ಮೈಸೂರು,ಆ,22,2020(www.justkannada.in): ಟಿಹೆಚ್ ಓ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಹೋರಾಟಕ್ಕೆ ಮೃತ ನಾಗೇಂದ್ರ ಕುಟುಂಬ ಬೆಂಬಲ ನೀಡಲಿ, ಬಿಡಲಿ ಮುಷ್ಕರ ಮುಂದುವರೆಯುತ್ತೆ ಎಂದು ರಾಜ್ಯ ವೈದ್ಯರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ರವೀಂದ್ರ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ರಾಜ್ಯ ವೈದ್ಯರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ರವೀಂದ್ರ, ನಮಗೆ ವೈದ್ಯರು, ಸಿಬ್ಬಂದಿಗಳ ರಕ್ಷಣೆ ಮುಖ್ಯ. ಅದಕ್ಕಾಗಿ ನಮ್ಮ ಹೋರಾಟ ಮುಂದುವರೆಸುತ್ತೇವೆ. ಪ್ರಶಾಂತ್ ಕುಮಾರ್ ಮಿಶ್ರಾರನ್ನ ಉಳಿಸಿಕೊಳ್ಳುವ ಪ್ರಯತ್ನ ಬೇಡ ಎಂದರು.
ಡಿಸಿ ಅಭಿರಾಂ ಜಿ.ಶಂಕರ್ ಸಂಭಾಷಣೆ ಆಡಿಯೋ ವಿಚಾರ ಸಂಬಂಧ ಡಿಸಿ ಅಭಿರಾಂ ಜಿ.ಶಂಕರ್ ಕಳೆದ ಹದಿನೈದು ದಿನಗಳ ಹಿಂದೆ ಮಾತನಾಡಿರುವ ಆಡಿಯೋ ಅದು. ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾದು ಆಡಿಯೋ ಇದೆ. ಮೊಬೈಲ್ ಚೆಕ್ ಮಾಡಿದ್ರೆ ಎಲ್ಲಾ ಬಯಲಾಗುತ್ತೆ. ಡಿಸಿ ಆಡಿಯೋ ಆಗಲಿ, ಇನ್ನೊಬ್ಬರು ಆಡಿಯೋ ಆಗಲಿ ತಪ್ಪು ತಪ್ಪೆ. ನಮ್ಮ ಬೇಡಿಕೆ ಒಂದೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸಿಇಓ ಅಮಾನತ್ತಾಗಬೇಕು ಎಂದರು.
ಹೀಗಾಗಿ ಮೈಸೂರು ವೈದ್ಯರ ಹೋರಾಟಕ್ಕೆ ನನ್ನ ಬೆಂಬಲ. ಸಾಮಾನ್ಯ ಜನ ನೀಡುವ ದೂರಿಗೆ ವೈದ್ಯರ ಮೇಲೆ ಕ್ರಮ ಕೈಗೊಂಡ ಉದಾಹರಣೆಗಳಿವೆ. ಎಫ್ಐಆರ್ ದಾಖಲಾಗಿರುವವರ ಮೇಲೆ ಕ್ರಮ ಯಾಕೀಲ್ಲ. ಸೆಲೆಬ್ರಿಟಿ ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನ ಸಿಬಿಐಗೆ ಕೊಟ್ಟಿದ್ದಾರೆ. ಆರು ತಿಂಗಳಿಂದ ರಜೆ ಹಾಕದೆ ಸೇವೆ ಮಾಡಿರುವ ಡಾ.ನಾಗೇಂದ್ರ ಕೂಡ ನಮಗೆ ಸೆಲೆಬ್ರಿಟಿನೇ. ನಮಗೆ ನಿಜವಾದ ಹೀರೋ ಡಾ.ನಾಗೇಂದ್ರ. ಹೀಗಾಗಿ ಈ ಪ್ರಕರಣವನ್ನ ಸಿಬಿಐ ತನಿಖೆಗೆ ಒಪ್ಪಿಸಿ. ಕೂಡಲೇ ಪ್ರಶಾಂತ್ ಕುಮಾರ್ ಮಿಶ್ರನನ್ನ ಬಂಧಿಸಿ ಎಂದು ವಾಗ್ದಾಳಿ ನಡೆಸಿದರು.
Key words: Nanjangud –THO- suicide case- CBI -investigation -ravindra