ಮೈಸೂರು, ಅ.08, 2021 : (www.justkannada.in news ) ಇಂದು ವಿಶ್ವ ಮೊಟ್ಟೆ ದಿನ. ‘ ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ’ ಎಂದೇ ಮೊಟ್ಟೆಯನ್ನು ಪ್ರಮೋಟ್ ಮಾಡಲಾಗುತ್ತಿದೆ. ಕಾರಣ, ಮೊಟ್ಟೆ ಮನುಷ್ಯನಿಗೆ ಪರಿಪೂರ್ಣ ಆಹಾರ. ಅದರಲ್ಲಿ ಸಿ ವಿಟಮಿನ್ ಸೇರಿದಂತೆ ಹಲವು ಪೋಷಕಾಂಶಗಳು ದೊರೆಯುತ್ತವೆ.
ಮೊಟ್ಟ ದಿನದ ವಿಶೇಷವಾಗಿ ಇಂದು ನ್ಯಾಷನಲ್ ಎಗ್ ಕೋ ಅರ್ಡಿನೇಷನ್ ಕಮಿಟಿ (ಎನ್‌ಇಸಿಸಿ) ಮೈಸೂರು ವಲಯ ವತಿಯಿಂದ, ಮಾನಸ ಗಂಗೋತ್ರಿಯ ಕುಕ್ಕರಹಳ್ಳಿ ಕೆರೆ ಬಳಿ ಸಾರ್ವಜನಿಕರಿಗೆ ಬೆಳಿಗ್ಗೆ 7ರಿಂದ 9 ಗಂಟೆವರೆಗೆ ಉಚಿತವಾಗಿ ಎರಡೆರಡು ಬೇಸಿಯಿದ ಮೊಟ್ಟೆ ವಿತರಿಸಲಾಯಿತು.
ಎನ್ಇಸಿಸಿ ಮೈಸೂರು ವಲಯ ಅಧ್ಯಕ್ಷ ಸತೀಶ್ ಬಾಬು ಮಾತನಾಡಿ, ಅಕ್ಟೋಬರ್ 2ನೇ ಶುಕ್ರವಾರವನ್ನು ವಿಶ್ವ ಮೊಟ್ಟೆ ದಿನವನ್ನಾಗಿ ಆಚರಿಸಲಾಗುತ್ತದೆ. ಆ ಮೂಲಕ ಮೊಟ್ಟೆಯಲ್ಲಿನ ಪೋಷಕಾಂಶದ ಬಗ್ಗೆ ಅರಿವು ಮೂಡಿಸಲು ಬೇಯಿಸಿದ ಮೊಟ್ಟೆಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.
key words : necc-egg-day-free-distribution-mysore