ಮೈಸೂರು,ಫೆಬ್ರವರಿ,5,2021(www.justkannada.in): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಾಳೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಕರೆ ನೀಡಲಾಗಿದೆ.
ನಾಳೆ ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ದೇಶಾದ್ಯಂತ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್ ಮಂಚ್ ಕರೆ ಕೊಟ್ಟಿದ್ದು, ಸಂಯುಕ್ತ ಕಿಸಾನ್ ಮಂಚ್ ನ ಪ್ರತಿಭಟನೆಗೆ ರಾಜ್ಯ ರೈತ ಸಂಘ ಬೆಂಬಲ ನೀಡಿದೆ. ಹೀಗಾಗಿ ನಾಳೆ ರಾಜ್ಯದಲ್ಲೂ ರೈತಮುಖಂಡರು ರಾಷ್ಟ್ರೀಯ, ರಾಜ್ಯ ಹೆದ್ಧಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ.
ಈ ನಡುವೆ ಮೈಸೂರು- ಬೆಂಗಳೂರು ಹೆದ್ದಾರಿಯ ಕೊಲಂಬಿಯಾ ಏಷಿಯಾ ಸರ್ಕಲ್, ಮೈಸೂರು- ಊಟಿ ಬಂಡಿಪಾಳ್ಯ, ಬೆಂಗಳೂರು- ಹಾಸನ ಹೆದ್ದಾರಿಯ ಚನ್ನರಾಯಪಟ್ಟಣ, ಮಂಡ್ಯದ ವಿ.ಸಿ.ಫಾರಂ, ಚಿತ್ರದುರ್ಗ, ಗುಬ್ಬಿ, ರಾಯಚೂರು, ಕೋಲಾರ ಸೇರಿದಂತೆ ಹಲವು ಕಡೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾಹಿತಿ ನೀಡಿದ್ದಾರೆ.
ENGLISH SUMMARY…
Farmers’ protest opposing Union Govt.’s new farm laws tomorrow by blocking National and State Highways in state
Mysuru, Feb. 05, 2021 (www.justkannada.in): Farmers unions have called to block National and State Highways in the State in its protest against the Govt. of India’s new farm laws.
The Samyukta Kisan Manch has given a call for protest against the Union Govt.’s new farm laws by blocking National and State Highways across the country from 12.00 pm to 3.00 pm tomorrow for which the Karnataka State Farmers’ Association has extended its support.
As a result, protests will be held near the Columbia Asia Hospital Circle on Mysuru-Bengaluru Highway, Mysuru-Ooty Bandipalya junction, Channarayapatna on Bengaluru-Hassan Highway, near V.C. Farm in Mandya, Chitradurga, Gubbi, Raichur, Kolar, etc., as per information provided by Badgalapura Nagendra, State President of Karnataka State Farmers’ Association and Hasiru Sene.
Keywords: Farmers protest tomorrow by blocking National and State Highways in state/ 12.00 pm to 3.00 pm / Farmers protest
Key words: National – State –Highways-tomorrow- protest –farmer-badagalapur nagendra