ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವನಿಗೆ ಎರಡೇ ತಿಂಗಳಲ್ಲಿ ಭಕ್ತರಿಂದ ಹರಿದು ಬಂತು ಭಾರಿ ಕಾಣಿಕೆ.

ಮೈಸೂರು,ಫೆಬ್ರವರಿ,26,2022(www.justkannada.in): ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ  ಭಕ್ತರಿಂದ ಭಾರಿ ಕಾಣಿಕೆ ಹರಿದು ಬಂದಿದೆ.

ಎರಡೇ ತಿಂಗಳಲ್ಲಿ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ  2 ಕೋಟಿ ರೂ ಆದಾಯವಾಗಿದೆ.  ಶ್ರೀಕಂಠೇಶ್ವರನ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 25 ಹುಂಡಿಯಲ್ಲಿ 2,04,08,923 ರೂ ಸಂಗ್ರಹವಾಗಿದೆ. ಈ ಮೂಲಕ 2,04,08,923 ರೂ. ಗೂ ಹೆಚ್ಚು ಕಾಣಿಕೆಯನ್ನ ಭಕ್ತರು ನೀಡಿದ್ದಾರೆ.

120 ಗ್ರಾಂ ಚಿನ್ನ, 5 ಕೆಜಿ 600 ಗ್ರಾಂ ಬೆಳ್ಳಿ ಕಾಣಿಕೆಯಾಗಿ ಬಂದಿದೆ. ಇನ್ನು ನಿಷೇಧಿತ ನೋಟುಗಳನ್ನೂ  ಕಾಣಿಕೆಯಾಗಿ ಹುಂಡಿಗೆ  ಹಾಕಲಾಗಿದೆ. ಒಟ್ಟು 28,500 ರೂ ಮೌಲ್ಯದ ನಿಷೇಧಿತ ನೋಟುಗಳು ಕಾಣಿಕೆ ರೂಪದಲ್ಲಿ ಬಂದಿದೆ.  1000 ರೂ.ಮುಖಬೆಲೆಯ 5 ನೋಟುಗಳು, 500 ರೂ.ಮುಖಬೆಲೆಯ 47 ನೋಟುಗಳನ್ನ ಭಕ್ತರು ಹಾಕಿದ್ದಾರೆ.

ವಿದೇಶಿ ಭಕ್ತರಿಂದ ನಂಜುಂಡನಿಗೆ ಕಾಣಿಕೆ ಅರ್ಪಣೆ ಮಾಡಿದ್ದು, 15 ವಿದೇಶಿ ಕರೆನ್ಸಿ ಹುಂಡಿಯಲ್ಲಿ ಸಂಗ್ರಹವಾಗಿದೆ. ಕೊರೊನಾ ಮುಕ್ತವಾದ ನಂತರ ಶ್ರೀಕಂಠೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆ, ಹುಂಡಿ ಕಾಣಿಕೆಯಲ್ಲೂ ಹೆಚ್ಚು ಹಣ ಸಂಗ್ರಹವಾಗಿದೆ. ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಮಂದಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

Key words: Nanjanagud-shrikanteshwara temple- Profit

ENGLISH SUMMARY….

Srikanteswara temple in Nanjangud receives huge contribution from devotees
Mysuru February 26, 2022 (www.justkannada.in): The Srikanteshwara temple in Nanjangud which is considered as the Kashi of the south has received huge contributions in the form of hundi, from devotees.
The temple has received a sum of Rs. 2 crore contribution this year just in two months. A sum of Rs. 2,04,08,923 has been received in the hundi, according to the temple authorities.
Also devotees have contributed 120 gm gold and 5.60 kg silver. The temple also has received Rs.28,500 demonetised currency notes in the form of contribution. The currency includes old Rs. 1,000 and Rs.500 notes.
Keywords: Srikanteshwara temple/ Nanjangud/ Rs.2 crore hundi/ contribution