ಮೈಸೂರು,ಆಗಸ್ಟ್,31,2020(www.justkannadain): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಹರಡದಂತೆ ತಡೆಯಲು ಸರ್ಕಾರ ಲಾಕ್ ಡೌನ್ ವಿಧಿಸಿದ್ದ ಹಿನ್ನೆಲೆ ಆರ್ಥಿಕತೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಆಟೋಚಾಲಕರು, ಬೀದಿಬದಿ ವ್ಯಾಪಾರಿಗಳು ಸೇರಿ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ನಡುವೆ ಲಾಕ್ ಡೌನ್ ಪರಿಣಾಮ ದೇವಾಲಯಗಳ ಮೇಲೂ ಪ್ರಭಾವ ಬೀರಿದೆ. ಹೌದು, ಲಾಕ್ ಡೌನ್ ನಿಂದಾಗಿ ನಂಜನಗೂಡು ದೇವಾಲಯದ ಆದಾಯ ಸಂಗ್ರಹ ಕಡಿಮೆಯಾಗಿದೆ. ಮಹಾಮಾರಿ ಕೊರೊನಾ ಪ್ರಾರಂಭವಾದ ದಿನಗಳಿಂದ ಈವರೆಗೂ ಅಂದಾಜು 5 ಕೋಟಿ ಹಣ ದೇವಾಲಯದ ಆದಾಯ ಕಡಿಮೆಯಾಗಿದೆ
ಕಳೆದ ಬಾರಿ ಸಂಗ್ರಹಕ್ಕೆ ಹೋಲಿಸಿದ್ರೆ ಈ ಬಾರಿ 41,57,204 ರೂ ಕಡಿಮೆ ಸಂಗ್ರಹವಾಗಿದೆ. ಆಗಸ್ಟ್ 11 ರ ಗೋಲಕ ಪರ್ಕಾವಣೆಯಲ್ಲಿ ಸಂಗ್ರಹವಾದ ಕಾಣಿಕೆ 69,249,00 ರೂ ಆಗಿದೆ. ಜನವರಿ 2020 ರಲ್ಲಿ 1,10,82,900 ರೂ. ಹಣ ಸಂಗ್ರಹವಾಗಿತ್ತು.
ಕೊರೊನಾ ಹಿನ್ನಲೆ ನಂಜನಗೂಡು ದೇವಾಲಯಕ್ಕೆ ಭಕ್ತರಿಗೆ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿತ್ತು. ಈ ಹಿನ್ನೆಲೆ ದೇವಾಲಯದ ಆದಾಯ ಸಂಗ್ರಹ ಕಡಿಮೆಯಾಗಿದೆ. ಇನ್ನು ದೇವಾಲಯದ ಹುಂಡಿಗೆ ನಿಷೇಧಿತ ನೋಟುಗಳು ಕಾಣಿಕೆಯಾಗಿ ಬಂದಿವೆ. ನಂಜುಂಡೇಶ್ವರ ದೇವಾಲಯದ ಹುಂಡಿಗೆ ನಿಷೇಧಿತ ನೋಟುಗಳು ಬಂದು ಬೀಳುತ್ತಿದ್ದು. ಈ ಬಾರಿ ಎಣಿಕೆಯಲ್ಲಿ 11,500 ರೂ ನಿಷೇಧಿತ ನೋಟುಗಳು ಪತ್ತೆಯಾಗಿವೆ.
ಕಳೆದ ಬಾರಿಯ ಎಣಿಕೆಯಲ್ಲಿ 80,500ರೂ. ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿತ್ತು. ಲಾಕ್ ಡೌನ್ ನಲ್ಲೂ ನಂಜುಂಡೇಶ್ವರ ದೇವಾಲಯದಲ್ಲಿ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ಒಟ್ಟು 7 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಪತ್ತೆಯಾಗಿದೆ.
Key words: Nanjanagudu- nanjundeshwara- temple- Income- collection-down