ಮೈಸೂರು,ಆ,23,2019(www.justkannada.in): ಬರ,ನೆರೆ, ಎರಡು ರಾಜ್ಯದಲ್ಲಿ ಆವರಿಸಿದೆ. ಸೌಜನ್ಯಕ್ಕಾದ್ರೂ ಪ್ರಧಾನಿ ಮೋದಿ ರಾಜ್ಯದ ನೆರೆ ಪೀಡಿತ ಪ್ರದೇಶಕ್ಕೆ ಆಗಮಿಸದೇ ಇರುವುದು ಖಂಡನಿಯ. ದೇಶ ಕಂಡ ಅತ್ಯಂತ ನಾಲಯಕ್ ಪ್ರಧಾನಿ ನರೇಂದ್ರ ಮೋದಿ ಎಂದು ರೈತ ಮುಖಂಡ ಬಡಗಲಾಪುರ ನಾಗೇಂದ್ರ ವಾಗ್ದಾಳಿ ನಡೆಸಿದರು.
ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತಮುಖಂಡ ಬಡಗಲಪುರ ನಾಗೇಂದ್ರ, ಮಹಾರಾಷ್ಟ್ರ, ಕೇರಳದಲ್ಲಿ ಬಿದ್ದ ಮಳೆಯಿಂದಾಗಿ ರಾಜ್ಯದ ಡ್ಯಾಂಗಳು ತುಂಬಿ ಪ್ರವಾಹ ಆವರಿಸಿತು. ನಿರ್ಮಲ ಸೀತಾರಾಮ್ ಸೇರಿದಂತೆ ಕೆಲವರು ಸಂತ್ರಸ್ತರನ್ನ ಭೇಟಿ ನೀಡಿದ್ದಾರೆ ಅಷ್ಟೇ.ಸೌಜನ್ಯಕ್ಕಾದ್ರೂ ಪ್ರಧಾನಿ ಮೋದಿ ರಾಜ್ಯದ ನೆರೆ ಪೀಡಿತ ಪ್ರದೇಶಕ್ಕೆ ಆಗಮಿಸದೇ ಇರುವುದು ಖಂಡನಿಯ. ದೇಶ ಕಂಡ ಅತ್ಯಂತ ನಾಲಯಕ್ ಪ್ರಧಾನಿ ನರೇಂದ್ರ ಮೋದಿ ಎಂದು ಕಿಡಿಕಾರಿದರು.
ಒಡಿಸ್ಸಾದಲ್ಲಿ ನೆರೆ ಆವರಿಸಿದಾಗ ಚುನಾವಣೆ ಪ್ರಚಾರ ನಿಲ್ಲಿಸಿ ತುರ್ತು ವೈಮಾನಿಕ ಸಮೀಕ್ಷೆ ನೆಡೆಸಿ ಅಲ್ಲಿನ ಸಿಎಂ ರವರನ್ನ ಖುದ್ದಾಗಿ ಭೇಟಿಯಾಗಿ ನೆರವು ಘೋಷಣೆ ಮಾಡಿದ್ರು. ದಕ್ಷಿಣ ಭಾರತದ ನೆರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೇ ನಿರ್ಲಕ್ಷಿಸಿ ಮಲತಾಯಿ ಧೋರಣೆ ಮಾಡುತ್ತಿದೆ. ಮೋದಿ ನಡೆಗೆ ರೈತ ಸಂಘ ಖಂಡಿಸುತ್ತದೆ ಎಂದು ನಾಗೇಂದ್ರ ಹರಿಹಾಯ್ದರು.
ಆ.27 ರಂದು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಸಭೆ ನಡೆಸಲಿದ್ದೇವೆ. ಕೇಂದ್ರ ಸಂಪೂರ್ಣ ನೆರೆ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ನೆರೆ ಸಂತ್ರಸ್ತರೊಟ್ಟುಗೂಡಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತೇವೆ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡದೇ ಇದ್ದರೇ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ ಬಿಜೆಪಿ ನಾಯಕರ ಪ್ರವಾಸ ಇದು ನೆಪ ಅಷ್ಟೇ. ಇದರಿಂದ ರಾಜ್ಯದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ನೆನ್ನೆ ಕಾಕತಾಳೀಯವಾಗಿ ನೆಪಮಾತ್ರಕ್ಕೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ಆದ್ರೇ ಇದರಿಂದ ರಾಜ್ಯದ ರೈತರಿಗೆ ಯಾವುದೇ ಉಪಯೋಗವಿಲ್ಲ ಎಂದು ಸಚಿವರ ಭೇಟಿಗೆ ಬಡಗಲಪುರ ನಾಗೇಂದ್ರ ಟೀಕಿಸಿದರು.
ಸುದ್ದಿಗೋಷ್ಟಿಯಲ್ಲಿ ದರ್ಶನ್ ಪುಟ್ಟಣ್ಣಯ್ಯ, ಲೋಕೇಶ್, ಬಸವರಾಜ್, ಪುನೀತ್,ಮಂಟಗಳ್ಳಿ ಮಹೇಶ್, ಶಿವನಂಜು, ಭಾಗಿಯಾಗಿದ್ದರು.
Key words: Nagendra Modi – Nalyak -Prime Minister- flood-Badagalapura nagendra
…