ರಾಷ್ಟ್ರೀಯ ಶಿಕ್ಷಣ ನೀತಿಯು ಗುಣಮಟ್ಟದ ಕಲಿಕೆಗೆ ಆದ್ಯತೆ ನೀಡಲಿದೆ : ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು, ಸೆಪ್ಟೆಂಬರ್,19,2020(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿಯು ಮಕ್ಕಳನ್ನು ಕಲಿಕೆಗೆ ಉತ್ತೇಜಿಸುವುದರ ಜೊತೆಗೆ ಬಹು ವಿಷಯ  ಬೋಧನೆ, ಗುಣಮಟ್ಟದ ಕಲಿಕೆಗೂ ಆದ್ಯತೆ ನೀಡಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್  ಅಭಿಪ್ರಾಯ ವ್ಯಕ್ತಪಡಿಸಿದರು.

jk-logo-justkannada-logo

ಮೈಸೂರು ವಿವಿ ವತಿಯಿಂದ ವಿಜ್ಞಾನಭವನದಲ್ಲಿ ಶನಿವಾರ ಆಯೋಜಿಸಿದ್ದ ‘’ ರಾಷ್ಟ್ರೀಯ ಶಿಕ್ಷಣ ನೀತಿ: 2020 ಒಂದು ಅವಲೋಕನ’’  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಜೀವನ ಕಲೆ, ಬೋಧನೆಗೆ ಒತ್ತು ನೀಡಿದ್ದು, 21ನೇ ಶತಮಾನಕ್ಕೆ ಅಗತ್ಯ ಹೊಸ ಕಲಿಕೆಗಳಿಗೆ ಅವಕಾಶ ನೀಡಲಿದೆ. ಜೀವನವನ್ನು ಸಮರ್ಥವಾಗಿ ಎದುರಿಸುವ ಕೌಶಲಗಳ ಬೋಧನೆಯೂ ಜಾರಿಗೊಳ್ಳಲಿದೆ. ಅಷ್ಟೇ ಅಲ್ಲದೆ, ಕ್ರೀಡೆ, ವೃತ್ತಿಪರ ಕಲೆ, ವಾಣಿಜ್ಯ, ವಿಜ್ಞಾನದಂಥಹ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

National-Education-Policy-prioritize-quality-learning-Prof.G.Hemant Kumar

ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್.ಎ.ರಂಗನಾಥ್ ಅವರು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವ ಪ್ರಾಯೋಗಿಕ ತರಬೇತಿಗೆ ಅನುವು ಮಾಡಿಕೊಡಲಿದೆ.  5+3+3+4 ಮಾದರಿಯಲ್ಲಿ ಶಿಕ್ಷಣ ನೀಡಲು ಮುಂದಾಗಿದ್ದು, ಪ್ರಾಥಮಿಕ ಶಿಕ್ಷಣದ ವ್ಯಾಖ್ಯಾನ ಬದಲಾಯಿಸಲಾಗಿದೆ. 2025ರ ಹೊತ್ತಿಗೆ ಕನಿಷ್ಠ ಶೇ.50ರಷ್ಟು ಮಕ್ಕಳು ವೃತ್ತಿಪರವಾಗಿ ತರಬೇತಿ ಹೊಂದುವಂತೆ ಈ ನೀತಿಯಿಂದ ಸಾಧ್ಯವಿದೆ ಎಂದರು.

ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯು ಇನ್ನು ವಿದ್ಯುನ್ಮಾನ ತಂತ್ರಜ್ಞಾನದಲ್ಲಿ ದಾಖಲಾಗಿರಲಿದೆ. ಶಿಕ್ಷಕರ ಬೋಧನಾ ಗುಣಮಟ್ಟವನ್ನು ಅಳೆಯಲು ಸೂಕ್ತವಾದ ಮೌಲ್ಯಮಾಪನ ಪದ್ಧತಿ ಜಾರಿಗೊಳಿಸಲು ಇದರಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

National-Education-Policy-prioritize-quality-learning-Prof.G.Hemant Kumar

ಕಾರ್ಯಕ್ರಮದಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿಗಳಾದ ಪ್ರೊ.ಎಸ್.ಎನ್.ಹೆಗ್ಡೆ, ಪ್ರೊ.ಕೆ.ಎಸ್.ರಂಗಪ್ಪ, ಗುಲ್ಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹಾದೇವ್, ವಿಜ್ಞಾನ ಭವನದ ಕಾರ್ಯಕ್ರಮ ಸಂಯೋಜಕ ಚಂದ್ರನಾಯಕ ಇತರರು ಉಪಸ್ಥಿತರಿದ್ದರು.

key words : National-Education-Policy-prioritize-quality-learning-Prof.G.Hemant Kumar