ನಕ್ಸಲರ ಅಟ್ಟಹಾಸ: ಐಇಡಿ ಸ್ಪೋಟದಿಂದ 9 ಯೋಧರು ಹುತಾತ್ಮ

ಛತ್ತೀಸ್ ಗಢ,ಜನವರಿ,6,2025 (www.justkannada.in):  ಛತ್ತೀಸ್‌ ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು,   ಬಿಜಾಪುರ ಪ್ರದೇಶದಲ್ಲಿ ಐಇಡಿ ಸ್ಪೋಟಗೊಂಡು 9 ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದೆ.

ನಕ್ಸಲೀಯರು ಸೈನಿಕರ ಶಸ್ತ್ರಸಜ್ಜಿತ ವಾಹನವನ್ನು ಸ್ಫೋಟಿಸಿದ್ದಾರೆ. ಸೇನಾ ವಾಹನ ಗುರಿಯಾಗಿಸಿಕೊಂಡು ಐಇಡಿ ಸ್ಪೋಟಿಸಿದ್ದು  8 ಮಂದಿ ಡಿಆರ್ ಜಿ ಯೋಧರು ಮತ್ತು ಡಿಆರ್ ಜಿ ವಾಹನ ಚಾಲಕ ಹುತಾತ್ಮರಾಗಿದ್ದಾರೆ ಎನ್ನಲಾಗಿದೆ.

ನಿನ್ನೆ ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಿಂದ ಹಿಂತಿರುಗುತ್ತಿದ್ದಾಗ ಕನಿಷ್ಠ 20 ಯೋಧ ಈ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಅಬುಜ್ಮದ್ ಪ್ರದೇಶದಲ್ಲಿ ಸೈನಿಕರು ಪ್ರಮುಖ ಕಾರ್ಯಾಚರಣೆ ನಡೆಸಿದ್ದರು. ಪ್ರದೇಶವನ್ನು ಶೋಧಿಸಿದ ನಂತರ, ಪಡೆ ತನ್ನ ಶಿಬಿರಕ್ಕೆ ಹಿಂತಿರುಗುತ್ತಿತ್ತು. ಸೈನಿಕರನ್ನು ಹಿಂದಕ್ಕೆ ಕರೆದೊಯ್ಯಲು ಬೊಲೆರೊ ಪಿಕಪ್ ವಾಹನವನ್ನು ಕಳುಹಿಸಲಾಗಿದೆ. ಈ ವಾಹನವನ್ನು ನಕ್ಸಲೀಯರು ಗುರಿಯಾಗಿಸಿಕೊಂಡು ಸ್ಫೋಟಿಸಿದ್ದಾರೆ.

Key words: Naxal attack,  9 soldiers, martyred, IED blast