ಮೈಸೂರು,ಫೆಬ್ರವರಿ,18,2021(www.justkannada.in) : ಮೈಸೂರು ಜಿಲ್ಲೆ ಹಾಗೂ ತಾಲ್ಲೂಕು ನಾಗನಹಳ್ಳಿ ರೈಲ್ವೆ ಸ್ಯಾಟಿಲೈಟ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರದಿಂದ ಉಚಿತವಾಗಿ ಕೊಡಿಸುವಂತೆ ಹಾಗೂ ಸದರಿ ಕಾಮಗಾರಿಗೆ ಪ್ರಾರಂಭಿಕವಾಗಿ ಬಜೆಟ್ ನಲ್ಲಿ ಕನಿಷ್ಠ 200 ಕೋಟಿ ರೂ. ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
49 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ 63.50 ಕೋಟಿ ರೂ. ಅಗತ್ಯ
ಹುಣಸೂರು ತಾಲ್ಲೂಕಿನ ಮರದೂರು ಗ್ರಾಮದ ಬಳಿ ಲಕ್ಷ್ಮತೀರ್ಥ ನದಿ ಮೂಲದಿಂದ ಹಾರಂಗಿ ವಿಭಾಗದಡಿಯಲ್ಲಿ ಹುಣಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬತ್ತಿ ಹೋಗಿರುವ ಸುಮಾರು 49 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಗೆ ಅಗತ್ಯವಿರುವ 63.50 ಕೋಟಿ ರೂ.ಗಳನ್ನು ಈ ಸಾಲಿನ ಬಜೆಟ್ ನಲ್ಲಿ ಕೊಡಿಸುವಂತೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಲ್ಲಿ ವಿನಂತಿಸಿದರು.
key words : Naganahalli-Railway Satellite-construction-budget-200 Crore Rs.-giving-MP Pratap shinmha-Appeal