ಮೈಸೂರು,ಆ,24,2020(www.justkannada.in): ಮೇಲಾಧಿಕಾರಿ ವಿರುದ್ದ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಆರೋಗ್ಯಾಧಿಕಾರಿ ನಾಗೇಂದ್ರ ಪರ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರು ಇದೀಗ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ನಡುವೆ ಇದೀಗ ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಪರ ಬೀದಿಗಿಳಿಯಲು ಪಿಡಿಒಗಳು ಸಜ್ಜಾಗಿದ್ದಾರೆ.
ಟಿಹೆಚ್ ಓ ನಾಗೇಂದ್ರ ಆತ್ಮಹತ್ಯೆವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನ ಅಮಾನತು ಮಾಡುವಂತೆ ಆಗ್ರಹಿಸಿ ವೈದ್ಯರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸಿದ್ದರು. ನಂತರ ಸರ್ಕಾರ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನ ವರ್ಗಾವಣೆ ಮಾಡಿತ್ತು.
ಇದಾದ ಬಳಿಕ ವೈದ್ಯರು ಮುಷ್ಕರ ಕೈಬಿಟ್ಟು ಇಂದಿನಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇತ್ತಕಡೆ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಪರ ಬೀದಿಗಿಳಿಯಲು ಸಜ್ಜಾಗಿರುವ ಪಿಡಿಒಗಳು, ಪಿ.ಕೆ.ಮಿಶ್ರಾ ಅವರ ವರ್ಗಾವಣೆ ತಡೆ ಹಿಡಿಯುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ನೀಡಲಿದ್ದಾರೆ. ಈ ಮಧ್ಯೆ ಕೋವಿಡ್ ಹಿನ್ನೆಲೆ ಪಿಡಿಓಗಳಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಲು ಪೋಲೀಸರು ನಿರಾಕರಿಸಿದ್ದು ಹೀಗಾಗಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದಾರೆ.
Key words: nanjanagud THO- case-Doctors- PDO-CEO -protest