ಮೈಸೂರು,ನವೆಂಬರ್,12,2020(www.justkannada.in) : ನಂಜನಗೂಡು ಮೂಲದ ಎಸ್.ಹರ್ಷಿತನಾಯಕ್ ICAR –JRF ಪರೀಕ್ಷೆಯಲ್ಲಿ AllIndia Rank ಸಾಮಾನ್ಯ ವರ್ಗದಲ್ಲಿ 6ನೇ ರ್ಯಾಂಕ್, ಪರಿಶಿಷ್ಟ ಪಂಡಗದಲ್ಲೇ 2ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಪರಿಶಿಷ್ಟ ಪಂಗಡದ ನಾಯಕ ಜನಾಂಗದಲ್ಲಿ ಜನಿಸಿ ಮಹತ್ತರ ಸಾಧನೆ
ನಂಜನಗೂಡು ತಾಲ್ಲೂಕಿನ ಬೊಕ್ಕಳಿ ಗ್ರಾಮದ ಸ್ವಾಮಿನಾಯಕ ಮತ್ತು ಮೀನಾಕ್ಷಿ ದಂಪತಿಗಳ ಪುತ್ರಿ ಎಸ್.ಹರ್ಷಿತನಾಯಕ್ ಪರಿಶಿಷ್ಟ ಪಂಗಡದ ನಾಯಕ ಜನಾಂಗದಲ್ಲಿ ಜನಿಸಿ ಮಹತ್ತರ ಸಾಧನೆ ಮಾಡಿದ್ದಾರೆ.
ಕೃಷಿವಿವಿಯಲ್ಲಿ ಬಿಎಸ್ಸಿ(AgMak)(agricultural marketing)ಪದವಿ Distinction ನಲ್ಲಿ ಪಾಸ್
ಎಸ್.ಹರ್ಷಿತನಾಯಕ್ ಪ್ರಾಥಮಿಕ ಶಿಕ್ಷಣವನ್ನು ನಂಜನಗೂಡು, 6ನೇ ತರಗತಿಯಿಂದ ಪಿಯುಸಿವರೆಗೆ ಇಲವಾಲದ ನವೋದಯ ಶಾಲೆಯಲ್ಲಿ ಮುಗಿಸಿದರು. ಬಳಿಕ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಕಾಲೇಜಿನಲ್ಲಿ ಬಿಎಸ್ಸಿ(AgMak)(agricultural marketing) ಪದವಿಯನ್ನು Distinction ನಲ್ಲಿ ಯಶಸ್ವಿಯಾಗಿ ಪೂರೈಸಿದ್ದಾರೆ.
ರಾಷ್ಟ್ರಮಟ್ಟದ ಪರೀಕ್ಷೆ ಬರೆದು ಉನ್ನತ ರ್ಯಾಂಕ್
ಉನ್ನತ ವ್ಯಾಸಂಕ್ಕಾಗಿ ICAR (Indian council of Agriculture Research)-JRF (Junior Research Fellowship) ರಾಷ್ಟ್ರಮಟ್ಟದ ಪರೀಕ್ಷೆ ಬರೆದು ಉನ್ನತ ರ್ಯಾಂಕ್ ಗಳಿಸಿದ್ದಾರೆ. ಇವರ ಈ ಸಾಧನೆಗೆ ಸೋದರ ಮಾವ ತಗಡೂರಿನ ಗೋಪಿನಾಯಕ್ ಸಹಾಯ ಮಾಡಿದ್ದಾರೆ.
ಸಂಪನ್ಮೂಲ : ಡಾ.ಮ.ಪು.ಪೂರ್ಣಾನಂದ ಅವರ ಫೇಸ್ ಬುಕ್ ಗೋಡೆಯಿಂದ
English summary…
Nanjangud student secures 6th rank in ICAR-JRF exams!
Mysuru, Nov. 12, 2020 (www.justkannada.in): S. Harshitha Nayak of Nanjangud has made a remarkable achievement by securing 6th rank at the All India Ranking, in the ICAR-JRF examinations, and 2nd rank among Scheduled Tribe category.
Harshitha is the daughter of Swaminayak and Meenakshi couple, who belong to Scheduled Tribe and residents of Bokkalli Village in Najangud Taluk.
She also has completed B.Sc. in Agriculture (Agricultural Marketing) from Dharwad Agricultural University with a distinction.
She has secured the highest rank to qualify for higher education by appearing for the ICAR (Indian Council of Agriculture Research) – JRF (Junior Research Fellowship).
Keywords: ICAR-JRF exams-6th Rank-B.Sc. Agri-Nanjangud
key words : Nanjangud S.Harishthanayak-All-Indi-Ran-ICAR – JRF Exam-6th rank-general-category