ಮೈಸೂರು,ಫೆ,3(www.justkannada.in): ಫೆಬ್ರವರಿ 4 ರಂದು ಸಂಭ್ರಮದ ಮುಡುಕುತೊರೆ ಬ್ರಹ್ಮ ರಥೋತ್ಸವ ನಡೆಯಲಿದ್ದು ರಥೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ಮೈಸೂರು ಜಿಲ್ಲೆ ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿರುವ ಶ್ರೀ ಬ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ಮುಡುಕುತೊರೆ ಜಾತ್ರಾ ಮಾಹೋತ್ಸವ ನಡೆಯಲಿದೆ. ಕೆಲವು ಕ್ಯಾಲೆಂಡರ್ ರಥೋತ್ಸವ ದಿನಾಂಕ ತಪ್ಪಾಗಿ ಪ್ರಕಟವಾಗಿದೆ. ಆದರೆ ಫೆಬ್ರವರಿ 4 ರಂದೇ ಬ್ರಹ್ಮರಥೋತ್ಸವ ನಡೆಯುವ ಬಗ್ಗೆ ದೇವಸ್ಥಾನ ಮಂಡಳಿ ಸಾಕಷ್ಟು ಪ್ರಚಾರ ಮಾಡಿದೆ.
ಬ್ರಹ್ಮರಥೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗಿನಿಂದ ಹಲವಾರು ಪೂಜಾ ಕಾರ್ಯಕ್ರಮಗಳು. 5 ಗಂಟೆಗೆ ರುದ್ರಾಭಿಷೇಕ, ಯಾಗಶಾಲೆಯಲ್ಲಿ ಶಿವಯಾಗ ಹೋಮ ನಂತರ ರಥ ಸಂಪೋಕ್ಷಣೆ. ಮಾಡಿ ಶಿವ-ಪಾರ್ವತಿ ಮೂರ್ತಿ ಇಟ್ಟು ಮಂಟಪೋತ್ಸವ ಮಾಡಲಾಗುತ್ತದೆ.
ಮಂಟಪೋತ್ಸವ ಮುಗಿದ ಮೇಲೆ ಬೆಟ್ಟದಿಂದ ತಾಳುಬೆಟ್ಟಕ್ಕೆ ಉತ್ಸವ ಮೂರ್ತಿಯನ್ನು ತರಲಾಗುತ್ತದೆ. ಮಾರ್ಗ ಮಧ್ಯದಲ್ಲಿ 7 ಮಂಟಪಗಳಲ್ಲಿ ಪೂಜೆ ಕೈಂಕಾರ್ಯ ನಡೆಯಲಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ರಥಾರೋಹಣ ನೆರವೇರುವುದು. ವಾಸ್ತು ಬೀದಿ ಎಂದು ಕರೆಯಲ್ಪಡುವ ನಾಲ್ಕು ರಸ್ತೆಯಲ್ಲಿ ಮಾತ್ರ ರಥ ಸಂಚರಾ ಫೆಬ್ರವರಿ 7 ರಂದು ತೆಪ್ಪೋತ್ಸವ, ಫೆಬ್ರವರಿ 12 ರಂದು ಪರ್ವತ ಪರಿಷೆ, ಕೊನೆಯ ದಿನವಾದ ಫೆಬ್ರವರಿ 13 ರಂದು ಮಹಾಭಿಷೇಕ ನಡೆಯಲಿದೆ.
Key words: narsipur-Mudukutthore Brahma Rathotsavam – February 4th.