ನವದೆಹಲಿ,ನ,11,2019(www.justkannada.in): ಮಹಾರಾಷ್ಟ್ರ ರಾಜಕೀಯದಲ್ಲಿ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಮತ್ತು ಬಿಜೆಪಿ ನಡುವೆ ಅಸಮಾಧಾನ ತಾರಕಕ್ಕೇರುತ್ತಿದ್ದಂತೆ ಇತ್ತ ಶಿವಸೇನೆ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಿಂದ ಹೊರ ಬಂದಿದೆ.
ಪ್ರಧಾನಿ ಮೋದಿ ಸಂಪುಟದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರಾಗಿದ್ದ ಶಿವಸೇನಾ ಸಂಸದ ಅರವಿಂದ್ ಸಾವಂತ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರವಿಂದ್ ಸಾವಂತ್, ಎನ್ ಡಿಎ ಜತೆಗೆ ಶಿವಸೇನಾ ಮೈತ್ರಿ ಅಂತ್ಯವಾಗಿದೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಪ್ರಧಾನಿ ಮೋದಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದಿದ್ದಾರೆ.
ಬಿಜೆಪಿ ನಂಬಿಕೆ ದ್ರೋಹ ಮಾಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಒಪ್ಪಂದ ಮುರಿದಿದೆ. ಉದ್ಧವ್ ಠಾಕ್ರೆ ಏನು ಹೇಳ್ತಾರೋ ಅದನ್ನೇ ಮಾಡುತ್ತಾರೆ. ಆದರೆ ಬಿಜೆಪಿ ಅವರನ್ನ ಸುಳ್ಳೆಂದು ಸಾಭೀತು ಪಡಿಸಲು ಹೊರಟಿದೆ. ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಯಾಗಲಿದೆ ಎಂದು ಅರವಿಂದ್ ಸಾವಂತ್ ತಿಳಿಸಿದ್ದಾರೆ.
Key words: NDA alliance-Shiv Sena -Arvind Sawant- resigns – Union Minister