ರಾಷ್ಟ್ರೀಯ ಈಜು ಸ್ಪರ್ಧೆ: ಮೈಸೂರಿನ ಮೂವರು ಆಯ್ಕೆ

ಮೈಸೂರು,ಡಿಸೆಂಬರ್,12,2024 (www.justkannada.in):  ಬೆಂಗಳೂರಿನಲ್ಲಿ ನಡೆದ ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ಜಿಎಸ್ಎಯ ಜೀವಾಂಶ್, ರುತ್ವಾ ಮತ್ತು ಕೃಥಿಕ್ ಸ್ಪರ್ಧಿಸಿ, ದಕ್ಷಿಣ ವಲಯದ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಕರ್ನಾಟಕ ರಾಜ್ಯ ಈಜು ಸಂಘದ ವತಿಯಿಂದ ಬೆಂಗಳೂರಿನ ಬಸವನಗುಡಿಯ ಈಜುಕೊಳದಲ್ಲಿ  ಡಿ.5 ರಿಂದ 8ರವರೆಗೆ ನಡೆದ ರಾಜ್ಯ ಶಾರ್ಟ್ ಕೋರ್ಸ್ ಚಾಂಪಿಯನ್‌ಶಿಪ್ 2024ರಲ್ಲಿ  ಮೈಸೂರಿನ   ಸುಬ್ರಹ್ಮಣ್ಯ ಜೀವಾಂಶ್, ರುತ್ವಾ, ಕೃಥಿಕ್, ಸಾನ್ವಿ ಹಾಗೂ ಹಾರಿಕಾ 5 ಸ್ಪರ್ಧಿಗಳು ಭಾಗವಹಿಸಿ  4 ಚಿನ್ನ,  2 ಬೆಳ್ಳಿ ಹಾಗೂ 4 ಕಂಚಿನ ಪದಕ  ಪಡೆದಿದ್ದಾರೆ.

ಇದರಲ್ಲಿ ಸುಬ್ರಹ್ಮಣ್ಯ ಜೀವಾಂಶ್ 3 ಚಿನ್ನ, ರುತ್ವಾ 1 ಚಿನ್ನ, 2ಬೆಳ್ಳಿ ಹಾಗೂ1ಕಂಚು ಮತ್ತು ಕೃಥಿಕ್ 1 ಬೆಳ್ಳಿ ಪದಕವನ್ನು ಪಡೆದು, ಈ ಮೂವರು ಡಿ.27ರಿಂದ 29ರವರೆಗೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯಲಿರುವ ದಕ್ಷಿಣ ವಲಯದ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಇವರು ಜೆ.ಪಿ.ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದ ಗ್ಲೋಬಲ್ ಸ್ಪೋಟ್ಸ್೯ ಅಸೋಸಿಯೇಷನಲ್ಲಿ ಮುಖ್ಯ ತರಬೇತುದಾರರಾದ ಪವನ್ ಕುಮಾರ್ ಬಳಿ ತರಬೇತಿ ಪಡೆಯುತ್ತಿರುವುದು ವಿಶೇಷ.

ಸ್ಪರ್ಧೆಯ ವಿವರ: ಜೀವಾಂಶ್ – 1500ಮೀ. ಫ್ರೀ ಸ್ಟೈಲ್ ನಲ್ಲಿ 1 ಚಿನ್ನ, 200ಮೀ. ಹಾಗೂ 100ಮೀ. ಬಟರ್ ಫ್ಲೈ ನಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ.

ರುತ್ವಾ : 50ಮೀ. ಬಟರ್ ಫ್ಲೈನಲ್ಲಿ 1ಚಿನ್ನ, 50ಮೀ.ಹಾಗೂ 100ಮೀ. ಫ್ರೀ ಸ್ಟೈಲ್ ನಲ್ಲಿ  2 ಬೆಳ್ಳಿ ಹಾಗೂ 200ಮೀ. ವೈಯಕ್ತಿಕ ಮೆಡ್ಲಿಯಲ್ಲಿ 1 ಕಂಚಿನ ಪದಕವನ್ನು ಪಡೆದಿದ್ದಾರೆ.

ಕೃಥಿಕ್- 100 ಮೀ. ಬಟರ್ ಫ್ಲೈಯಲ್ಲಿ 1 ಬೆಳ್ಳಿ ಪದಕ, ಸಾನ್ವಿ ಹಾಗೂ ಹಾರಿಕಾ 25 x4 ರಿಲೆಯಲ್ಲಿ ತಲಾ ಒಂದೊಂದು ಕಂಚಿನ ಪದಕವನ್ನು ಪಡೆದಿದ್ದಾರೆ.

Key words: National, Swimming, Competition, selected