ಬೆಂಗಳೂರು,ಸೆಪ್ಟಂಬರ್,2,2021(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಇಲ್ಲ. ಇದು ವಿದ್ಯಾರ್ಥಿಗಳಿಗೆ ಪೂರಕ. ಇದರಿಂದ ಶುಲ್ಕ ಹೆಚ್ಚಳವೂ ಇಲ್ಲ. ತರಾತುರಿಯಲ್ಲಿ ಇದನ್ನ ಅನುಷ್ಟಾನ ಮಾಡುತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಎಂಎಲ್ ಸಿಗಳ ಸಲಹೆ, ಅಭಿಪ್ರಾಯಗಳನ್ನ ಸಚಿವ ಅಶ್ವಥ್ ನಾರಾಯಣ್ ಆಲಿಸಿದರು. ಸಭೆಯಲ್ಲಿ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ಶ್ರೀಕಂಠೇಗೌಡ, ವೈ.ನಾರಾಯಣಸ್ವಾಮಿ, ಮರಿತಿಬ್ಬೇಗೌಡ, ಅರುಣ್ ಶಹಾಪೂರ, ಚಿದಾನಂದ್ ಸೇರಿ ಹಲವರು ಭಾಗಿಯಾಗಿದ್ದರು.
ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ , ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ವಿಧಾನಪರಿಷತ್ ಸದಸ್ಯರ ಜೊತೆ ಚರ್ಚಿಸಿದ್ದೇನೆ. ನೀತಿಗೆ ಸಂಬಂಧಿಸಿದಂತೆ ಸಲಹೆಗಳನ್ನ ನೀಡಿದ್ದಾರೆ. ಸಮಾಜದ ಮುಂದೆ ದೊಡ್ಡ ಸವಾಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯಾಗಬೇಕಿದೆ. ಶಿಕ್ಷಣ ಕಲಿಕೆ, ಮೌಲ್ಯಮಾಪನ ಬದಲಾಗಬೇಕಿದೆ. ಇದರ ಬಗ್ಗೆ ಸಾಕಷ್ಟು ಸಲಹೆಗಳನ್ನ ಕೊಟ್ಟಿದ್ದಾರೆ. ಅಭಿಪ್ರಾಯಗಳನ್ನ ಆಧರಿಸಿ ಕಾರ್ಯಕ್ರಮ ರೂಪಿಸುತ್ತೇವೆ. ಈ ಮಧ್ಯೆ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಬೇಕಿದೆ. ಈ ನೀತಿ ವಿದ್ಯಾರ್ಥಿಗಳಿಗೆ ಪೂರಕವಾಗಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಾವಶ್ಯಕವಿದೆ.ಮೊದಲಿದ್ದ ಕೋರ್ಸ್ ವ್ಯವಸ್ಥೆ ಇದರಲ್ಲಿ ಇರಲ್ಲ. ಸಬ್ಜೆಕ್ಟ್ ಗಳು ಇದರಲ್ಲಿ ಇರಲಿದೆ. ಇರುವ ಸಬ್ಜೆಕ್ಟ್ ಗೆ ಹೊಸ ಸಬ್ಜೆಕ್ಟ್ ಗೂ ಅವಕಾಶವಿದೆ ಎಂದು ಹೇಳಿದರು.
ಎನ್ ಇಪಿಜಾರಿಯಿಂದ ಶುಲ್ಕ ಹೆಚ್ಚಳವಿಲ್ಲ ಎಷ್ಟುವಿದ್ಯಾರ್ಥಿ ಸೇರಿದ್ರೂ ಅಡ್ಮಿಶನ್ ಮಾಡಿಕೊಳ್ತೇವೆ. ಭಾಷೆ ಕಲಿಯೋಕೆ ಎರಡುವರ್ಷ ಅವಕಾಶವಿತ್ತು. ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆಯಾಗಲ್ಲ. ಕಟ್ಟಡದೊಳಗೆ ಕಲಿಯಬೇಕೆಂಬ ನಿರ್ಬಂಧವಿತ್ತು. ಈಗ ಆನಿರ್ಭಂದವನ್ನ ಸಡಿಲಿಕೆ ಮಾಡಿದ್ದೇವೆ. ಎಲ್ಲಿ ಬೇಕಾದರೂ ಕಲಿಯಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ಸಬ್ಜೆಕ್ಟ್ ವೈಸ್ ಕಲಿಯಲು ನೀತಿ ಪ್ರಯೋಜನವಿದೆ. ಬಿಎ ಓದುವವರು ಕಾಮರ್ಸ್ ಕಲಿಯಬಹುದು. ಕಾಮರ್ಸ್ ಇರುವವರು ವಿಜ್ಙಾನ ಕಲಿಯಬಹುದು. ಎಂಜಿನಿಯರಿಂಗ್ ವಿದ್ಯಾರ್ಥಿ ಕಾಮರ್ಸ್ ಕಲಿಯಬಹುದು. ವಿವಿ ಮಿತಿಗನುಗುಣವಾಗಿ ಸೀಟು ಪಡೆಯಬಹುದು. ಹೀಗಾಗಿ ಉತ್ತಮವಾದ ನೀತಿ ಇದಾಗಿದೆ. ಇದರಿಂದ ಪ್ರಾದ್ಯಾಪಕರಲ್ಲೂ ಸುಧಾರಣೆಗೆ ಅವಕಾಶವಿದೆ. ರಾಷ್ಟ್ರೀಯ ಶಿಕ್ಷಣ ನೀತಿ ೧೫ ವರ್ಷ ಕಾಲ ಇರಲಿದೆ. ನಮ್ಮ ರಾಜ್ಯದಲ್ಲಿ ೧೦ ವರ್ಷದೊಳಗೆ ಅನುಷ್ಠಾನ ಮಾಡುತ್ತೇವೆ ಎಂದರು.
