ಮೈಸೂರು, ಸೆಪ್ಟೆಂಬರ್ 5, 2021 (www.justkannada.in): ರಾಷ್ಟ್ರೀಯ ಶಿಕ್ಷಣ ನೀತಿಗೆ ಕಾಂಗ್ರೆಸ್ ವಿರೋಧ ವಿಚಾರ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಲಾರ್ಡ್ ಮೆಕಾಲೆ ಶಿಕ್ಷಣ ಪದ್ದತಿಯಲ್ಲಿ ಇಷ್ಟು ವರ್ಷ ಆಡಳಿತ ನಡೆಸಿದ್ರು. ಆದ್ದರಿಂದ ಸ್ವಾಭಿಮಾನ ದೇಶ ನಿರ್ಮಾಣ ಮಾಡೊದಕ್ಕೆ ಅವರಿಗೆ ಆಗಲಿಲ್ಲ. ವಿದೇಶಿ ಸಂಸ್ಕೃತಿಯಲ್ಲೇ ಬೆಳೆದು ಬಂದಿರುವ ಕಾಂಗ್ರೆಸ್ ಗೆ ಸ್ವದೇಶೀ ಚಿಂತನೆ ಇಲ್ಲ ಎಂದು ಟೀಕಿಸಿದ್ದಾರೆ.
ಹಾಗಾಗಿ ಕಾಂಗ್ರೆಸ್ ನ ನೀತಿ ಎಲ್ಲವನ್ನೂ ವಿರೋಧ ಮಾಡೋದು. ನರೇಂದ್ರ ಮೋದಿ ಬಂದಾಗಿಂದ ಮೋದಿಯ ಎಲ್ಲಾ ನೀತಿಯನ್ನು ವಿರೋಧ ಮಾಡ್ತಿದ್ದಾರೆ. ಯಾವುದೇ ತೀರ್ಮಾನಕ್ಕೆ ರಾಷ್ಟ್ರದ ಹಿತದೃಷ್ಟಿಯಿಂದಲೂ ಬೆಂಬಲ ನೀಡಿಲ್ಲ. ಸರ್ಜಿಕಲ್ ಸ್ಟ್ರೈಕ್ ಆದಾಗಲೂ ವಿರೋಧ ಮಾಡಿದ್ರೂ, ಚೀನಾ ಮೇಲೆ ಆಕ್ರಮಣವನ್ನೂ ವಿರೋಧ ಮಾಡಿದ್ರು. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಹೇಳಿದರು.
ಅಗತ್ಯವಸ್ತುಗಳ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಬೆಲೆ ಏರಿಕೆ ಆಗಿದೆ. ಬಿಜೆಪಿ ಸರ್ಕಾರದಲ್ಲೂ ಬೆಲೆ ಏರಿಕೆ ಆಗಿದೆ. ಆದರೆ ಮೋದಿ ಸರ್ಕಾರ ಅದನ್ನ ನಿಯಂತ್ರಿಸುವ ಪ್ರಯತ್ನ ಮಾಡ್ತಿದೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
Key Lines: nalin kumar kateel talk about congress and NCP