ಮೈಸೂರು,ಏಪ್ರಿಲ್,16,2021(www.justkannada.in): ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕಿಸಿದ್ದ ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅನ್ ಫಿಟ್ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ತಲೆಹಿಡುಕರ ಪಕ್ಷ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ಕುರಿತು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು. ಇಂದು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್, ಕಾಂಗ್ರೆಸ್ ಪಕ್ಷ 135 ವರ್ಷ ಇತಿಹಾಸವಿರುವ ಪಕ್ಷ. ಕಾಂಗ್ರೆಸ್ ಪಕ್ಷದ ನಾಯಕರು ದೇಶದ ಹಿತದೃಷ್ಟಿಯಿಂದ ಬಲಿದಾನ ಮಾಡಿದ್ದಾರೆ. ನೀವು ರಾಜ್ಯಾಧ್ಯಕ್ಷರಾಗಿ ಏನು ಮಾಡಿದ್ದೀರಿ..? ಕಾಂಗ್ರೆಸ್ ಶಾಸಕರನ್ನು ಹೈಜಾಕ್ ಮಾಡಿ ಮುಂಬೈನಲ್ಲಿ ಇರಿಸಿದ್ದೀರಲ್ಲ ಅವರಿಗೆಲ್ಲಾ ಏನು ಸಪ್ಲೈ ಮಾಡಿದ್ದೀರಿ..? ಎಂದು ಪ್ರಶ್ನಿಸಿದರು.
ಈ ಕೂಡಲೇ ಹೇಳಿಕೆಯನ್ನ ಹಿಂಪಡೆಯದಿದ್ದಲ್ಲಿ ನಳೀನ್ ಕುಮಾರ್ ಕಟೀಲ್ ಗೆ ಕಂಡಕಂಡಲ್ಲಿ ಘೇರಾವ್ ಹಾಕಲಾಗುವುದು. ನಿಮ್ಮಂತಹ ರಾಜ್ಯಾಧ್ಯಕ್ಷ ಇಡೀ ದೇಶದಲ್ಲೇ ಇಲ್ಲಾ, ಯೂ ಆರ್ ಅನ್ಫಿಟ್ ಎಂದು ನಳೀನ್ ಕುಮಾರ್ ಕಟೀಲ್ ವಿರುದ್ಧ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಭ್ರಷ್ಟಾಚಾರದ ಕೂಪ ಎಂಬ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು…
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಕೂಪ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಗೆ ತಿರುಗೇಟು ನೀಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ , ರಾಜಕಾರಣಕ್ಕೆ ಬರುವ ಮುನ್ನಾ ಸಿ.ಟಿ. ರವಿ ಚಿಕ್ಕಮಗಳೂರಿನ ಬಸ್ ಸ್ಟ್ಯಾಂಡ್ ನಲ್ಲಿ ಏನ್ ಮಾಡ್ತಿದ್ರೀ? ರಾಜಕಾರಣಕ್ಕೆ ಬಂದ ಮೇಲೆ ನೀವು ಗಳಿಸಿರುವ ಆಸ್ತಿ ಎಷ್ಟು? ನಿಮ್ಮ ಮೇಲೆ ಲೋಕಾಯುಕ್ತದಲ್ಲಿ ಇರುವ ಅಕ್ರಮ ವ್ಯವಹಾರದ ಕೇಸ್ ಗಳೆಷ್ಟು? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಮೇಲೆ ಒಂದು ಇಂತಹ ಕೇಸ್ ಇದೆಯಾ..? ನೀವು ಬರೀ ಸುಳ್ಳು ಹೇಳುತ್ತಾ ತಿರುಗಬೇಡಿ. ನಮಗಿರುವ ಮಾಹಿತಿ ಪ್ರಕಾರ ಸಿ.ಟಿ.ರವಿ 300 ಕೋಟಿ ಆಸ್ತಿ ಮಾಡಿದ್ದಾರೆ. ಸಿ.ಟಿ.ರವಿ ಮೇಲೆ ಲೋಕಾಯುಕ್ತದಲ್ಲಿ 12 ಕೇಸ್ ಇದೆ ಎಂದು ಗಂಭೀರ ಆರೋಪ ಮಾಡಿದರು.
Key words: nalil kumar Katil -Unfit -BJP President’s- post-KPCC spokesperson- M. Lakshman