“ನಮ್ಮ ಕಾನೂನು ವ್ಯವಸ್ಥೆಯನ್ನು ‘ಭಾರತೀಯ’ಗೊಳಿಸುವುದು ಈಗಿನ ಅಗತ್ಯವಾಗಿದೆ : ಸಿಜೆಐ

 

ನವ ದೆಹಲಿ, ಸೆಪ್ಟೆಂಬರ್ ೨೧, ೨೦೨೧ (www.justkannada.in): ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಗಳು ಬಹಳ ಸುದೀರ್ಘ, ದುಬಾರಿ ಹಾಗೂ ಆಂಗ್ಲ ಭಾಷೆಯಲ್ಲಿದ್ದು, ನಮ್ಮ ಸಮಾಜ ಹಾಗೂ ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗಲು ಅನುಕೂಲವಾಗುವ ಹಾಗೆ ಬದಲಾಯಿಸುವ ಅಗತ್ಯವಿದೆ ಎನ್ನುವುದು ಸಾಮಾನ್ಯ ಭಾರತೀಯನ ಅನಿಸಿಕೆ ಎಂದು ಭಾರತದ ಮುಖ್ಯ ನ್ಯಾಯಾಮೂರ್ತಿ ಶ್ರೀ ಎನ್.ವಿ. ರಮಣ ಅವರು ಅಭಿಪ್ರಾಯಿಸಿದ್ದಾರೆ.

ಮೇಲಾಗಿ ನ್ಯಾಯಾಲಯದ ತೀರ್ಪುಗಳು ಬಹಳ ಉದ್ದ ಅಥವಾ ತಾಂತ್ರಿಕ ಭಾಷೆಯಿಂದ ಕೂಡಿರುತ್ತವೆ ಅಥವಾ ಎರಡರ ಮಿಶ್ರಣವಾಗಿರುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಹಾಗಾಗಿ ನ್ಯಾಯಾಲಯಗಳು ವಸಾಹತುಶಾಹಿಯ ಜಡತ್ವದಿಂದ ಎಚ್ಚೆತ್ತುಕೊಂಡು, ಭಾರತೀಯ ಸಮಾಜ ಎದುರಿಸುತ್ತಿರುವ ಪ್ರಾಯೋಗಿಕ ವಾಸ್ತವಗಳ ಕಡೆ ಗಮನ ನೀಡುವ ಕಾಲ ಸನಿಹವಾಗಿದೆ.

“ನಮ್ಮ ಕಾನೂನು ವ್ಯವಸ್ಥೆಯನ್ನು ‘ಭಾರತೀಯ’ಗೊಳಿಸುವುದು ಈಗಿನ ಅಗತ್ಯವಾಗಿದೆ. ತೀಪು ನೀಡುವ ನಿಯಮಗಳು ಹಾಗೂ ವಿಧಾನಗಳನ್ನು ಸರಳೀಕರಣಗೊಳಿಸಬೇಕು. ನಮ್ಮ ದೇಶದ ಸಾಮಾನ್ಯ, ಬಡ ಹಾಗೂ ಗ್ರಾಮೀಣ ಭಾಗದ ಜನರಲ್ಲಿ, ನ್ಯಾಯಮೂರ್ತಿಗಳು ಅಥವಾ ನ್ಯಾಯಾಲಯಗಳೆಂದರೆ ಇರುವ ಭಯ ಹೋಗುವಂತಾಗಬೇಕು,” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಅವರು ತಿಳಿಸಿದ್ದಾರೆ.

