ಆಂಬುಲೆನ್ಸ್ ಗೆ ದಾರಿಬಿಡದ ಕಾರು ಚಾಲಕನಿಗೆ 11 ಸಾವಿರ ರೂ. ದಂಡ

ಮೈಸೂರು, ಸೆಪ್ಟೆಂಬರ್,07,2020(www.justkannada.in) : ಹೃದಯಾಘಾತಕ್ಕೆ ಒಳಗಾಗಿದ್ದ 85 ವರ್ಷದ ವೃದ್ಧನನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಗೆ ದಾರಿ ಮಾಡಿಕೊಡದ ಕಾರು ಚಾಲಕನಿಗೆ 11 ಸಾವಿರ ದಂಡ ವಿಧಿಸಲಾಗಿದೆ.

jk-logo-justkannada-logo

ಆಗಸ್ಟ್ 22 ರಂದು ಚಿಕ್ಕಮಗಳೂರು ನಿವಾಸಿ ಚಂದ್ರಶೇಖರ್ ಆಚಾರ್ಯ (85) ಅವರಿಗೆ ಹೃದಯಾಘಾತವಾಗಿದ್ದು, ಆಂಬುಲೆನ್ಸ್‌ನಲ್ಲಿ ಮೈಸೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳುತ್ತಿದ್ದರು. ಚಿಕ್ಕಮಗಳೂರಿನಿಂದ ಹೊರತು ಚಾಲಕ ಕಿಶೋರ್ ರಾತ್ರಿ 8.30 ರ ಸುಮಾರಿಗೆ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಬೆಳವಾಡಿ ಜಂಕ್ಷನ್‌ಗೆ ತಲುಪಿದರು. ಆದರೆ, ಈ ವೇಳೆ ಕಾರು ಚಾಲಕ ಜಯಂತ್ ಎನ್ನುವವರು ಆಂಬುಲೆನ್ಸ್ ಗೆ ದಾರಿ ಮಾಡಿಕೊಡದ ಕಾರಣ ಅಂಬುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದರು.

Unattended-ambulance-car driver-11 Thousand Rs.-penalty

ಈ ಕುರಿತು ಮೈಸೂರು ನಗರ ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ಎಸ್.ಎನ್.ಸಂದೇಶ್ ಕುಮಾರ್ ಮಾತನಾಡಿ, ತುರ್ತು ಪರಿಸ್ಥಿತಿಗೆ ಹಾಜರಾಗುವ ವಾಹನಕ್ಕೆ ದಾರಿ ನೀಡದ ಕಾರಣ ಚಾಲಕ ಜಯಂತ್(ಹಾಸನ ನಿವಾಸಿ) 10,000 ರೂ. ಮತ್ತು ಅಪಘಾತಕಾರಿಯಾಗಿ ವಾಹನ ಚಲಾಯಿಸಿದ್ದಕ್ಕಾಗಿ ಹೆಚ್ಚುವರಿಯಾಗಿ 1,000 ರೂ. ದಂಡವನ್ನು “2019 ರ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಡಿ  ವಿಧಿಸಲಾಗಿದೆ” ಎಂದು ಹೇಳಿದರು.

ಆಂಬ್ಯುಲೆನ್ಸ್‌ನ ಸೈರನ್ ಕೇಳಿಯೂ, ಅದಲ್ಲದೇ, ಚಾಲಕ ಹಾರನ್ ಮಾಡಿದರೂ ಕೂಡ ಜಯಂತ್ ಕಾರನ್ನು ಪಕ್ಕಕ್ಕೆ ಸರಿಸಿ ಅವಕಾಶ ಅಂಬುಲೆನ್ಸ್ ತೆರಳಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಅದಲ್ಲದೇ, ಹೂಟಗಳ್ಳಿ ಬಳಿ ಮಾರ್ಗವನ್ನು ನಿರ್ಬಂಧಿಸಿದ ಜಯಂತ್ ನಿಗೆ ಅಂಬುಲೆನ್ಸ್ ಚಾಲಕ ಕಿಶೋರ್  ದಾರಿ ಮಾಡಿಕೊಡುವಂತೆ ಒತ್ತಾಯಿಸಿದರು ಪ್ರಯೋಜನವಾಗಿರಲಿಲ್ಲ.

ಅದಲ್ಲದೇ, ರೋಗಿಯ ಸಂಬಂಧಿಕರು ಅವನನ್ನು ಬೇಡಿಕೊಂಡಾಗಲೂ ಕಾರನ್ನು ಸರಿಸಲು ಜಯಂತ್ ನಿರಾಕರಿಸಿದರು. ಈ ಸಂದರ್ಭ ಸುಮಾರು  15 ನಿಮಿಷಗಳ ಕಾಲ ವಾಗ್ವಾದ ನಡೆದಿದ್ದು, ಆಂಬ್ಯುಲೆನ್ಸ್ ಆಸ್ಪತ್ರೆಗೆ ತಲುಪುವ ಹೊತ್ತಿಗೆ ವೃದ್ಧರು ಮೃತಪಟ್ಟಿದ್ದರು. ವೈದ್ಯರು ರೋಗಿಯನ್ನು ತಡವಾಗಿ ಕರೆದುಕೊಂಡು ಬಂದ ಕಾರಣ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲವೆಂದು ತಿಳಿಸಿದ್ದು, ಇದಕ್ಕೆ ಜಯಂತ್ ನ ವರ್ತನೆಯೇ ಕಾರಣ ಹೀಗಾಗಿ, ಅವರಿಗೆ ದಂಡ ವಿಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

key words : Unattended-ambulance-car driver-11 Thousand Rs.-penalty