ಬೆಂಗಳೂರು,ಮಾರ್ಚ್,21,2022(www.justkannada.in): ಉಕ್ರೇನ್ ನಲ್ಲಿ ರಷ್ಯಾ ದಾಳಿಯಿಂದ ಮೃತಪಟ್ಟ ವಿದ್ಯಾರ್ಥಿ ನವೀನ್ ಮೃತದೇಹವನ್ನ ಅವರ ಸ್ವಗ್ರಾಮಕ್ಕೆ ತಂದಿದ್ದರಲ್ಲಿ ಬಿಜೆಪಿ ಸಾಧನೆ ಏನು ಇಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಟೀಕಿಸಿದ್ದಾರೆ.
20 ದಿನಗಳ ಬಳಿಕ ಉಕ್ರೇನ್ ನಿಂದ ನವೀನ್ ಮೃತದೇಹ ಅವರ ಸ್ವಗ್ರಾಮ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮಕ್ಕೆ ಆಗಮಿಸಿದ್ದು ಇಂದು ಹಲವು ಗಣ್ಯರು ಸೇರಿ ಸ್ನೇಹಿತರು ಕುಟುಂಬಸ್ಥರು ಅಂತಿಮ ದರ್ಶನ ಪಡೆದರು.
ನವೀನ್ ಮೃತದೇಹ ವಾಪಸ್ ತಂದಿರುವ ಕುರಿತು ಪ್ರತಿಕ್ರಿಯಿಸಿದ ಬಿ.ಕೆ ಹರಿಪ್ರಸಾದ್, ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ನವೀನ್ ಸಾವನ್ನಪ್ಪಿ 22 ದಿನ ಕಳೆದಿದೆ. ಪೋಷಕರ ಆಕ್ರಂದನ ಅಲ್ಲಿನಿಂದ ಅರಣ್ಯರೋಧನವಾಗಿತ್ತು. ಯುದ್ಧದ ವೇಳೆಯಲ್ಲಿ ಉಕ್ರೇನ್ ಒಳಗೆ ಯಾರೂ ಹೋಗಿರಲಿಲ್ಲ. ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳೇ ಸ್ವತಹ ತಮ್ಮ ರಿಸ್ಕ್ ತಗೊಂಡು ಹೊರ ಬಂದಿದ್ದಾರೆ ಎಂದು ತಿಳಿಸಿದರು.
ಹಾಗೆಯೇ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಗೆ ಏಕೆ ಹೋಗುವಂತೆ ಆಗಿದೆ..? ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನ ಕೈಗೆ ಎಟುಕುವ ಹಾಗೆ ನೀಡಬಹುದಲ್ಲವೇ ಎಂದು ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದರು.
Key words: naveen-deadbody-BK Hariprasad