ಮೈಸೂರು,ಸೆಪ್ಟಂಬರ್,18,2021(www.justkannada.in): ಕೇಂದ್ರ ಸರ್ಕಾರ ಜಾರಿ ಮಾಡಲು ಮುಂದಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಲದರ್ಶಿನಿಯಲ್ಲಿ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಢಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯಕ್ಕೆ ಮಾರಕ. ಹಿಮ್ಮುಖ ಚಲನೆ ಆಗುವಂತ ರಾಷ್ಟ್ರೀಯ ನೀತಿ ಇದಾಗಿದೆ.ಇಂದಿಗಾಂಧಿಯವರು 1968ರಲ್ಲಿ, ರಾಜೀವ್ ಗಾಂಧಿಯವರು 1986 ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದರು. ಆಗ ಬಹಳಷ್ಟು ಚರ್ಚೆಗಳಾಗಿತ್ತು. ಪ್ರಮುಖರ ಅಭಿಪ್ರಾಯಗಳನ್ನ ಸಂಗ್ರಹಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿತ್ತು. ಆದರೆ ಈಗ ಯಾವುದೇ ಚರ್ಚೆಯಾಗದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಇದರಿಂದ ನಮಗೆ ಬಹಳಷ್ಟು ಹಿನ್ನಡೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಿಕ್ಷಣ ನೀತಿಯ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಚರ್ಚೆ ಮಾಡಬೇಕು.ಸದನ ನಡೆಯುತ್ತಿದೆ, ಈ ವೇಳೆ ಯಾವುದೇ ಅಭಿಪ್ರಾಯ ಸಂಗ್ರಹಿಸದೆ ಶಿಕ್ಷಣ ನೀತಿ ಜಾರಿಗೊಳುಸಿವ ಪ್ರಯತ್ನವಾಗಿದೆ. ಕೇಂದ್ರ ಬಜೆಟ್ ನಲ್ಲಿ 6% ಹಣವನ್ನ ರಾಷ್ಟ್ರೀಯ ಶಿಕ್ಷಣ ನೀತಿ ಮೀಸಲಿಡಬೇಕು.ಶಾಲೆಗಳ ಅಭಿವೃದ್ಧಿಯೂ ಆಗಿಲ್ಲ. ಶಿಕ್ಷಕರ ನೇಮಕಗಳು, ಈಗಿರುವ ಶಿಕ್ಷಕರ ಸಮಸ್ಯೆಗಳನ್ನ ಸರಿಪಡಿಸುವ ಕೆಲಸ ಆಗಿಲ್ಲ. ಇದ್ಯಾವುದನ್ನು ಮಾಡದೇ ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧರ್ಮದ ಆಧಾರಿತವಾಗಿ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದಾರೆ
ಧರ್ಮದ ಆಧಾರಿತವಾಗಿ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದಾರೆ. ಕಲ್ಪನೆ ಆಧಾರಿತ ವಿದ್ಯೆ ಕಲಿಸಲು ಮುಂದಾಗುತ್ತಿದ್ದಾರೆ. ಕಸ್ತೂರಿ ರಂಗನ್ ಸಮಿತಿಯ ಬುಹುತೇಕರು ಆರ್ ಎಸ್ಎಸ್ ನವರು. ಭಾರತದ ವಿವಿಧತೆಗೆ ಧ್ವನಿಯಾಗ ಬಲ್ಲ ಸದಸ್ಯರ ನೇಮಕ ಆಗಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಬಹುತ್ವದ ಚಿಂತನೆಗಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಕೈಬಿಡಲಾಗಿದೆ. ಬದಲಿಗೆ 12ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದು ವಿದ್ಯಾರ್ಥಿಗಳನ್ನ ಕುಲಕಸುಬುಗಳಿಗೆ ಮರಳಿಸುವ ಷಡ್ಯಂತ್ರ. ಪ್ರಾಚೀನ ಸಂಸ್ಕೃತಿಗೆ, ಸಂಸ್ಕೃತ ಭಾಷೆ ಕಲಿಕೆಗೆ ಅನಗತ್ಯವಾಗಿ ಒತ್ತು ನೀಡಲಾಗುತ್ತಿದೆ ಎಂದು ಆರ್.ಧೃವನಾರಾಯಣ್ ಟೀಕಿಸಿದರು.
Key words: National education policy – fatal – state-KPCC-work president-R. Dhruvanarayan
ENGLISH SUMMARY…
NEP disastrous for the country: Implementing without discussing not correct – R. Dhruvanarayan alleges
Mysuru, September 18, 2021 (www.justkannada.in): KPCC Working President R. Dhruvanarayana has strongly opposed implementation of the new National Education Policy of the Government of India.
Addressing a press meet held in Mysuru today he expressed his view that the NEP would be a disaster to the country if implemented. “It is a policy which takes us backward. Indira Gandhi and Rajiv Gandhi had implemented the National Education Policy in the years 1968 and 1986 respectively, when it was discussed widely. It was framed and implemented after conducting lot of discussions and collecting information and opinions of all. But the new NEP has been framed without consulting anyone and without discussing with anybody. It will be a great setback for us,” he said.
He alleged that the Government of India is implementing the new NEP based on religion and is about to implement education based on assumptions. “The Kasturirangan Committee consists of many RSS people. There are no members in the committee who have a proper view about the diversity of the country. There is no plurality in the new NEP. Moreover SSLC exams has been left out and the public exams will be conducted only for 12th standard students. It will in fact provoke the students to become labourers. The new NEP lays more stress on teaching of ancient culture and sanskrit language,” he alleged.
Keywords: KPCC Working President/ R. Dhruvanarayana/ new NEP/ Govt. of India/ Oppose