ಮೈಸೂರು,ನವೆಂಬರ್,18,2020(www.justkannada.in) : ರಾಷ್ಟ್ರ ಮಟ್ಟದ ವಿಜ್ಞಾನ್ ಪ್ರಸಾರ ವತಿಯಿಂದ ಆಯೋಜಿಸಿರುವ 10ನೇ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವಕ್ಕೆ ಮೈಸೂರಿನ ಯುವಕ ಎನ್.ಶಿವಮೂರ್ತಿ ನಿರ್ಮಿಸಿರುವ ‘ ಬಯೋ ಡೈವರ್‌ಸಿಟಿ ಆಫ್ ತ್ರಿಪುರ (ತ್ರಿಪುರದ ಜೀವ ವೈವಿದ್ಯತೆ)’ ಕಿರು ಸಾಕ್ಷ್ಯಚಿತ್ರ ಆಯ್ಕೆಯಾಗಿದೆ.
ಮಾನಸ ಗಂಗೋತ್ರಿಯ ಇಎಂಆರ್ ಸಿ ಯಲ್ಲಿ ಕಿರಿಯ ಸಂಶೋಧನಾ ಅಧಿಕಾರಿ ಆ್ಯರನ್ ಅವರ ಮಾರ್ಗದರ್ಶನದಲ್ಲಿ ಶಿವಮೂರ್ತಿ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದರು. 8 ನಿಮಿಷದ ಈ ಸಾಕ್ಷ್ಯಚಿತ್ರದಲ್ಲಿ ತ್ರಿಪುರದ ಜೀವ ವೈವಿದ್ಯತೆ ಕುರಿತು ತಿಳಿಸಲಾಗಿದೆ.
ವಿಜ್ಞಾನ್ ಪ್ರಸಾರ್ ಹಾಗೂ ತ್ರಿಪುರ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನೋಲಜಿ ಸಹಯೋಗದಲ್ಲಿ ತ್ರಿಪುರದ ರಾಜಧಾನಿ ಅರ್ಗತ್ತಲಾದಲ್ಲಿ ನಡೆಯುವ ವರ್ಚುವಲ್ ಮೂಲಕ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವದಲ್ಲಿ ಕಿರುಚಿತ್ರ ಪ್ರದರ್ಶನಗೊಳ್ಳಲಿದ್ದು, ಡೇಸ್ಟಿನೇಷನ್ ಆಫ್ ತ್ರಿಪುರ ಕ್ಯಾಟಗರಿ ವಿಭಾಗದಲ್ಲಿ ಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನದೊಳಗೆ ಈ ಸಾಕ್ಷ್ಯಚಿತ್ರವು ಸ್ಥಾನಗಳಿಸಿದೆ.
ಈ ಕುರಿತು ಎನ್.ಶಿವಮೂರ್ತಿ ಸಂತೋಷ ಹಂಚಿಕೊಂಡಿದ್ದು, ನಾನು ಮೊದಲ ಬಾರಿಗೆ ಮೊದಲ ಪ್ರಯತ್ನದಲ್ಲಿ ನಿರ್ಮಿಸಿದ ಸಾಕ್ಷ್ಯಚಿತ್ರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
key words : National-Science-Film-Festival-Short-documentary-selection-young-man-Mysore