AIISH ಗೆ ರಾಷ್ಟ್ರೀಯ ಪುರಸ್ಕಾರ: ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕಿ ಡಾ.ಪುಷ್ಪಾವತಿ.

At a function held in Delhi today, President Droupadi Murmu presented the National Award to the All India Speech and Hearing Institute, Mysore, for its outstanding service towards the “upliftment of the disabled”. Dr. Pushpavathi, the current director of the institute, received the award from the President.

 

ನವದೆಹಲಿ, ಡಿ.೦೩,೨೦೨೪: (www.justkannada.in news) ಮೈಸೂರಿನ ಅಖಲಿ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಗೆ ಈ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಂದ ಐಷ್‌ ನಿರ್ದೇಶಕಿ ಡಾ.ಪುಷ್ಪಾವತಿ ಅವರು ಈ ಪ್ರಶಸ್ತಿ ಸ್ವೀಕರಿಸಿದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಪ್ರತಿವರ್ಷ ಕೇಂದ್ರ ಸರಕಾರ ಪ್ರಶಸ್ತಿ ನೀಡುತ್ತದೆ. ಆ ಮೂಲಕ ವಿಕಲಚೇತನರ ನೆರವಿಗೆ ಮುಂದಾಗುವವರಿಗೆ ಪ್ರೋತ್ಸಾಹಿಸುವುದು ಸರಕಾರದ ಉದ್ದೇಶ.

ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು “ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ʼ  ಅತ್ಯುತ್ತಮ ಸೇವೆ ಸಲ್ಲಿಸಿರುವ ಮೈಸೂರಿನ  ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಗೆ ಈ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಿದರು. ಐಷ್‌ ಸಂಸ್ಥೆಯ ಹಾಲಿ ನಿರ್ದೇಶಕಿ ಡಾ.ಪುಷ್ಪಾವತಿ ಅವರು ರಾಷ್ಟ್ರಪತಿಗಳಿಂದ ಈ ಪ್ರಶಸ್ತಿ ಸ್ವೀಕರಿಸಿದರು.

 ನಿರ್ದೇಶಕಿ ಸಂತಸ:

ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಸಂತಸದಲ್ಲಿದ್ದ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ ಅವರನ್ನು ಜಸ್ಟ್‌ ಕನ್ನಡ ಮಾತನಾಡಿಸಿತು..

ಇದು ಐಷ್‌ ಸಂಸ್ಥೆಗೆ ಸಂದ ಗೌರವ. ಕಳೆದ ಹಲವಾರು ವರ್ಷಗಳಿಂದ ವಾಕ್‌ ಶ್ರವಣ ಸಂಸ್ಥೆಯು ವಿಕಲಚೇತನರ ಅಭ್ಯೂಧಯಕ್ಕಾಗಿ ಶ್ರಮಿಸುತ್ತಿದೆ. ಸಂಸ್ಥೆಯ ಈ ಹಿಂದಿನ ನಿರ್ದೇಶಕರು ಹಾಗೂ  ಸಿಬ್ಬಂದಿಗಳ ಶ್ರಮದ ಫಲವಾಗಿ ಹಾಗೂ ಅವರೆಲ್ಲಾ ಈ ಕಾರ್ಯದಲ್ಲಿ ಕೈಜೋಡಿಸಿದ ಪರಿಣಾಮ ಸಂಸ್ಥೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಹಾಗಾಗಿ ಈ ಪ್ರಶಸ್ತಿ ನನ್ನೊಬ್ಬಳಿಗೆ ಸೇರಿದ್ದಲ್ಲ, ಬದಲಿಗೆ ಇಡೀ ಸಂಸ್ಥೆಗೆ ಸೇರಿದ್ದು ಎಂದರು.

ಐಷ್‌ ಸಂಸ್ಥೆಯು ವಿಕಲ ಚೇತನರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ತರಬೇತಿ ಕೋರ್ಸ್‌ ಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಜತೆಗೆ ವಿಕಲಚೇತನರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡುತ್ತಿದೆ ಎಂದರು.

ಐಷ್‌ ಸಂಸ್ಥೆಯಲ್ಲಿ ಈ ತನಕ ಒಟ್ಟು ೨೭೮೩ ವಿದ್ಯಾರ್ಥಿಗಳು ತರಬೇತಿ ಹೊಂದಿದ್ದು, ೬, ೬೫, ೧೯೪ ವಿಕಲ ಚೇತನರಿಗೆ ಚಿಕಿತ್ಸೆ ನೀಡಿದೆ. ಜತೆಗೆ ೨,೪೦, ೬೦೭ ಹಸುಗೂಸುಗಳಿಗೆ ಶ್ರವಣ ಪರೀಕ್ಷೆ ನಡೆಸಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಿನ್ನೆಲೆಯಲ್ಲಿ ಸಂಸ್ಥೆ ಇದನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಐಷ್‌ ನಿರ್ದೇಶಕಿ ಡಾ.ಪುಷ್ಪಾವತಿ ಹೇಳಿದರು.

KEY WORDS: National Award, AIISH, Director Dr. Pushpavathi, President.

SUMMARY:

National Award for AIISH: Director Dr. Pushpavathi receives the award from the President.

At a function held in Delhi today, President Droupadi Murmu presented the National Award to the All India Speech and Hearing Institute, Mysore, for its outstanding service towards the “upliftment of the disabled”. Dr. Pushpavathi, the current director of the institute, received the award from the President.