತ್ಯರ್ಥ ಮಾಡಿ ಸ್ಕೆಚ್ ಪೋಡಿ ಆಕಾರ ಬಂದ್ ಎಲ್ಲವನ್ನೂ ಒಂದೇ ದಾಖಲೆಯಲ್ಲಿ ನೀಡುತ್ತಿದ್ದೇವೆ ಎಂದರು.

ಜಿಲ್ಲೆಯ ಜನತೆ ಸರ್ಕಾರದೊಂದಿಗೆ ಸಹಕರಿಸಿದರೆ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ವೇಗವಾಗಿ ನಡೆಯುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅನೇಕ ದಿನಗಳ ಹಿಂದೆ ನಿರ್ಮಾಣಗೊಂಡ ನಾಡ ಕಛೇರಿಯನ್ನು ಉದ್ಘಾಟಿಸುವ ಸಂದರ್ಭ ಇಂದು ಬಂದಿದೆ.  ಮೇಲುಕೋಟೆಯ ಸುತ್ತ ಮುತ್ತಲಿನ ಗ್ರಾಮಸ್ಥರು ಗ್ರಾಮ ಸೇವೆಗಳಿಗಾಗಿ ಪಾಂಡವಪುರಕ್ಕೆ ಹೋಗುವ ಅವಶ್ಯಕತೆ ಇಲ್ಲ, ಇನ್ನೂ ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮ ಸೇವೆಗಳನ್ನು ನಾಡ ಕಚೇರಿ ಮೂಲಕ ಪಡೆದುಕೊಳ್ಳಬಹುದು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್, ಮುಖಂಡರಾದ ತ್ಯಾಗರಾಜು, ಭಾಗ್ಯಮ್ಮ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Key words: Minister, Chaluvarayaswamy, inaugurates, NADA office, Melukote