ಮೈಸೂರು, ಅಕ್ಟೋಬರ್,16,2024 (www.justkannada.in): ಸಿಬಿಎಸ್ ಸಿ ರಾಷ್ಟ್ರೀಯ ಈಜು ಕ್ರೀಡಾಕೂಟದಲ್ಲಿ ಮೈಸೂರಿನ ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಜೀವಾಂಶ್ 2 ಮತ್ತು ರುತ್ವಾ 1 ಚಿನ್ನದ ಪದಕ, ಸಾನ್ವಿ 1 ಬೆಳ್ಳಿ ಪದಕ ಪಡೆದು ಮೈಸೂರಿನ ಕೀರ್ತಿ ಪತಾಕೆಯನ್ನು ಮೆರೆದಿದ್ದಾರೆ.
ಒಡಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಅಕ್ಟೋಬರ್ 11 ರಿಂದ 14 ರವರೆಗೆ ನಡೆದ ಸಿಬಿಎಸ್ಸಿ ರಾಷ್ಟ್ರೀಯ ಮಟ್ಟದ ಈಜು ಸ್ಫರ್ಧೆಯಲ್ಲಿ ಮೈಸೂರಿನ ಜೆ.ಪಿ.ನಗರ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದ ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್ ನಲ್ಲಿ ತರಬೇತಿ ಪಡೆಯುತ್ತಿರುವ ಮೂರು ಸ್ಪರ್ಧಿಗಳು 3 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಪಡೆದು ಮಿಂಚಿದ್ದಾರೆ.
ಸಿಬಿಎಸ್ಸಿಯ ಅಂತಿಮ ಮಟ್ಟದ ಕ್ರೀಡಾಸ್ಪರ್ಧೆ ಇದಾಗಿದ್ದು, ದುಬೈ, ಒಮಾನ್ ಹೀಗೆ ವಿವಿಧ ದೇಶಗಳು ಸೇರಿದಂತೆ 500ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ವಿಶೇಷ
ಚಿನ್ನ ಗೆದ್ದ ಚಿಣ್ಣರು:
ಜೀವಾಂಶ್ : ಮೈಸೂರಿನ ಜೆ.ಪಿ.ನಗರದ ಡಿಎವಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಸುಬ್ರಹ್ಮಣ್ಯ ಜೀವಾಂಶ್
100 ಮೀ. ಬಟರ್ ಫ್ಲೈ ನಲ್ಲಿ ಚಿನ್ನ, 200 ಮೀ. ಬಟರ್ ಫ್ಲೈ ನಲ್ಲಿ ಚಿನ್ನ , 200 ಮೀ. ವೈಯಕ್ತಿಕ ಮೆಡ್ಲಿಯಲ್ಲಿ ಬೆಳ್ಳಿ ಪದಕ ಪಡೆಯುವುದರೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ರುತ್ವಾ: ಸೇಂಟ್ ಥಾಮಸ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ರುತ್ವಾ 50 ಮೀ. ಬಟರ್ ಫ್ಲೈ ನಲ್ಲಿ ಚಿನ್ನ, 100 ಮೀ. ಫ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಸಾನ್ವಿ : ಡಿಎವಿ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಸಾನ್ವಿ 200 ಮೀ. ವೈಯಕ್ತಿಕ ಮೆಡ್ಲಿಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಈ ಕ್ರೀಡಾಪಟುಗಳ ರಾಷ್ಟ್ರೀಯ ಮಟ್ಟದ ಸಾಧನೆಯು ಸಂತೋಷ ತಂದಿದ್ದು, ತರಬೇತಿ ಜೊತೆಗೆ ಸ್ಪರ್ಧಿಗಳ ಕಠಿಣ ಪರಿಶ್ರಮ, ಸಮಯ ಪಾಲನೆ ಹಾಗೂ ಪೋಷಕರ ಪ್ರೋತ್ಸಾಹವೂ ಇದಕ್ಕೆಲ್ಲಾ ಮುಖ್ಯ ಕಾರಣ ಎಂದು ಜಿಎಸ್ಎ ಮುಖ್ಯ ತರಬೇತುದಾರ ಪವನ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಜಿಎಸ್ಎ ತಂಡ ಅಭಿನಂದಿಸಿದೆ.
Key words: National, Swimming Competition, Mysore, gold medal, wins