ಎನ್ ಇಪಿ ಜಾರಿಯಿಂದ ಐಸೋಲೇಶನ್ ವ್ಯವಸ್ಥೆಗೆ ಕಡಿವಾಣ ಬೀಳಲಿದೆ. ಆರ್ಟ್ ನವರು ಟೆಕ್ನಿಕಲ್ ಕಲಿಯಲು ಅವಕಾಶವಿರಲಿಲ್ಲ. ಕಾಮರ್ಸ್ ಸೈನ್ಸ್ ಕಲಿಯೋಕೆ ಅವಕಾಶ ಇರಲಿಲ್ಲ. ಈಗ ಯಾರು ಯಾವ ಪಠ್ಯ ಬೇಕಾದರೂ ಕಲಿಯಬಹುದು. ಅಂತಹ ಮಲ್ಟಿ ವ್ಯವಸ್ಥೆ ಈ ನೀತಿಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ. ಒಂದು ವರ್ಷ ಕಲಿತರೂ ಅವರಿಗೆ ಮಾನ್ಯತೆ ಸಿಗಲಿದೆ. ಇದು ಉದ್ಯೋಗ ಪಡೆಯೋಕು ಸಹಕಾರಿಯಾಗಲಿದೆ. ಕಾಂಬಿನೇಶನ್ ವೈಸ್ ಇದು ಇರಲಿದೆ. ಒಂದು ಸಬ್ಜೆಕ್ಟ್ ಅನ್ನು ಧೀರ್ಘವಾಗಿ ಸ್ಟಡಿಮಾಡಬಹುದು. ಮೈನರ್ ಸಬ್ಜೆಕ್ಟ್ ಕಲಿಯೋಕು ಅವಕಾಶವಿದೆ. ಮುಂದೆ ಎರಡು ಮೇಜರ್ ಸಬ್ಜೆಕ್ಟ್ ತೆಗೆದುಕೊಳ್ಳಬಹುದು. ಈ ವರ್ಷದಿಂದಲೇ ಎಂಜಿನಿಯರಿಂಗ್ ನಲ್ಲೂ ಬದಲಾಗಲಿದೆ. ಡಿಗ್ರಿಯಲ್ಲೂ ಈವರ್ಷವೇ ನೀತಿ ಜಾರಿಯಾಗಲಿದೆ. ಎಂಜಿನಿಯರಿಂಗ್ ನವರು ಗಣಿತ ಕಲಿಯಬಹುದು. ಕಾನೂನು ಪಠ್ಯವನ್ನೂ ಕಲಿಯೋಕೆ ಅವಕಾಶವಿದೆ. ಮೆಡಿಕಲ್ ಹೊರತುಪಡಿಸಿ ಎಲ್ಲರಿಗೆ ಎಲ್ಲ ಕಲಿಯಲು ಅವಕಾಶವಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೇಸರೀಕರಣ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶ್ವತ್ ನಾರಾಯಣ್, ಇದು ನಾವು ತರಾತುರಿಯಲ್ಲಿ ಅನುಷ್ಠಾನ ಮಾಡ್ತಿಲ್ಲ. ಕಳೆದ ೭ ವರ್ಷದಿಂದಲೂ ಇದು ನಡೆಯುತ್ತಿದೆ. ಸ್ಟೇಜ್ ವೈಸ್ ಇದರ ಅನುಷ್ಠಾನವಾಗುತ್ತಿದೆ. ಒಳ್ಳೆಯದು ಮಾಡಿದರೆ ಕೇಸರಿಕರಣ ಎಂದರೆ ಹೇಗೆ. ಹಾಗೆ ತಿಳಿದುಕೊಂಡರೆ ನಮ್ಮ ಸಮಸ್ಯೆಯೇನಿಲ್ಲ. ವಿದ್ಯಾರ್ಥಿಗಳು ಯಾವುದನ್ನೂ ಬೇಕಾದರೂ ಕಲಿಯಬಹುದು. ನೀತಿಯನ್ನ ಅಳವಡಿಸಿಕೊಳ್ಳುವುದು ವಿವಿಗಳಿಗೆ ಬಿಟ್ಟಿದೆ. ಇದರಲ್ಲಿ ಕೇಸರಿಕರಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
Key words: National Education Policy -Supplement – Students- Minister -Ashwath Narayan.