ಆದರೆ ಪ್ರಸ್ತುತ ನಮ್ಮ ದೇಶದ ನಾಗರಿಕರಿಗೆ ನ್ಯಾಯಕ್ಕಾಗಿ ನ್ಯಾಯಾಲಯಗಳಿಗೆ ಹೋಗಲು ಅನೇಕ ಅಡೆತಡೆಗಳಿವೆ. “ಭಾರತದ ಸಂಕೀರ್ಣತೆಗಳೊಂದಿಗೆ ನ್ಯಾಯಾಲಯಗಳ ಕಾರ್ಯನಿರ್ವಹಣೆ ಹಾಗೂ ಶೈಲಿ ಸರಿಹೊಂದುವಂತಿಲ್ಲ. ನಮ್ಮ ನ್ಯಾಯಾಲಯಗಳ ವ್ಯವಸ್ಥೆಗಳು, ಅಭ್ಯಾಸಗಳು ಹಾಗೂ ನಿಯಮಗಳು ವಿದೇಶಗಳಲ್ಲಿರುವಂತಿವೆ ಹಾಗೂ ನಮ್ಮ ವಸಾಹತುಶಾಹಿ ದಿನಗಳಲ್ಲಿ ಇರುವಂತೆಯೇ ಮುಂದುವರಿದುಕೊಂಡು ಬಂದಿವೆ. ನಮ್ಮ ದೇಶದ ವಾಸ್ತವಾಂಗಳಿಗೆ ಸರಿಹೊಂದುವಂತಿಲ್ಲ. “ಭಾರತೀಯಗೊಳಿಸುವಿಕೆ ಎಂದರೆ ನಮ್ಮ ಸಮಾಜದ ವಾಸ್ತವತೆಯನ್ನು ಅರ್ಥಮಾಡಿಕೊಂಡು ಅದನ್ನು ಅಳವಡಿಸಿಕೊಳ್ಳುವುದು ಹಾಗೂ ನಮ್ಮ ತೀರ್ಪು ವ್ಯವಸ್ಥೆಗಳನ್ನು ಸ್ಥಳೀಯಗೊಳಿಸುವುದಾಗಿದೆ.

ಇಂಟರ್ ನೆಟ್ ಕೃಪೆ:

ಉದಾಹರಣೆಗೆ, ಕೌಟುಂಬಿಕ ವಿವಾದಕ್ಕೆ ಸಂಬಂಧಪಟ್ಟ ಪ್ರಕರಣವನ್ನು ಎದುರಿಸುತ್ತಿರುವಂತಹ ಒಂದು ಗ್ರಾಮೀಣ ಕುಟುಂಬಕ್ಕೆ ನ್ಯಾಯಾಲಯದಲ್ಲಿ ಸ್ಥಾನವಿಲ್ಲದಿರುವಂತಹ ಭಾವನೆ ಮೂಡಿಸುತ್ತದೆ. ವಾದ-ವಿವಾದಗಳು ಬಹುಪಾಲು ಆಂಗ್ಲ ಭಾಷೆಯಲ್ಲಿರುವ ಕಾರಣದಿಂದಾಗಿ, ಅವರಿಗೆ ಏನೂ ಅರ್ಥವೇ ಆಗುವುದಿಲ್ಲ. ಮೇಲಾಗಿ ಇತ್ತೀಚಿನ ದಿನಗಳಲ್ಲಿ ತೀರ್ಪುಗಳು ಬಹಳ ಉದ್ದವಾಗಿದ್ದು, ಇದರಿಂದಾಗಿ ದಾವೆದಾರರ ಕಷ್ಟವನ್ನು ಹೆಚ್ಚಿಸುತ್ತದೆ. ಒಂದು ತೀರ್ಪಿನ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ಪ್ರಕರಣದ ಎರಡೂ ಕಡೆಯವರಿಗೆ ಅನಿವಾರ್ಯವಾಗಿ ಹಣ ವ್ಯಯವಾಗುತ್ತದೆ. ನ್ಯಾಯಾಲಯಗಳು ಯಾರಿಗಾಗಿ ಕಾರ್ಯನಿರ್ವಹಿಸುತ್ತವೆ? ನ್ಯಾಯವನ್ನು ಕೋರುವಂತಹ ದಾವೆದಾರರಿಗಾಗಿಯೇ ಅಲ್ಲವೇ?, ಅಂತಿಮವಾಗಿ ಅವರೇ ಫಲಾನುಭವಗಳಲ್ಲವೇ,” ಎನ್ನುತ್ತಾರೆ ಭಾರತದ ಉನ್ನತ ನ್ಯಾಯಮೂರ್ತಿ.

“ತೀರ್ಪು ನೀಡುವ ವ್ಯವಸ್ಥೆಯನ್ನು ಸರಳೀಕರಣಗೊಳಿಸುವುದು ನಮ್ಮ ಆದ್ಯತೆಯ ಕಾಳಜಿಯಾಗಬೇಕಿದೆ. ಇದು ನಮ್ಮ ಕಾನೂನು ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ದೊರೆಯುವಿಕೆ ಹಾಗೂ ಪರಿಣಾಮಕಾರಿಯನ್ನಾಗಿಸುವಲ್ಲಿ ಬಹಳ ನಿರ್ಣಾಯಕ ಅಂಶ. ಕಾರ್ಯವಿಧಾನಗಳಲ್ಲಿರುವ ಅಡೆತಡೆಗಳು ನ್ಯಾಯ ದೊರೆಯುವಿಕೆಯನ್ನು ದುರ್ಬಲಗೊಳಿಸುತ್ತದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿಗಳು ಹಾಗೂ ವಕೀಲರು ಇಬ್ಬರೂ ಸಹ ದಾವೆದಾರರಿಗೆ ಹಾಗೂ ಇತರೆ ಭಾಗೀದಾರರಿಗೆ ಅನುಕೂಲಕರವಾದಂತಹ ಪರಿಸರವನ್ನು ಸೃಷ್ಟಿಸುವ ಅಗತ್ಯವಿದೆ ಎನ್ನುತ್ತಾರೆ.

