ವಾಷಿಂಗ್ಟನ್:ಜುಲೈ-23:(www.justkannada.in) ಅಮೇರಿಕಾ ಬಾಹ್ಯಾಕಾಶ ಸಂಸ್ಥೆಯಾದ ನಾಸಾ 2024ರಲ್ಲಿ ಚಂದ್ರನ ಮೇಲೆ “ಮೊದಲ ಮಹಿಳೆ ಮತ್ತು ಮುಂದಿನ ಪುರುಷ” ಯೋಜನೆಯನ್ನು ಕೈಗೆತ್ತಿಕೊಳ್ಲಲು ಸಿದ್ಧತೆ ನಡೆಸಿದೆ.
ಚಂದ್ರನ ಅಂಗಳದಲ್ಲಿ ಮೊದಲ ಮಾನವನ ಹೆಜ್ಜೆಯಿಟ್ಟ ನಾಸಾದ ಅಪೋಲೊ 11 ಯೋಜನೆಯ 50ನೇ ವಾರ್ಷಿಕೋತ್ಸವದಲ್ಲಿರುವ ನಾಸಾ, 2024ರಲ್ಲಿ ಮತ್ತೆ ಚಂದ್ರನಲ್ಲಿಗೆ ಓರ್ವ ಮಹಿಳೆಯನ್ನು ಕಳುಹಿಸಲು ಸಜ್ಜಾಗಿದೆ. ಹೌದು. ಅಪೋಲೋ ಮೂಲಕ ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಚಂದ್ರನಲ್ಲಿಗೆ ಹೆಜ್ಜೆ ಇಟ್ಟಿದ್ದ ಯೋಜನೆಯ ಬಳಿಕ ಇದೀಗ ಅರ್ಟಿಮಿಸ್ ಯೋಜನೆಯಗೆ ನಾಸಾ ಸಿದ್ಧತೆ ನಡೆಸಿದೆ.
ಈ ಯೋಜನೆ ಮೂಲಕ ಮಹಿಳಾ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸಲು ಸಿದ್ಧತೆ ಆರಂಭಿಸಿದೆ. ಮೂಲಗಳ ಪ್ರಕಾರ ನಾಸಾದ ಗಗನಯಾತ್ರಿ ಅನ್ನಿ ಮೆಕ್ಲೇನ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ಮತ್ತೊಂದು ಮೈಲಿಗಲ್ಲಿಗೆ ಆರ್ಟೆಮಿಸ್ ಸಿದ್ಧವಾಗುತ್ತಿದ್ದು, ಎರಡನೇ ಬಾರಿಗೆ ಚಂದ್ರನ ಕಡೆಗೆ ಓರ್ವ ಪುರುಷ ಗಗನಯಾತ್ರಿ ಹಾಗೂ ಚಂದ್ರನಲ್ಲಿ ಕಾಲಿಡುತ್ತಿರುವ ಮೊದಲ ಮಹಿಳೆ ಇರಲಿದ್ದಾರೆ. ಇಬ್ಬರನ್ನು ಚಂದ್ರನಲ್ಲಿ ಕಳುಹಿಸಲು ಯೋಜನೆ ರೂಪಿಸಲಾಗಿದೆ. ಇದೊಂದು ಹೆಮ್ಮೆಯ ಸಂಗತಿ ಎಂದು ನಾಸಾ ತಿಳಿಸಿದೆ.
ಹಿಂದೆಂದೂ ಭೇಟಿ ನೀಡದ ಚಂದ್ರನ ಪ್ರದೇಶಗಳನ್ನು ಅನ್ವೇಷಿಸುವುದು, ಬ್ರಹ್ಮಾಂಡದ ರಹಸ್ಯಗಳನ್ನು ಅನ್ಲಾಕ್ ಮಾಡಲು ಮತ್ತು ಸೌರಮಂಡಲಕ್ಕೆ ಮಾನವೀಯತೆಯ ಗಡಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವುದೇ ಈ ಕಾರ್ಯಾಚಾರಣೆ ಉದ್ದೇಶವಾಗಿದೆ.