ಬೆಂಗಳೂರು,ಡಿಸೆಂಬರ್,14,2020( www.justkannada.in): ಮುಷ್ಕರ ನಿರತ ಸಾರಿಗೆ ನೌಕರರು ರಾಜ್ಯ ಸರ್ಕಾರದ ಮುಂದಿಟ್ಟಿದ್ದ 10 ಬೇಡಿಕೆಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸಬೇಕು ಎಂಬ ಬೇಡಿಕೆಯನ್ನ ಬಿಟ್ಟು ಉಳಿದ 9 ಬೇಡಿಕೆಗಳಿಗೆ ಒಪ್ಪಿಗೆ ನೀಡಿದೆ.
ಈ ಸಂಬಂಧ ಸಚಿವರೇ ಬಂದು ಲಿಖಿತ ಭರವಸೆ ಪತ್ರ ನೀಡಬೇಕು ಎಂದು ಮುಷ್ಕರ ನಿರತ ನೌಕರರು ಆಗ್ರಹಿಸಿದ್ದರು. ಈ ಹಿನ್ನೆಲೆ ಸಾರಿಗೆ ನೌಕರರ ಭರವಸೆಗಳ ಕುರಿತ ಬಗ್ಗೆ ಲಿಖಿತ ಭರವಸೆ ಪತ್ರವನ್ನು ಸರ್ಕಾರದ ಪ್ರತಿನಿಧಿಯಾಗಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ಮುಷ್ಕರ ನಿರತ ಸಾರಿಗೆ ನೌಕರರಿಗೆ ಹಸ್ತಾಂತರಿಸಿದ್ದಾರೆ.
ನಗರದ ಫ್ರೀಡಂಪಾರ್ಕ್ ಗೆ ಆಗಮಿಸಿ ಸರ್ಕಾರದ ಭರವಸೆಗಳ ಕುರಿತ ಲಖಿತ ಪತ್ರವನ್ನು ಪ್ರತಿಭಟನಾ ನಿರತ ಸಾರಿಗೆ ನೌಕರರ ಮುಖಂಡರಿಗೆ ಕೊಟ್ಟಿದ್ದಾರೆ. ಲಿಖಿತ ಭರವಸೆ ಪತ್ರದ ಕುರಿತು ಚರ್ಚೆನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಾರಿಗೆ ಮುಖಂಡರು ಹೇಳಿದ್ದಾರೆ.
Key words: Nandish Reddy- issuing-written -promise letter – strike- transport workers.