ಪರ್ಯಾಯ ವಿವಾದ ಕಾರ್ಯವಿಧಾನಗಳು :

ಮಧ್ಯಸ್ಥಿಕೆ ಹಾಗೂ ರಾಜಿಗೊಳಿಸುವಂತಹ ಪರ್ಯಾಯ ವಿವಾದ ಕಾರ್ಯವಿಧಾನಗಳ ಅಳವಡಿಕೆಯಿಂದ, ಪ್ರಕರಣಗಳು ವರ್ಷಗಟ್ಟಲೆ ಮುಕ್ತಾಯವಾಗದೆ ಉಳಿದುಕೊಳ್ಳುವುದು, ಅನಗತ್ಯ ದಾವೆದಾರಿಕೆ ಹಾಗೂ ಸಂಪನ್ಮೂಲಗಳ ಉಳಿತಾಯವಾಗುತ್ತದೆ.

ಮುಖ್ಯ ನ್ಯಾಯಾಮೂರ್ತಿ ರಮಣ ಅವರು ಈ ಸಂದರ್ಭದಲ್ಲಿ ಯುಎಸ್‌ನ ಸವೋಚ್ಛ ನ್ಯಾಯಾಲಯದ ಹಿಂದಿನ ಮುಖ್ಯ ನ್ಯಾಯಮೂರ್ತಿ ವಾರೆನ್ ಬರ್ಗರ್ ಅವರ ಒಂದು ಹೇಳಿಕೆಯನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ಅದೇನೆಂದರೆ, “ಸಾಮಾನ್ಯರಿಗೆ ತಮ್ಮ ಪ್ರಕರಣಗಳು ಬಗೆಹರಿಯಲು ಕಪ್ಪು ನಿಲುವಂಗಿ ಧರಿಸಿರುವ ನ್ಯಾಯಮೂರ್ತಿಗಳು, ಅತ್ಯುತ್ತಮವಾಗಿ ಬಟ್ಟೆಗಳನ್ನು ಧರಿಸಿರುವ ವಕೀಲರು ಹಾಗೂ ಅತ್ಯುತ್ತಮ ಒಳಾಂಗಣ ವಿನ್ಯಾಸದಿಂದ ಕೂಡಿರುವ ನ್ಯಾಯಾಲಯಗಳನ್ನು ನಿರೀಕ್ಷಿಸುತ್ತಾರೆ ಎನ್ನುವುದು ತಪ್ಪು. ಸಮಸ್ಯೆಗಳು, ನೋವಿರುವ ಜನರಿಗೆ ಬೇಕಾಗಿರುವುದು ಸಮಸ್ಯೆಗೆ ಪರಿಷ್ಕಾರ ಹಾಗೂ ಅತೀ ಶೀಘ್ರವಾಗಿ, ಕೈಗೆಟಕುವ ವೆಚ್ಚದಲ್ಲಿ ದೊರೆಯುವಂತಾಗಬೇಕು,” ಎನ್ನುತ್ತಾರೆ ಭಾರತದ ಮುಖ್ಯ ನ್ಯಾಯಮೂರ್ತಿ.

ಭಾರತದ ಸರ್ವೋಚ್ಛ ನ್ಯಾಯಾಲಯದ ದಿವಂಗತ ನ್ಯಾಯಮೂರ್ತಿ ಶ್ರೀ ಎಂ.ಎಮ. ಶಾಂತನಗೌಡರ್ ಅವರ ಸ್ಮರಣಾರ್ಥವಾಗಿ ಕರ್ನಾಟಕ ಬಾರ್ ಕೌನ್ಸಿಲ್ ವತಿಯಿಂದ ಏರ್ಪಡಿಸಲಾಗಿದ್ದಂತಹ ಒಂದು ಕಾರ್ಯಕ್ರಮದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ಎನ್.ವಿ. ರಮಣ ಅವರು ಮಾತನಾಡುತ್ತಾ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿ ಮೂಲ: ದಿ ಹಿಂದೂ

key words : need-to-indianise-legal-system-to-suit-our-society-CJI